ಹ್ಯುಂಡೈ ಕಾರುಗಳಿಗೆ 82 ಸಾವಿರ ರು.ವರೆಗೆ ಡಿಸ್ಕೌಂಟ್!!

Posted By:
Hyundai Offers Discounts Before Price Hike
ಹೆಚ್ಚಿನ ಕಾರು ಕಂಪನಿಗಳು ದರ ಹೆಚ್ಚಳ ಪ್ರಕಟಣೆಯಲ್ಲಿ ಬ್ಯುಸಿಯಾಗಿರುವಾಗ ಹ್ಯುಂಡೈ ಮಾತ್ರ ದರ ಇಳಿಕೆ ಮಾಡುವುದಾಗಿ ಪ್ರಕಟಿಸಿದೆ. ಆದರೆ ಕಂಪನಿಯು ಕೇವಲ ಪೆಟ್ರೋಲ್ ಆವೃತ್ತಿಗಳ ದರ ಮಾತ್ರ ತಗ್ಗಿಸಲಿದೆ. ಪೆಟ್ರೋಲ್ ಕಾರು ಮಾರಾಟ ಇಳಿಕೆ ಕಂಡಿರುವುದರಿಂದ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ.

ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

* ಹ್ಯುಂಡೈ ಇಯಾನ್ ಕಾರು ಖರೀದಿಗೆ ಹತ್ತು ಸಾವಿರ ರು. ಬೋನಸ್

* ಫ್ಲೂಡಿಕ್ ವೆರ್ನಾ ಪೆಟ್ರೋಲ್ ಆವೃತ್ತಿಗೆ 15 ಸಾವಿರ ರು. ಡಿಸ್ಕೌಂಟ್

* ಹ್ಯುಂಡೈ ಅಸೆಂಟ್ ಕಾರಿಗೆ 30 ಸಾವಿರ ರು. ದರ ವಿನಾಯಿತಿ.

* ಹ್ಯುಂಡೈ ಐ10 ಕಾರಿಗೆ 50 ಸಾವಿರ ರು. ಡಿಸ್ಕೌಂಟ್

* ಐ120 ಪೆಟ್ರೋಲ್ ಆವೃತ್ತಿಗೆ ಬರೋಬ್ಬರಿ 42 ಸಾವಿರ ರು. ಡಿಸ್ಕೌಂಟ್

* ಸ್ಯಾಂಟ್ರೊ ಹ್ಯಾಚ್ ಬ್ಯಾಕಿಗೆ 40 ಸಾವಿರ ರು. ದರ ವಿನಾಯಿತಿ.

* ಸೊನಾಟಾ ಕಾರುಗಳಿಗೆ 82 ಸಾವಿರ ರು. ಡಿಸ್ಕೌಂಟ್

ಹ್ಯುಂಡೈ ಕಂಪನಿಯ ದರ ವಿನಾಯಿತಿ ಪ್ರಕ್ರಿಯೆ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಮುಂದಿನ ವರ್ಷದ ಜನವರಿಯಿಂದ ಹೆಚ್ಚಿನ ಕಾರು ಕಂಪನಿಗಳು ದರ ಹೆಚ್ಚಿಸಲು ನಿರ್ಧರಿಸಿವೆ. ಹೀಗಾಗಿ ಈ ತಿಂಗಳು ಹ್ಯುಂಡೈ ಕಾರು ಖರೀದಿಗೆ ಉತ್ತಮ ಮಾಸವೆಂದೆನಿಸುತ್ತಿದೆ.

English summary
Hyundai Motors is offering discounts on its entire range of models built in India to boost its sales during the last month of the year. However the discounts are limited to Hyundai's petrol cars only. Hyundai Eon small car will get a loyalty bonus of Rs.10,000, Fluidic Verna discount of Rs.15,000 for its petrol models, The i10 hatchback will get a discount of Rs.50,000. Read More..
Story first published: Friday, December 9, 2011, 16:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark