ಭಾರತದ ಟಾಪ್ 10 ಮೈಲೇಜ್ ಕಾರುಗಳು

By Nagaraja

ಭಾರತೀಯ ವಾಹನ ಖರೀದಿಗಾರನ ಮನೋಸ್ಥಿತಿಯನ್ನು ಎಲ್ಲರು ಬಲ್ಲರು. ನೂತನ ಕಾರು ಕೊಳ್ಳುವಾಗ ಬೆಲೆಯ ಬಳಿಕ ಮೈಲೇಜ್ ಎಷ್ಟು ಕೊಡುತ್ತದೆ ಎಂಬುದನ್ನು ತಿಳಿಯಲು ಬಯಸುತ್ತಾರೆ.

ಯಾವುದೇ ಸಂಸ್ಥೆಯ ಎಷ್ಟೇ ಗುಣಮಟ್ಟದ ಯಾರೇ ಆಗಿರಬಹುದು ಮೈಲೇಜ್ ತಿಳಿದುಕೊಂಡ ಬಳಿಕವಷ್ಟೇ ಕಾರು ಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಇದು ದೇಶದ ಕಾರು ಖರೀದಿಗಾರರ ಸಹಜ ಮನೋಸ್ಥಿತಿಯನ್ನು ತೋರ್ಪಡಿಸುತ್ತದೆ. ಪ್ರಸ್ತುತ ಲೇಖನದಲ್ಲಿ ದೇಶದ ಅಗ್ರ 10 ಮೈಲೇಜ್ ಕಾರುಗಳ ಬಗ್ಗೆ ವಿವರವನ್ನು ಕೊಡಲಿದ್ದೇವೆ.

10. ಷೆವರ್ಲೆ ಬೀಟ್

10. ಷೆವರ್ಲೆ ಬೀಟ್

ಅಮೆರಿಕ ಜನರಲ್ ಮೋಟಾರ್ಸ್ ಸಂಸ್ಥೆಯ ಜನಪ್ರಿಯ ಮಾದರಿಯಾಗಿರುವ ಷೆವರ್ಲೆ ಬೀಟ್ ದೇಶದ ಸಣ್ಣ ಕಾರು ವಿಭಾಗದಲ್ಲಿ ಮಾರಾಟದಲ್ಲಿದೆ. ಇದರಲ್ಲಿರುವ 936 ಸಿಸಿ ತ್ರಿ ಸಿಲಿಂಡರ್ ಎಂಜಿನ್ 150 ಎನ್ ಎಂ ತಿರುಗುಬಲದಲ್ಲಿ 58 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಷೆವರ್ಲೆ ಬೀಟ್ - ಮೈಲೇಜ್: 25.44km/l

ಷೆವರ್ಲೆ ಬೀಟ್ - ಮೈಲೇಜ್: 25.44km/l

ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಷೆವರ್ಲೆ ಬೀಟ್ ಡೀಸೆಲ್ ಆವೃತ್ತಿಯು ಪ್ರತಿ ಲೀಟರ್ ಗೆ 25.44 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 5.05 ಲಕ್ಷ ರು.ಗಳಾಗಿದೆ.

09. ಹೋಂಡಾ ಅಮೇಜ್

09. ಹೋಂಡಾ ಅಮೇಜ್

ಬಿಡುಗಡೆ ವೇಳೆ ದೇಶದ ನಂ.1 ಮೈಲೇಜ್ ಕಾರೆಂಬ ಗೌರವಕ್ಕೆ ಪಾತ್ರವಾಗಿರುವ ಹೋಂಡಾ ಅಮೇಜ್ 1.5 ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 98 ಅಶ್ವಶಕ್ತಿಯನ್ನು ನೀಡುತ್ತದೆ.

ಹೋಂಡಾ ಅಮೇಜ್ - ಮೈಲೇಜ್: 25.8km/l

ಹೋಂಡಾ ಅಮೇಜ್ - ಮೈಲೇಜ್: 25.8km/l

ಇಂಧನ ಕ್ಷಮತೆಯಲ್ಲೂ ಪರಿಣಾಮಕಾರಿ ಎನಿಸಿಕೊಂಡಿರುವ ಹೋಂಡಾ ಅಮೇಜ್ ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್ ಗೆ 25.8 ಕೀ.ಮೀ. ಮೈಲೇಜ್ ನೀಡಲಿದೆ. ಅಮೇಜ್ ಡೀಸೆಲ್ ಕಾರಿನ ಬೆಲೆಯು 6.42 ಲಕ್ಷ ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸಲಿದೆ.

08. ಫೋರ್ಡ್ ಫಿಗೊ

08. ಫೋರ್ಡ್ ಫಿಗೊ

ದೇಶದ ಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವ ಹೊಸ ಫೋರ್ಡ್ ಫಿಗೊ ಕಾರಿನಲ್ಲಿರುವ 1.5 ಲೀಟರ್ ಎಂಜಿನ್ 215 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಫೋರ್ಡ್ ಫಿಗೊ - ಮೈಲೇಜ್: 25.83km/l

ಫೋರ್ಡ್ ಫಿಗೊ - ಮೈಲೇಜ್: 25.83km/l

ವಿನ್ಯಾಸದ ಜೊತೆಗೆ ಮೈಲೇಜ್ ವಿಚಾರದಲ್ಲೂ ಯಾವುದೇ ರಾಜಿಗೂ ತಯಾರಾಗದ ನೂತನ ಫೋರ್ಡ್ ಫಿಗೊ ಪ್ರತಿ ಲೀಟರ್ ಗೆ 25.83 ಕೀ.ಮೀ. ಇಂಧನ ಕ್ಷಮತೆ ನೀಡುವಷ್ಟು ಸಕ್ಷಮವಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 6.26 ಲಕ್ಷ ರು.ಗಳಾಗಿದೆ.

08. ಫೋರ್ಡ್ ಫಿಗೊ ಆಸ್ಪೈರ್

08. ಫೋರ್ಡ್ ಫಿಗೊ ಆಸ್ಪೈರ್

ಎಂಟನೇ ಸ್ಥಾನದಲ್ಲಿ ಮಗದೊಂದು ಫೋರ್ಡ್ ಕಾರು ಗುರುತಿಸಿಕೊಂಡಿದ್ದು, ಫಿಗೊ ಆಸ್ಪೈರ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿರುವ ನೂತನ ಕಾರುಗಳಲ್ಲಿ ಒಂದಾಗಿದೆ. ಫಿಗೊ ಹ್ಯಾಚ್ ಬ್ಯಾಕ್ ಗೆ ಸಮಾನವಾಗಿ ಈ ಸಬ್ ಫೋರ್ ಮೀಟರ್ ಕಾರಿನಲ್ಲೂ 1.5 ಲೀಟರ್ ಎಂಜಿನ್ ಆಳವಡಿಸಲಾಗಿದ್ದು, 215 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಫೋರ್ಡ್ ಫಿಗೊ ಆಸ್ಪೈರ್ - ಮೈಲೇಜ್: 25.83km/l

ಫೋರ್ಡ್ ಫಿಗೊ ಆಸ್ಪೈರ್ - ಮೈಲೇಜ್: 25.83km/l

ಫಿಗೊ ಹ್ಯಾಚ್ ಬ್ಯಾಕ್ ಕಾರಿಗಿಂತಲೂ ಹೆಚ್ಚು ಭಾರತವನ್ನು ಹೊಂದಿರುವ ಹೊರತಾಗಿಯೂ ಫಿಗೊದಷ್ಟೇ 25.83 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳುವಲ್ಲಿ ಈ ಕಾಂಪಾಕ್ಟ್ ಸೆಡಾನ್ ಕಾರು ಯಶಸ್ವಿಯಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 6.31 ಲಕ್ಷ ರು.ಗಳಾಗಿದೆ.

07. ಹೋಂಡಾ ಸಿಟಿ

07. ಹೋಂಡಾ ಸಿಟಿ

ಬದಲಾವಣೆಯೊಂದಿಗೆ ಎಂಟ್ರಿ ಕೊಟ್ಟಿರುವ ಹೋಂಡಾ ಸಿಟಿ ಸೆಡಾನ್ ಕಾರು 4 ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದ್ದು, 200 ಎನ್ ಎಂ ತಿರುಗುಬಲದಲ್ಲಿ 98 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೋಂಡಾ ಸಿಟಿ - ಮೈಲೇಜ್: 26km/l

ಹೋಂಡಾ ಸಿಟಿ - ಮೈಲೇಜ್: 26km/l

ವಿಶ್ವಸಾರ್ಹ ಎಂಜಿನ್ ಗಳಿಗೆ ಹೆಸರುವಾಸಿಯಾಗಿರುವ ಹೋಂಡಾ ಸಿಟಿ ಸಹ ಪ್ರತಿ ಲೀಟರ್ ಗೆ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 9.22 ಲಕ್ಷ ರು.ಗಳಾಗಿರಲಿದೆ.

06. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

06. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಫಿಯೆಟ್ ನಿಂದ ಆಮದು ಮಾಡಲಾಗಿರುವ 1.3 ಲೀಟರ್ ಡೀಸೆಲ್ ಎಂಜಿನ್ ಇದರಲ್ಲಿ ಬಳಕೆ ಮಾಡಲಾಗಿದೆ. ಇದರ 4 ಸಿಲಿಂಡರ್ ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ನೀಡುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ - ಮೈಲೇಜ್: 26.59km/l

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ - ಮೈಲೇಜ್: 26.59km/l

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಪ್ರತಿ ಲೀಟರ್ ಗೆ 26.59 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿರುತ್ತದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 5.99 ಲಕ್ಷ ರು.ಗಳಾಗಿದೆ.

 05. ಟಾಟಾ ಟಿಯಾಗೊ

05. ಟಾಟಾ ಟಿಯಾಗೊ

ಟಿಯೊಗೊ ಮುಖಾಂತರ ದೇಶದ ಪ್ರಮಾಣಿಕ ಮಾರುಕಟ್ಟೆಗೆ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ಇರಾದೆಯಲ್ಲಿರುವ ಟಾಟಾ ಮೋಟಾರ್ಸ್ ಗೆ ಭಾರತೀಯ ಗ್ರಾಹಕರ ಮನ ಗೆಲ್ಲುವ ಸಲುವಾಗಿ ಅತ್ಯುತ್ತಮ ಇಂಧನ ಕ್ಷಮತೆ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇದರ 1.05 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಟಾಟಾ ಟಿಯಾಗೊ - ಮೈಲೇಜ್: 27.28km/l

ಟಾಟಾ ಟಿಯಾಗೊ - ಮೈಲೇಜ್: 27.28km/l

ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರು ಪ್ರತಿ ಲೀಟರ್ ಗೆ 27.28 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ನಿಜಕ್ಕೂ ಪ್ರಶಂಸನೀಯವೇ ಸರಿ. ಅಲ್ಲದೆ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 3.94 ಲಕ್ಷ ರು.ಗಳಾಗಿದೆ.

04. ಹೋಂಡಾ ಜಾಝ್

04. ಹೋಂಡಾ ಜಾಝ್

ವಿಶಿಷ್ಟ ಶೈಲಿಯ ಹೋಂಡಾ ಜಾಝ್ ಹ್ಯಾಚ್ ಬ್ಯಾಕ್ ಕಾರಿನಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು 200 ಎನ್ ಎಂ ತಿರುಗುಬಲದಲ್ಲಿ 98 ಅಶ್ವಶಕ್ತಿಯನ್ನು ನೀಡುತ್ತದೆ.

ಹೋಂಡಾ ಜಾಝ್ - ಮೈಲೇಜ್: 27.3km/l

ಹೋಂಡಾ ಜಾಝ್ - ಮೈಲೇಜ್: 27.3km/l

ಹೋಂಡಾ ಜಾಝ್ ಹ್ಯಾಚ್ ಬ್ಯಾಕ್ ಕಾರು ಪ್ರತಿ ಲೀಟರ್ ಗೆ 27.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಅಂತೆಯೇ ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 6.79 ಲಕ್ಷ ರು.ಗಳಾಗಿದೆ. ನಿಮ್ಮ ಮಾಹಿತಿಗಾಗಿ, ತವರೂರಾದ ಜಪಾನ್ ಮಾರುಕಟ್ಟೆಯಲ್ಲಿ ಜಾಝ್ ಹೈಬ್ರಿಡ್ ಆವೃತ್ತಿಯು ಮಾರಾಟದಲ್ಲಿ ಇದು ಸಹ ನಿಕಟ ಭವಿಷ್ಯದಲ್ಲೇ ಭಾರತ ಪ್ರವೇಶಿಸಿದ್ದಲ್ಲಿ ಸಂಸ್ಥೆಯ ಅದೃಷ್ಟವನ್ನೇ ಬದಲಾಯಿಸಲಿದೆ.

