ದೇವರ ಸ್ವಂತ ನಾಡಿನ ಡ್ರೈವ್ ಇನ್ ಬೀಚಲ್ಲಿ ಮಿಂದೆದ್ದ ಎಟಿಯೋಸ್ ಕ್ರಾಸ್

By Nagaraja

ಏಷ್ಯಾದಲ್ಲೇ ಮೋಟಾರು ವಾಹನ ಚಾಲನೆ ಮಾಡಬಹುದಾದ ಅತಿ ಉದ್ದದ ಬೀಚ್ ಎಂಬ ಗೌರವಕ್ಕೆ ಕೇರಳದ 'ಮುಳಪ್ಪಿಲಂಗಾಡ್ ಡ್ರೈವ್ ಇನ್ ಬೀಚ್' (Muzhappilangad Drive-in Beach) ಪಾತ್ರವಾಗಿದೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸ್ಥಿತಗೊಂಡಿರುವ ಮುಳಪ್ಪಿಲಂಗಾಡ್ ಬೀಚ್, ಕಡಲ ಕಿನಾರೆಯಲ್ಲಿ 5.5 ಕೀ.ಮೀ. ಉದ್ದಕ್ಕೂ ಹರಡಿದೆ. ಕಣ್ಣೂರು ಹಾಗೂ ತಲಶ್ಶೇರಿ ನಡುವಣ ರಾಷ್ಟ್ರೀಯ ಹೆದ್ದಾರಿ 66 (ಅಧಿಕೃತವಾಗಿ ಎನ್‌ಎಚ್ 17) ಸಮಾನಾಂತರವಾಗಿ ಹಾದು ಹೋಗುವ ಈ ಬೀಚ್ ದೇಶದಲ್ಲೇ ಅತಿ ವಿಶಿಷ್ಟ ಕಡಲ ಕಿನಾರೆಗಳಲ್ಲಿ ಒಂದಾಗಿದೆ. ಬಿಬಿಸಿ ಬಿಡುಗಡೆ ಮಾಡಿರುವ ವಿಶ್ವದ ಆರು ಅತ್ಯುತ್ತಮ ಡ್ರೈವ್ ಇನ್ ಬೀಚ್ ಗಳ ಪಟ್ಟಿಯಲ್ಲೂ ಇದು ಸೇರಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸರಿ ಸುಮಾರು ಏಳು ತಾಸುಗಳ ಪಯಣವನ್ನು ಕ್ರಮಿಸಿದಲ್ಲಿ 320 ಕೀ.ಮೀ. ದೂರದಲ್ಲಿರುವ ಸುಂದರವಾದ ಬೀಚ್ ತಲುಪಲಿದೆ. ಇಲ್ಲಿ ವರ್ಷಂಪ್ರತಿ ಎಪ್ರಿಲ್ ತಿಂಗಳಲ್ಲಿ ಬೀಚ್ ಹಬ್ಬವನ್ನು ಆಚರಿಸಲಾಗುತ್ತದೆ. ಕಾರಲ್ಲಿ ಡ್ರಿಫ್ಟಿಂಗ್, ಬೈಕ್ ವೀಲಿಂಗ್ ಇತ್ಯಾದಿ ಸಾಹಸ ವಾಹನ ಕ್ರೀಡೆಗಳು ಇಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಪ್ರವಾಸಿಗರ ಜೊತೆಗೆ ವಾಹನ ಪ್ರೇಮಿಗಳ ಸ್ವರ್ಗವೆನಿಸಿದೆ.

ಎಟಿಯೋಸ್ ಕ್ರಾಸ್....

ನಮ್ಮ ಡ್ರೈವ್ ಸ್ಪಾರ್ಕ್ ತಂಡಕ್ಕೂ ದೇಶದ ಹೆಮ್ಮೆಯಾಗಿರುವ ದೇವರ ಸ್ವಂತ ನಾಡಲ್ಲಿರುವ ಈ ಸುಂದರವಾದ ಬೀಚಲ್ಲಿ ಟೆಸ್ಟ್ ಡ್ರೈವ್ ನೆಡಸುವ ಅವಕಾಶವೂ ದೊರಕಿತ್ತು. ಆಗಲೇ ಮಾನ್ಸೂನ್ ಶುರುವಾಗಿದ್ದರಿಂದ ಪಶ್ಚಿಮ ಘಟ್ಟದಲ್ಲಿ ದಟ್ಟವಾದ ಮೋಡ ಕವಿದ ವಾತಾವರಣ, ಜೋರಾಗಿ ಸುರಿಯುವ ಮಳೆ ಇವೆಲ್ಲ ಸಾಮಾನ್ಯ ದೃಶ್ಯವಾಗಿತ್ತು.

ಹ್ಯಾಚ್ ಬ್ಯಾಕ್ ಮತ್ತು ಎಸ್‌ಯುವಿ ಶೈಲಿಯ ಮಿಶ್ರಣವೆನಿಸಿಕೊಂಡಿರುವ ಎಟಿಯೋಸ್ ಕ್ರಾಸ್ ವಿ ಪೆಟ್ರೋಲ್ ವೆರಿಯಂಟ್, ಒದ್ದೆಯಾದ ರಸ್ತೆಗಳಲ್ಲೂ ಅತ್ಯುತ್ತಮ ಉರುಳುವಿಕೆಯನ್ನು ಕಾಯ್ದುಕೊಂಡಿದೆ. ಕಡಿಮೆ ವೇಗದಲ್ಲಿ ಅತ್ಯುತ್ತಮ ನಿರ್ವಹಣೆ, ಪರಿಣಾಮಕಾರಿ ಟರ್ನಿಂಗ್ ರೇಡಿಯಸ್ ಮತ್ತು ಹ್ಯಾಂಡ್ಲಿಂಗ್ ಮೆಚ್ಚುಗೆಗೆ ಪಾತ್ರವಾಗಿದೆ.

1.5 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿತ ಟೊಯೊಟಾ ಎಟಿಯೋಸ್ ಕ್ರಾಸ್ 89 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು 1.2 ಲೀಟರ್ ಪೆಟ್ರೋಲ್ (79 ಅಶ್ವಶಕ್ತಿ) ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ (67 ಅಶ್ವಶಕ್ತಿ) ಆಯ್ಕೆಗಳಲ್ಲೂ ಲಭ್ಯವಿರುತ್ತದೆ.

ನಾವು ನಡೆಸಿರುವ ಸಣ್ಣ ಪುಟ್ಟ ಆಫ್ ರೋಡ್ ಪರೀಕ್ಷೆಯಲ್ಲೂ ಎಟಿಯೋಸ್ ಕ್ರಾಸ್ ತೇರ್ಗಡೆಯನ್ನು ಹೊಂದಿತ್ತು. ವಿವಿಧ ಭೂಪ್ರದೇಶಗಳನ್ನು ಹೊಂದಿರುವ ಭಾರತದಂತಹ ರಸ್ತೆ ಪರಿಸ್ಥಿತಿಯಲ್ಲಿ ಎಟಿಯೋಸ್ ಕ್ರಾಸ್ ನೈಜ ಚಾಲನಾ ಗುಣವನ್ನು ತೋರಿಸುತ್ತದೆ. ಹಾಗೊಂದು ವೇಳೆ ಫೋರ್ ವೀಲ್ ಡ್ರೈವ್ ಆಯ್ಕೆ ಇರುತ್ತಿದ್ದಲ್ಲಿ ಮತ್ತಷ್ಟು ಉತ್ತಮವಾಗಿರುತ್ತಿತ್ತು.

ಸರಿ ಸುಮಾರು 400 ಕೀ.ಮೀ. ದೂರದ ಪ್ರಯಾಣದಲ್ಲಿ ಎಸಿ ಜೊತೆಗೂ ಸರಾಸರಿ 10 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳುವಲ್ಲಿ ಎಟಿಯೋಸ್ ಕ್ರಾಸ್ ಯಶಸ್ವಿಯಾಗಿತ್ತು. ಮಲಬಾರ್ ಪ್ರದೇಶದ ಸಮುದ್ರದಿಂದ ಬೀಸುವ ಸ್ವಚ್ಛ ಗಾಳಿಯು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. 175 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ಎಟಿಯೋಸ್ ಕ್ರಾಸ್ ಕಡಲ ಕಿನಾರೆಯ ಮರಳಿನಲ್ಲೂ ನಯವಾಗಿ ಸಂಚರಿಸುತ್ತಿತ್ತು.

ಇಲ್ಲಿಂದ ಬಳಿಕ ಕಣ್ಣೂರು ಜಿಲ್ಲೆಯಲ್ಲಿರುವ ಕನ್ನವನಂ ಅರಣ್ಯದ ಮುಖಾಂತರ ಕೊಲಯಾಡ್ ನಲ್ಲಿರುವ ಸೈಂಟ್ ಕಾರ್ನೆಲಿಯಸ್ ಚರ್ಚ್ ಗೂ ಪ್ರಯಾಣ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಕಾರನ್ನು ನಿಲುಗಡೆಗೊಳಿಸಿದಾಗ ಎಟಿಯೋಸ್ ಕ್ರಾಸ್ ಫ್ರಂಟ್ ಗ್ರಿಲ್ ಶೋಭೆಯನ್ನು ಮನಗಾಣಬಹುದಿತ್ತು.

ಬದಿಯಿಂದ ವೀಕ್ಷಿಸಿದಾಗಲೂ ಕ್ರಾಸೋವರ್ ಕಾರಿಗೆ ತಕ್ಕಂತೆ ಮ್ಯಾಟ್ ಬ್ಲ್ಯಾಕ್ ಫಿನಿಶ್ ಕ್ಲಾಡಿಂಗ್ ಮತ್ತು ದೃಢವಾದ ಅಲಾಯ್ ವೀಲ್ ಕಾಣಬಹುದಿತ್ತು.

