ಛೇ, ಹೊಸ ಅಂಬಾಸಡರ್ ಕಾರು ಬರೋಲ್ವಂತೆ!

ಕಂಪನಿಯು ದೆಹಲಿ ವಾಹನ ಪ್ರದರ್ಶನದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದೆ. ಇದರೊಂದಿಗೆ ಹಿಂದೂಸ್ತಾನ್ ಮೋಟರ್ಸ್ ನ ಪಾಲುದಾರ ಕಂಪನಿ ಮಿಟ್ಸುಬಿಸಿ ಕೂಡ ಯಾವುದೇ ವಾಹನವನ್ನು ಪ್ರದರ್ಶಿಸದಿರಲು ನಿರ್ಧರಿಸಿದೆ. ಈಗಾಗಲೇ ನಷ್ಟವನ್ನು ಅನುಭವಿಸುತ್ತಿರುವ ಈ ಕಂಪನಿಗಳೆರಡು ವಾಹನ ಪ್ರದರ್ಶನದಲ್ಲಿ ಭಾಗವಹಿಸಿ ಇನ್ನಷ್ಟು ಕಳೆದುಕೊಳ್ಳದಿರಲು ನಿರ್ಧರಿಸಿವೆ.
ಆದರೆ ಹಿಂದೂಸ್ತಾನ್ ಮೋಟರ್ಸ್ ಕಂಪನಿಯು ಒಂದು ಆವೃತ್ತಿ ಅಂಬಾಸಡರ್ ಮಾತ್ರ ಹೊಂದಿದೆ. ಮಿಟ್ಸುಬಿಸಿ ಕಂಪನಿಯು ದೇಶದಲ್ಲಿ ಸ್ಪೋರ್ಟ್ಸ್ ಕಾರನ್ನು ಪರಿಚಯಿಸಿದೆ. ಮಿಟ್ಸುಬಿಸಿ ಕಂಪನಿಯು ಸಣ್ಣಕಾರು ಮಿರೇಜನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪರಿಚಯಿಸಲು ನಿರ್ಧರಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ತನ್ನ ನಿರ್ಧಾರವನ್ನು ವಾಪಸ್ ತೆಗೆದುಕೊಂಡಿದೆ. ಮಿರೇಜ್ ಸಣ್ಣಕಾರನ್ನು ಕಂಪನಿಯು ಇತ್ತೀಚೆಗೆ ಟೋಕಿಯೊ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.
ದೇಶದ ವಾಹನ ಮಾರುಕಟ್ಟೆಯಲ್ಲಿ ಹಿಂದೂಸ್ತಾನ್ ಮೋಟರ್ಸ್ ಮತ್ತು ಮಿಟ್ಸುಬಿಸಿ ಕಂಪನಿಗಳು ಮಾರಾಟ ಹೆಚ್ಚಿಸುವಲ್ಲಿ ವಿಫಲವಾಗಿವೆ. ಕಂಪನಿಗಳ ಕಾರ್ಯತಂತ್ರಕ್ಕೆ ಹಣಕಾಸು ನಷ್ಟಗಳು ಹೊಡೆತ ನೀಡಿವೆ. ಹೀಗಾಗಿ ಯಾವುದೇ ಹೆಚ್ಚುವರಿ ವೆಚ್ಚ ಮಾಡದಿರಲು ನಿರ್ಧರಿಸಿವೆ.


Click it and Unblock the Notifications