03. ಮಾರುತಿ ಸುಜುಕಿ ಬಲೆನೊ

03. ಮಾರುತಿ ಸುಜುಕಿ ಬಲೆನೊ

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಮಾರುತಿ ಸುಜುಕಿ ಬಲೆನೊ ಕಾರು ಬೊಂಬಾಟ್ ಮಾರಾಟವನ್ನು ದಾಖಲಿಸುತ್ತಿದೆ. ಇದರಲ್ಲಿರುವ ಫಿಯೆಟ್ ನಿಂದ ಆಮದು ಮಾಡಲಾದ 1.3 ಲೀಟರ್ ಡೀಸೆಲ್ ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಾರುತಿ ಸುಜುಕಿ ಬಲೆನೊ - ಮೈಲೇಜ್: 27.39 km/l

ಮಾರುತಿ ಸುಜುಕಿ ಬಲೆನೊ - ಮೈಲೇಜ್: 27.39 km/l

ದೇಶದ ಅಗ್ರ ಮೂರು ಮೈಲೇಜ್ ಕಾರುಗಳಲ್ಲಿ ಸ್ಥಾನ ಪಡೆದಿರುವ ಮಾರುತಿ ಸುಜುಕಿ ಬಲೆನೊ ಪ್ರತಿ ಲೀಟರ್ ಗೆ 27.39 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 6.16 ಲಕ್ಷ ರು.ಗಳಾಗಿದೆ.

 02. ಮಾರುತಿ ಸುಜುಕಿ ಸೆಲೆರಿಯೊ

02. ಮಾರುತಿ ಸುಜುಕಿ ಸೆಲೆರಿಯೊ

ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಮಾರಾಟ ಮಾಡುತ್ತಿರುವ ಅತ್ಯಂತ ಕಡಿಮೆ ವೆಚ್ಚದ ಡೀಸೆಲ್ ಕಾರು ಇದಾಗಿದೆ. ಇದರಲ್ಲಿರುವ 793 ಸಿಸಿ ಡೀಸೆಲ್ ಎಂಜಿನ್ 125 ಎನ್ ಎಂ ತಿರುಗುಬಲದಲ್ಲಿ 46 ಅಶ್ವಶಕ್ತಿಯನ್ನು ನೀಡಲಿದೆ.

ಮಾರುತಿ ಸುಜುಕಿ ಸೆಲೆರಿಯೊ - ಮೈಲೇಜ್: 27.62 km/l

ಮಾರುತಿ ಸುಜುಕಿ ಸೆಲೆರಿಯೊ - ಮೈಲೇಜ್: 27.62 km/l

ದೆಹಲಿ ಎಕ್ಸ್ ಶೋ ರೂಂ 4.72 ಲಕ್ಷ ರು.ಗಳಷ್ಟು ಬೆಲೆ ಹೊಂದರುವ ಮಾರುತಿ ಸುಜುಕಿ ಸೆಲೆರಿಯೊ ಪ್ರತಿ ಲೀಟರ್ ಗೆ 27.62 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿದೆ.

01. ಮಾರುತಿ ಸುಜುಕಿ ಸಿಯಾಝ್

01. ಮಾರುತಿ ಸುಜುಕಿ ಸಿಯಾಝ್

ಅಷ್ಟಕ್ಕೂ ಭಾರತದ ಶ್ರೇಷ್ಠ ಮೈಲೇಜ್ ಕಾರು ಯಾವುದು ಗೊತ್ತೇ? ಇದಕ್ಕುತ್ತರ ನಿಮಗೀಗಲೇ ಲಭ್ಯವಾಗಿದೆ. ಮಾರುತಿ ಸುಜುಕಿ ಸಿಯಾಝ್ ಕಾರಿನಲ್ಲಿರುವ 1.3 ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿ ಉತ್ಪಾದಿಸುವಷ್ಟು ಸಮರ್ಥವಾಗಿದೆ.

ಮಾರುತಿ ಸುಜುಕಿ ಸಿಯಾಝ್ - ಮೈಲೇಜ್: 28.09 km/l

ಮಾರುತಿ ಸುಜುಕಿ ಸಿಯಾಝ್ - ಮೈಲೇಜ್: 28.09 km/l

ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (Smart Hybrid Vehicle by Suzuki) ತಂತ್ರಗಾರಿಕೆಯನ್ನು ಹೊಂದಿರುವ ಸಿಯಾಝ್ ದೇಶದ ಅತ್ಯುತ್ತಮ ಇಂಧನ ಕ್ಷಮತೆಯ ಕಾರೆಂಬ ಕೀರ್ತಿಗೆ ಪಾತ್ರವಾಗಿದ್ದು, ಪ್ರತಿ ಲೀಟರ್ ಗೆ 28.09 ಕೀ.ಮೀ. ಮೈಲೇಜ್ ಕಾಪಾಡಿಕೊಂಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 8.22 ಲಕ್ಷ ರು.ಗಳಾಗಿದೆ.

Most Read Articles

Kannada
English summary
Making Every Drop Count — India's Top 10 Fuel Efficient Cars
Story first published: Thursday, April 28, 2016, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X