ಬೆಲೆ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ಪೆಟ್ರೋಲ್

ಜಿ: 6.48 ಲಕ್ಷ ರು.

ವಿ: 8.13 ಲಕ್ಷ ರು.

ಡೀಸೆಲ್

ಡಿ-4ಡಿ ಜಿಡಿ: 7.80 ಲಕ್ಷ ರು.

ಡಿ-4ಡಿ ವಿಡಿ: 81.0 ಲಕ್ಷ ರು.

ಕಾರಿನೊಳಗೆ ಪ್ರಯಾಣಿಕರಿಗೆ ಬೇಕಾದಷ್ಟು ಜಾಗ ಮಾಡಿಕೊಡಲಾಗಿದೆ. ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ಹೊಂದಾಣಿಸಬಹುದಾದ ಫ್ರಂಟ್ ಹಾಗೂ ರಿಯರ್ ಹೆಡ್ ರೆಸ್ಟ್ ಗಳು ಸುಖಕರವಾದ ದೀರ್ಘ ದೂರ ಪ್ರಯಾಣವನ್ನು ಖಾತ್ರಿಪಡಿಸಲಿದೆ. 251 ಲೀಟರ್ ಗಳ ಬೂಟ್ ಜಾಗ ಸಹ ಟ್ರಾವೆಲ್ ಬ್ಯಾಗ್, ಲ್ಯಾಪ್ ಟಾಪ್, ಕ್ಯಾಮೆರಾ ಮುಂತಾದವುಗಳನ್ನು ಸುರಕ್ಷಿತವಾಗಿ ಇಡಲು ಸಹಾಯಕವಾಗಲಿದೆ.

ಪ್ರವಾಸಿಗರು ಕೇರಳಕ್ಕೆ ಹೋದ ಮೇಲೆ ಅಲ್ಲಿನ ಕಳ್ಳು (ಸಾರಾಯಿ) ರುಚಿ ಪಡೆಯದಿದ್ದಲ್ಲಿ ಸಂಪೂರ್ಣ ಪ್ರಯಾಣವೇ ನಿರುಪಯುಕ್ತವಾದಿತು. ಇದಕ್ಕಾಗಿ ಗಾಡಿ ಸುರಕ್ಷಿತವಾಗಿ ಪಾರ್ಕ್ ಮಾಡಿದ ಬಳಿಕ ಕಳ್ಳು ರಸ ಪಾನೀಯವನ್ನು ಸವಿಯಲು ಮರೆಯದಿರಿ.

ಅಂತಿಮ ತೀರ್ಪು...

ಭಾರತದಲ್ಲಿ ಆಗಲೇ ತನ್ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು, ಎಟಿಯೋಸ್ ಕ್ರಾಸ್ ಮೂಲಕ ತನ್ನ ಶ್ರೇಣಿಯ ಕಾರುಗಳನ್ನು ವಿಸ್ತರಿಸಿದೆ. ನಿಧಾನವಾಗಿ ಕ್ರಾಸೋವರ್ ವಿಭಾಗ ಭಾರತದಲ್ಲಿ ಜನಪ್ರಿಯತೆ ಸಾಧಿಸುತ್ತಿರುವುದರಿಂದ ಎಟಿಯೋಸ್ ಕ್ರಾಸ್ ನೈಜ ಜೀವನ ಶೈಲಿ ಅನುಭವಿಸಲು ಅತ್ಯುತ್ತಮ ಆಯ್ಕೆಯಾಗಿರಲಿದೆ.

ಮುನ್ನಡೆಗಳು

  • ಅತ್ಯುತ್ತಮ ಪೆಟ್ರೋಲ್ ಎಂಜಿನ್,
  • ಪರಿಣಾಮಕಾರಿ ಎಸಿ,
  • ಆರಾಮದಾಯಕ ಮತ್ತು ಬೆಂಬಲಯುತ ಸೀಟು,
  • ಕ್ಯಾಬಿನ್ ಜಾಗ (ಭುಜ ಮತ್ತು ಕಾಲು)
  • ಸ್ಟೋರೆಜ್ ಜಾಗ (7 ಒಂದು ಲೀಟರ್ ಬಾಟಲಿ ಹೋಲ್ಡರ್)

ಹಿನ್ನಡೆಗಳು

  • ಹೆಚ್ಚಿನ ಆಫ್ ರೋಡ್ ಒರಟುತನದ ಅಭಾವ,
  • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್ ಕೊರತೆ,
  • ಸ್ಪೀಡ್ ಸೆನ್ಸಿಂಗ್, ಆಟೋ ಡೋರ್ ಲಾಕ್ ಅಲಭ್ಯತೆ,
  • ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಅಭಾವ
Most Read Articles

Kannada
English summary
Review: Toyota Etios Cross — A Crossover Drive To God's Own Country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more