ಜಿಮ್ ಎಫೆಕ್ಟ್: ಆಟೊಮೊಬೈಲ್ ಕಂಪೆನಿಗಳ ಲಗ್ಗೆ

Toyota Small Car
ಬೆಂಗಳೂರು, ಜೂ.9: ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆ ಸಮಾವೇಶ 2010 ದಲ್ಲಿ ಪ್ರಮುಖ ಆಟೊಮೊಬೈಲ್ ಕಂಪೆನಿಗಳು ಹೊಸ ಘಟಕಗಳನ್ನು ತೆರೆಯಲು ಹಾಗೂ ಇರುವ ಘಟಕಗಳನ್ನು ವಿಸ್ತರಿಸಲು ಆಸಕ್ತಿ ತೋರಿದ್ದು, ಈಗಾಗಲೇ ಡಿಪ್ಲೋಮಾ, ಪದವೀಧರರಿಗೆ ಉದ್ಯೋಗ ಅವಕಾಶದ ಹೊಳೆ ಹರಿಸಲು ಸಜ್ಜಾಗಿವೆ.

ಪ್ರಮುಖ ಆಟೊ ಕಾಂಪೊನೆಂಟ್ ಗಳನ್ನು ತಯಾರಿಸುವ ಬಾಷ್ ಸಮೂಹ ಬಿಡದಿ ಸಮೀಪ 100 ಎಕರೆ ಪ್ರದೇಶದಲ್ಲಿ ಆಟೊ ಕಾಂಪೊನೆಂಟ್ ಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದು ಇದಕ್ಕೆ 550 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಿದೆ.

ಜನರಲ್ ಮೋಟಾರ್‍ಸ್ ತನ್ನ ಬೆಂಗಳೂರಿನ ಸಂಶೋಧನಾ ಮತ್ತು ಅಭಿವೃದ್ದಿ ಕೇಂದ್ರದ ಸಿಬ್ಬಂದಿಗಳ ಸಂಖ್ಯೆಯನ್ನು ಪ್ರಸಕ್ತ 1600 ರಿಂದ 2000ಕ್ಕೇರಿಸಲು ಸಿದ್ದತೆ ನಡೆಸಿದೆ. ಕಂಪೆನಿ ಇಲ್ಲಿ ತನ್ನ ಸಣ್ಣ ವಿದ್ಯುತ್ ಚಾಲಿತ ಕಾರನ್ನು ಜಾಗತಿಕ ಮತ್ತು ಸ್ಥಳೀಯ ತಂತ್ರಜ್ಞಾನದೊಂದಿಗೆ ಅಭಿವೃದ್ದಿ ಪಡಿಸುತ್ತಿದೆ.

ಜಿಎಂ ಕಂಪೆನಿ ಪಿಹೆಚ್ ಡಿ ಪದವೀಧರರು, ಇಂಜಿನಿಯರುಗಳು ಹಾಗೂ ಡಿಪ್ಲೋಮಾ ತಾಂತ್ರಿಕ ಸಿಬ್ಬಂದಿಗಳ ನೇಮಕಕ್ಕೆ ಮುಂದಾಗಿದೆ. 2011ರಲ್ಲಿ ತನ್ನ ಸಣ್ಣ ವಿದ್ಯುತ್ ಚಾಲಿತ ಕಾರು ವೊಲ್ಟ್ ನ್ನು ಅಮೇರಿಕಾದಲ್ಲಿ ಬಿಡುಗಡೆ ಮಾಡಲಿದ್ದು, ಇದು ಟಾಟಾನ ನ್ಯಾನೋಗೆ ಪ್ರತಿಸ್ಪರ್ದಿ ಎನ್ನಲಾಗುತ್ತಿದೆ. ಭಾರತದಲ್ಲಿ ಈ ಕಾರು ಬಿಡುಗಡೆಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಕಂಪೆನಿ ಹೇಳಿದೆ.

ಟೊಯೋಟಾ ಕಿರ್ಲೋಸ್ಕರ್ ತನ್ನ ಎರಡನೇ ಘಟಕವನ್ನು ಬಿಡದಿಯಲ್ಲಿ 3200 ಕೋಟಿ ರೂಪಾಯಿಗಳ ಹೂಡಿಕೆ ಮೂಲಕ ನಿರ್ಮಿಸಲಿದೆ. ಇಲ್ಲಿ ವಾರ್ಷಿಕ 70 ಸಾವಿರ ಕಾರುಗಳ ಉತ್ಪಾದನಾ ಸಾಮರ್ಥ್ಯ ಇದೆ. ಎರಡನೇ ಹಂತದಲ್ಲಿ ಉತ್ಫಾದನೆಯನ್ನು 2,00,000 ಕ್ಕೇರಿಸಲು ಕಂಪೆನಿ ಸಿದ್ದತೆ ನಡೆಸಿದೆ.

ಸಣ್ಣ ಕಾರು ಎಟಿಯೋಸ್ ನ್ನು ಈ ವರ್ಷಾಂತ್ಯದಲ್ಲಿ ಬಿಡುಗಡೆ ಮಾಡಲಿದೆ. ಕಂಪೆನಿ ದೇಶಾದ್ಯಂತ ಹರಡಿರುವ ತನ್ನ ಮಾರಾಟಗಾರರ ಸಂಖ್ಯೆಯನ್ನು 74 ರಿಂದ 150 ಕ್ಕೆ ಏರಿಸಲಿದೆ.

Most Read Articles

Kannada
Story first published: Thursday, June 10, 2010, 11:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X