ಪ್ಲಾಟಿನಂ ಎಟಿಯೋಸ್ ಒಂದು ಪಕ್ಕಾ ಫ್ಯಾಮಿಲಿ ಕಾರು ಹೌದೇ?

Written By:

2000ನೇ ಇಸವಿಯಲ್ಲಿ ಕ್ವಾಲಿಸ್ ಕಾರಿನ ಪಾದಾರ್ಪಣೆಯೊಂದಿಗೆ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಭಾರತದಲ್ಲಿ ತನ್ನ ಅಭಿಯಾನವನ್ನು ಆರಂಭಿಸಿತ್ತು. ತದಾ ಬಳಿಕ ಮೂರು ವರ್ಷಗಳ ನಂತರ ಚೊಚ್ಚಲ ಸೆಡಾನ್ ಕಾರು ಕೊರೊಲ್ಲಾ ಪ್ರವೇಶವಾಗಿತ್ತು. ಕ್ರಮೇಣ ಭಾರತ ಮಾರುಕಟ್ಟೆಯಲ್ಲಿ ಬಲವರ್ಧಿಸಿಕೊಂಡ ಟೊಯೊಟಾ 2010ರಲ್ಲಿ ಎಟಿಯೋಸ್ ಎಂಬ ಆಕರ್ಷಕ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು.

ಕೊರೊಲ್ಲಾಗಿಂತಲೂ ಕೆಳ ದರ್ಜೆಯಲ್ಲಿ ಗುರುತಿಸಿಕೊಂಡಿರುವ ಎಟಿಯೋಸ್ ಸೆಡಾನ್ ಕಾರನ್ನು ಭಾರತೀಯರು ಬಹಳ ಸಂತೋಷದಿಂದಲೇ ಬರಮಾಡಿಕೊಂಡಿದ್ದರು. ಅದರಲ್ಲೂ ಪ್ರಮುಖವಾಗಿಯೂ ಟ್ಯಾಕ್ಸಿ ವಿಭಾಗದಲ್ಲಿ ಎಟಿಯೋಸ್ ತನ್ನ ಛಾಪನ್ನು ಮೂಡಿಸಿದ್ದು, ಸ್ಪರ್ದಾತ್ಮಕ ಬೆಲೆ, ನಿರ್ಮಾಣ ಗುಣಮಟ್ಟ ಹಾಗೂ ವಿಶ್ವಸಾರ್ಹತೆ ಟೊಯೊಟಾ ಮೌಲ್ಯವನ್ನು ಇಮ್ಮಡಿಗೊಳಿಸಿತ್ತು.

ಟೊಯೊಟಾ ಎಟಿಯೋಸ್ ಪ್ಲಾಟಿನಂ ವಿಮರ್ಶೆ

ನಿರಂತರ ಅಂತರಾಳದಲ್ಲಿ ಪರಿಷ್ಕೃತ ಹಾಗೂ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಬಂದಿರುವ ಟೊಯೊಟಾ ಸಂಸ್ಥೆಯೀಗ ಮಾರುಕಟ್ಟೆಯಲ್ಲಿ ತಾಜಾತನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅತಿ ನೂತನ 2016 ಪ್ಲಾಟಿನಂ ಎಟಿಯೋಸ್ ಕಾರನ್ನು ಬಿಡುಗಡೆಗೊಳಿಸಿದೆ. ಇದು ಹಿಂದಿನ ಮಾದರಿಗಿಂತಲೂ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಫ್ಯಾಮಿಲಿ ಕಾರೆಂಬ ಪಟ್ಟವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ. ಈ ಸಂಬಂಧ ಸಂಪೂರ್ಣ ಚಾಲನಾ ವಿಮರ್ಶೆಯನ್ನು ಹಂಚಿಕೊಳ್ಳಲಾಗಿದೆ.

ಟೊಯೊಟಾ ಎಟಿಯೋಸ್ ಪ್ಲಾಟಿನಂ ವಿಮರ್ಶೆ

ಆಧುನಿಕತೆಗೆ ತಕ್ಕ ವಿನ್ಯಾಸವನ್ನು ಟೊಯೊಟಾ ಪ್ಲಾಟಿಎಂ ಎಟಿಯೋಸ್ ಮೈಗೂಡಿಸಿ ಬಂದಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಪರಿಷ್ಕೃತ ಬಂಪರ್ ಜೊತೆ ಫ್ರಂಟ್ ಗ್ರಿಲ್ ಹಾಗೂ ನಿಖರವಾದ ರೇಖೆಗಳು ವಿಭಿನ್ನವಾಗಿ ಗುರುತಿಸುವಂತೆ ಮಾಡಿದೆ.

ಮಗದೊಂದು ಗಮನಾರ್ಹ ಬದಲಾವಣೆಯೆಂದರೆ ಹಿಂಬದಿಯಲ್ಲಿ ಜೋಡಿಸಲಾಗಿರುವ ಟೈಲ್ ಲ್ಯಾಂಪ್. ಒಟ್ಟಾರೆಯಾಗಿ ಕಾರಿನ ಹೊರಮೈಯಲ್ಲಿ ಸೀಮಿತ ಮಾತ್ರ ಬದಲಾವಣೆ ಕಂಡುಬಂದರೂ ಒಟ್ಟಾರೆ ರಚನೆಯಲ್ಲಿ ಬಿಗಿತ ಕಂಡುಬಂದಿದೆ. ಉದಾಹರಣೆಗಾಗಿ ಇಂಪಾಕ್ಟ್ ಅಬ್ಸಾರ್ಬಿಂಗ್ ದೇಹ ರಚನೆಯಿಂದ ಮುಂಭಾಗ ಹಾಗೂ ಬದಿಯಲ್ಲಿ ಢಿಕ್ಕಿ ಆಘಾತವನ್ನು ಕಡಿಮೆ ಮಾಡಲಿದೆ. ಒಟ್ಟಿನಲ್ಲಿ ಸದೃಢವಾದ ದೇಹ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ.

ಟೊಯೊಟಾ ಎಟಿಯೋಸ್ ಪ್ಲಾಟಿನಂ ವಿಮರ್ಶೆ

ಎಂಜಿನ್ ತಾಂತ್ರಿಕತೆ

1.5 ಲೀಟರ್ ಪೆಟ್ರೋಲ್ ಎಂಜಿನ್: 89 ಅಶ್ವಶಕ್ತಿ, 132 ಎನ್ ಎಂ ತಿರುಗುಬಲ

1.4 ಲೀಟರ್ ಡೀಸೆಲ್ ಎಂಜಿನ್: 67 ಅಶ್ವಶಕ್ತಿ, 170 ಎನ್ ಎಂ ತಿರುಗುಬಲ

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್

  • ಎಟಿಯೋಸ್ ಪ್ಲಾಟಿನಂ ಜಿಎಕ್ಸ್: 6,94,430
  • ಎಟಿಯೋಸ್ ಪ್ಲಾಟಿನಂ ವಿ: 7,22,141
  • ಎಟಿಯೋಸ್ ಪ್ಲಾಟಿನಂ ವಿಎಕ್ಸ್: 7,85,256

ಡೀಸೆಲ್

  • ಎಟಿಯೋಸ್ ಪ್ಲಾಟಿನಂ ಜಿಎಕ್ಸ್ ಡಿ: 8,07,470
  • ಎಟಿಯೋಸ್ ಪ್ಲಾಟಿನಂ ವಿಡಿ: 8,35,181
  • ಎಟಿಯೋಸ್ ಪ್ಲಾಟಿನಂ ವಿಎಕ್ಸ್ ಡಿ: 8,98,296

ಮೈಲೇಜ್ (km/l)

  • ಪೆಟ್ರೋಲ್: 16.7

    ಡೀಸೆಲ್: 23.5

ಟೊಯೊಟಾ ಎಟಿಯೋಸ್ ಪ್ಲಾಟಿನಂ ವಿಮರ್ಶೆ

ಚಾಲನಾ ಅನುಭವ

ಟೊಯೊಟಾ ಎಟಿಯೋಸ್ ಅತ್ಯುತ್ತಮ ಚಾಲನಾ ಕಾರುಗಳಲ್ಲಿ ಒಂದಾಗಿದೆ. ಕಾರಿನೊಳಗೆ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವತ್ತ ಗಮನ ಹರಿಸಲಾಗಿದೆ. ಹಾಗಿದ್ದರೂ ಆರ್ ಪಿಎಂ ಹೆಚ್ಚಿದಾಗ ಶಬ್ದದ ತೊಂದರೆಯಾಗಲಿದೆ. ಇನ್ನು ಸುಧಾರಿತ ರಿಬೌಂಡ್ ಸ್ಪ್ರಿಂಗ್ ಸಸ್ಪೆನ್ಷನ್ ಸುಲಲಿತವಾದ ಚಾಲನೆಯನ್ನು ಖಾತ್ರಿಪಡಿಸಲಿದೆ.

ನಗರದಲ್ಲಿ ಹೆಚ್ಚು ಚಾಲನೆಯನ್ನು ಮನಗಂಡಿರುವ ಎಟಿಯೋಸ್ ಕಾರಿನ ಕ್ಲಚ್ ಸುಲಲಿತವಾಗಿ ಕೆಲಸ ಮಾಡುವತ್ತ ಸಂಸ್ಥೆಯು ಗಮನ ಹರಿಸಿದೆ. ಕಾರಿನೊಳಗೆ ಹೊಸತಾದ ಬ್ಲ್ಯಾಕ್ ಮತ್ತು ಐವರಿ ಬಣ್ಣಗಳ ಆಯ್ಕೆಯನ್ನು ಕೊಡಲಾಗಿದೆ. ಸೆಂಟ್ರಲ್ ಮೌಂಟೆಡ್ ಇನ್ಸ್ಟ್ರುಮೆಂಟ ಕ್ಲಸ್ಟರ್ ಮಗದೊಂದು ವೈಶಿಷ್ಟ್ಯವಾಗಿದೆ.

ಹೊಸತಾದ ಓಪ್ಟಿಟ್ರಾನ್ ಕಾಂಬಿಮೀಟರ್ ಹಾಗೂ ಸ್ಟೀರಿಂಗ್ ವೀಲ್ ನಲ್ಲೇ ಆಡಿಯೋ ನಿಯಂತ್ರಣ ಸೇವೆಯಿರಲಿದೆ. ಹಳೆಯ ಟ್ಯಾಕೋಮೀಟರ್ ಡಿಜಿಟಲ್ ಗೆ ಬದಲಾಗಿದೆ. ಕನ್ಸಾಲ್ ಹೊಳಪನ್ನು ಬದಲಾಯಿಸಬಹುದಾಗಿದೆ.

ಟೊಯೊಟಾ ಎಟಿಯೋಸ್ ಪ್ಲಾಟಿನಂ ವಿಮರ್ಶೆ

ವೈಶಿಷ್ಟ್ಯಗಳು

ಹೊಸ ಓಪ್ಟಿಟ್ರಾನ್ ಕಾಂಬಿಮೀಟರ್,

ಸ್ಟೀರಿಂಗ್ ವೀಲ್ ನಲ್ಲೇ ಆಡಿಯೋ ನಿಯಂತ್ರಣ,

ಬೆಸ್ಟ್ ಇನ್ ಕ್ಲಾಸ್ ಕ್ಲಾಬಿನ್ ಕ್ಲಾಸ್ ಜೊತೆ ರಿಯರ್ ಸೆಂಟರ್ ಆರ್ಮ್ ರೆಸ್ಟ್,

ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ - 592 ಲೀಟರ್,

ಬೆಸ್ಟ್ ಇನ್ ಕ್ಲಾಸ್ ಎಸಿ ಜೊತೆ ಬಹು ದಿಕ್ಕಿನತ್ತ ವೆಂಟ್ಸ್,

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್,

ಕೂಲ್ಡ್ ಗ್ಲೋಬ್ ಬಾಕ್ಸ್,

ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು,

ಹೊಸತಾದ ರಿಯರ್ ಬೆಂಟ್ ಫೋಲ್ಡ್ ಸೀಟು,

ಶಕ್ತಿಶಾಲಿ 1.4 ಲೀಟರ್ ಡೀಸೆಲ್ ಎಂಜಿನ್,

ಶಕ್ತಿಶಾಲಿ 1.5 ಲೀಟರ್ ಡಿಒಎಚ್ ಸಿ ಪೆಟ್ರೋಲ್,

ಸುರಕ್ಷತೆ

ಡ್ಯುಯಲ್ ಫ್ರಂಟ್ ಎಸ್ ಆರ್ ಎಸ್ ಏರ್ ಬ್ಯಾಗ್,

ಫ್ರಂಟ್ ಪ್ರಿ ಟೆನ್ಷನರ್ ಫೋರ್ಸ್ ಲಿಮಿಟರ್ ಸೀಟ್ ಬೆಲ್ಟ್,

ಹೊಸ ಡ್ಯುಯಲ್ ಐಸೊಫಿಕ್ಸ್ ಚೈಲ್ಡ್ ಸೀಟ್ ಲಾಕ್,

ಇಂಪಾಕ್ಟ್ ಅಬ್ಸಾರ್ಬಿಂಗ್ ದೇಹ,

ಹಿಂದಿನ ಸಾಲಿನ ಮಧ್ಯದಲ್ಲಿ ತೆಗೆಯಬಹುದಾದ ಹೆಡ್ ರೆಸ್ಟ್,

3 ಪಾಯಿಂಟ್ ರಿಯರ್ ಸೀಟು ಬೆಲ್ಟ್,

ಹೊಸತಾದ ಸೆಂಟ್ರಲ್ ಲಾಕಿಂಗ್ ಸಿಸ್ಟಂ,

ಎಬಿಎಸ್ ಜೊತೆ ಇಬಿಡಿ

ರವರ್ಸ್ ಪಾರ್ಕಿಂಗ್ ಸೆನ್ಸಾರ್ (ಐಚ್ಛಿಕ)

ಟೊಯೊಟಾ ಎಟಿಯೋಸ್ ಪ್ಲಾಟಿನಂ ವಿಮರ್ಶೆ

ಅಂತಿಮ ತೀರ್ಪು

ನೂತನ ಎಟಿಯೋಸ್ ಪ್ಲಾಟಿನಂ ಕಾರಿಗೆ ಟ್ಯಾಕ್ಸಿ ಪಟ್ಟವನ್ನು ತೊಳಗಿಸಿ ಫ್ಯಾಮಿಲಿ ಕಾರೆಂಬ ಬಿರುದು ನೀಡಲು ಸಾಧ್ಯವೇ ಎಂಬುದು ನಿರ್ಣಾಯಕವೆನಿಸುತ್ತದೆ. ಈ ಎಲ್ಲದಕ್ಕೆ ಹೊಸತಾದ ಪ್ಲಾಟಿನಂ ಎಟಿಯೋಸ್ ತಕ್ಕ ಉತ್ತರವನ್ನೇ ನೀಡುತ್ತದೆ. ಚಾಲನೆಯಿಂದ ಹಿಡಿದು, ನಿರ್ವಹಣೆ, ಬೆಲೆ, ಗುಣಮಟ್ಟ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಸಂಪೂರ್ಣ ಫ್ಯಾಮಿಲಿ ಕಾರೆನಿಸಿಕೊಂಡಿದೆ.

ಇವೆಲ್ಲದಕ್ಕೂ ಮಿಗಿಲಾಗಿ ಟೊಯೊಟಾ ಎಂಬ ಬ್ರಾಂಡ್ ಮೌಲ್ಯ ಬಹುತೇಕರನ್ನು ಎಟಿಯೋಸ್ ಕಾರಿನತ್ತ ಆಕರ್ಷಿಸುವಲ್ಲಿ ಸಹಕಾರಿಯಾಗಲಿದೆ. ಟೊಯೊಟಾ ಸಂಸ್ಥೆಯ ಮೇಲೆ ಗ್ರಾಹಕರು ಇಟ್ಟುಕೊಂಡಿರುವ ನಂಬಿಕೆಯೇ ಇದಕ್ಕೆ ಸಾಕ್ಷಿಯಾಗಿದೆ.

English summary
Toyota Platinum Etios Review — Is This Sedan Worthy Of The ‘Platinum’ Title?
Story first published: Tuesday, September 27, 2016, 12:40 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more