ಆಡಿ ಅಕ್ಟೋಬರ್ ಮಾರಾಟ ಶೇ. 35ರಷ್ಟು ಹೆಚ್ಚಳ

Posted By:
To Follow DriveSpark On Facebook, Click The Like Button
Audi India Reports 35 Increase October 2011 Sales
ಆಡಿ ಇಂಡಿಯಾಕ್ಕೆ ದೇಶದಲ್ಲಿ ಸದ್ಯ ಮೂರನೇ ಸ್ಥಾನ. ಪ್ರತಿಸಾರಿಯೂ ಮಾರಾಟ ಹೆಚ್ಚಿಸಿಕೊಳ್ಳುತ ಸಾಗುವ ಆಡಿಯನ್ನು ನೋಡಿ ಅದರ ಪ್ರತಿಸ್ಪರ್ಧಿ ಕಂಪನಿಗಳಾದ ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯು ಕೂಡ ಬೆಚ್ಚಿಬೀಳಬಹುದು. ಯಾಕೆಂದರೆ ಆಡಿ ಕಾರು ಮಾರಾಟಗಳು ಮತ್ತೆ ಮತ್ತೆ ಗಮನಾರ್ಹವಾಗಿ ಏರಿಕೆ ಮುಂದುವರೆಸುತ್ತಿದೆ.

ಅಕ್ಟೋಬರ್ ನಲ್ಲೂ ಕೂಡ ಮಾರಾಟದಲ್ಲಿ ಆಡಿ ಮೇಲುಗೈ ಸಾಧಿಸಿದೆ. ಜರ್ಮನಿಯ ದುಬಾರಿ ಕಾರು ತಯಾರಿಕಾ ಕಂಪನಿ ಅಕ್ಟೋಬರ್ 2011ರಲ್ಲಿ 482 ಐಷಾರಾಮಿ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ 357 ಕಾರು ಮಾರಾಟಕ್ಕೆ ಹೋಲಿಸಿದರೆ ಶೇಕಡ 35ರಷ್ಟು ಏರಿಕೆ ಕಂಡಿದೆ.

ಈ ವರ್ಷದ ಜನವರಿ ತಿಂಗಳಿನಿಂದ ಅಕ್ಟೋಬರ್ ವರೆಗೆ ಕಂಪನಿಯು ಒಟ್ಟಾರೆ 4,692 ಕಾರು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯ 2,535 ಕಾರು ಮಾರಾಟಕ್ಕೆ ಹೋಲಿಸಿದರೆ ಶೇಕಡ 85.09ರಷ್ಟು ಏರಿಕೆ ದಾಖಲಿಸಿದೆ.

"ಕಂಪನಿಯು ಹೊರತಂದ ಹೊಸ ಮಾಡೆಲ್ ಕಾರುಗಳು ಮಾರಾಟ ಹೆಚ್ಚಿಸಲು ನೆರವಾಗಿದೆ" ಎಂದು ಆಡಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದ ಮಾರುಕಟ್ಟೆಯಲ್ಲಿ ಸದ್ಯ ಆಡಿ ಮೂರನೇ ಸ್ಥಾನದಲ್ಲಿದೆ. ಕಂಪನಿಯು ತನ್ನ ಪ್ರತಿಸ್ಪರ್ಧಿಗಳಾದ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಂಪನಿಗಳಿಗೆ ಪೈಪೋಟಿ ನೀಡಲು ಯತ್ನಿಸುತ್ತಿದೆ.

"ಈ ವರ್ಷ ಕೂಡ ಕಂಪನಿಗೆ ಹೆಚ್ಚು ಯಶಸ್ವಿ ವರ್ಷ. ಕಂಪನಿಯು ಇನ್ನು ಮುಂದೆಯೂ ಇಲ್ಲಿ ಆಕರ್ಷಕ ಉತ್ಪನ್ನಗಳನ್ನು ಹೊರತರುವುದನ್ನು ಮುಂದುವರೆಸಲಿದ್ದೇವೆ. ಜೊತೆಗೆ ಮಾರಾಟ ಜಾಲವನ್ನೂ ಹೆಚ್ಚಿಸಲಿದ್ದೇವೆ" ಎಂದು ಆಡಿ ಇಂಡಿಯಾ ಮುಖ್ಯಸ್ಥ ಮೈಕಲ್ ಪಾರ್ಷ್ಕೆ ಹೇಳಿದ್ದಾರೆ.

English summary
Audi India continues its positive sales trend in October too. The German premium car maker has said its sales had increased by a sizable 35 per cent to 482 units from the previous October's sales figure of 357 units.
Story first published: Thursday, November 3, 2011, 15:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark