SUV ಮಾರುಕಟ್ಟೆಗೆ ಸ್ಕೋಡಾ ಯೆತಿ ಎಂಟ್ರಿ

Skoda Yeti
ನವದೆಹಲಿ, ನ.16:ಚೆಕ್ ಗಣರಾಜ್ಯ ಮೂಲದ ಕಾರು ತಯಾರಕ ಸ್ಕೋಡಾ, ಭಾರತದ ಐಷಾರಾಮಿ ವಾಹನಗಳ ಮಾರುಕಟ್ಟೆಗೆ ಅಧಿಕೃತವಾಗಿ ಕಾಲಿರಿಸಿದೆ. ವೋಕ್ಸ್ ವ್ಯಾಗನ್ ನ ತಂತ್ರಜ್ಞಾನ ಸಹಾಯ ಪಡೆಯುತ್ತಿರುವ ಸ್ಕೋಡಾ ಇಂಡಿಯಾ ಐಷಾರಾಮಿ ವಾಹನ ಸ್ಕೋಡಾ "ಯೆತಿ"ಯನ್ನು ಭಾರತದಲ್ಲಿ ಪರಿಚಯಿಸಿದೆ. ಯೆತಿಯ ಎರಡು ಮಾದರಿಗಳ ಬೆಲೆ ಸುಮಾರು 15.4 ಲಕ್ಷ ಹಾಗೂ 16.62 ಲಕ್ಷ(ಎಕ್ಸ್ ಷೋರೂಂ, ನವದೆಹೆಲಿ)ರು ಎಂದು ಸಂಸ್ಥೆ ಪ್ರಕಟಿಸಿದೆ.

ಸ್ಕೋಡಾ ಯೆತಿಯಲ್ಲಿ 2.0ಲೀ ಕಾಮನ್ ರೈಲ್ ಡೀಸೆಲ್ ಇಂಜಿನ್ ಇದ್ದು, 140 bhp ಶಕ್ತಿ ಹೊಂದಿದೆ. ಫೋರ್ ವೀಲ್ ಡ್ರೈವ್, ಬೇಕಾದ ಹಾಗೆ ಬದಲಿಸಬಲ್ಲ ಸೀಟು ವ್ಯವಸ್ಥೆ,6 ಏರ್ ಬ್ಯಾಗ್ ಸೇರಿದಂತೆ ಅನೇಕ ಸುರಕ್ಷಿತ ಸೌಲಭ್ಯಗಳನ್ನು ಹೊಂದಿದೆ.

ಮಿಟ್ಸು ಬಿಷಿ ಔಟ್ ಲ್ಯಾಂಡರ್, ಮಾರುತಿ ಗ್ರ್ಯಾಂಡ್ ವಿಟಾರ, ಫೋರ್ಡ್ ಎಂಡೇವರ್ ಬೆಲೆ ಸರಿದೂಗುವಂತೆ ಸ್ಕೋಡಾ ಯೆತಿ ಬೆಲೆಯನ್ನು ಹೊಂದಿಸಲಾಗಿದ್ದು, ಔರಂಗಾಬಾದ್ ನ ಘಟಕ ಸದಾ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಸದ್ಯ SUV ಮಾರುಕಟ್ಟೆಯಲ್ಲಿ ಟೋಯೋಟಾ ಫೊರ್ಚುನರ್, ಹೋಂಡಾ CRV, ಚೆವಿ ಕ್ಯಾಪ್ಟಿವಾ ಹಾಗೂ ನಿಸ್ಸಾನ್ ನ ಎಕ್ಸ್ ಟ್ರೈಲ್ ಮುಂಚೂಣಿಯಲ್ಲಿವೆ.

SUV ಪರಿಚಯಿಸಿದ ನಂತರ ಸ್ಕೋಡಾ ಫ್ಯಾಬಿಯ ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ ಹೊಸ ಆವೃತ್ತಿಗಳನ್ನು ಸಂಸ್ಥೆ ಹೊರ ತರಲಿದೆ. ಅಲ್ಲದೆ, 2012ರ ವೇಳೆಗೆ ಸಣ್ಣಕಾರುಗಳ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.

Most Read Articles

Kannada
English summary
The new SUV from the Czech car company Skoda is all set to roll down on the Indian roads in a couple of days. Priced at Rs.17 lakhs (Delhi showroom) the car is set to counter the popularity of Mitsubishi Outlander, Maruti Grand Vitara and Ford Endeavor- all at the range of Rs15-20 lakhs
Story first published: Thursday, June 14, 2012, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X