ಪ್ರಯಾಣಿಕ ವಾಹನ ಮಾರುಕಟ್ಟೆಗೆ ಲೇಲ್ಯಾಂಡ್ ಲಗ್ಗೆ

ಅಶೋಕ್ ಲೇಲ್ಯಾಂಡ್ ಮತ್ತು ನಿಸ್ಸಾನ್ ಜೊತೆಯಾಗಿ ನಿಸ್ಸಾನ್ ಅಶೋಕ್ ಲೇಲ್ಯಾಂಡ್ ಟೆಕ್ನಾಲಜಿಸ್ ಲಿಮಿಟೆಡ್ ಎಂಬ ಜಂಟಿ ಉದ್ಯಮ ಸ್ಥಾಪಿಸಿವೆ. ಈ ಎರಡು ಕಂಪನಿಗಳು ಜೊತೆಯಾಗಿ ಇತ್ತೀಚೆಗೆ ಹಗುರ ವಾಣಿಜ್ಯ ವಾಹನ ದೋಸ್ತ್ ಪರಿಚಯಿಸಿದ್ದವು.
ಇದೀಗ ಜಂಟಿ ಉದ್ಯಮಗಳು ಜೊತೆಯಾಗಿ ಮತ್ತೊಂದು ವಿಸ್ತರಣಾ ಯೋಜನೆಗೆ ಮುಂದಾಗಿವೆ. ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಗೆ ಲಗ್ಗೆಯಿಡಲು ನಿಸ್ಸಾನ್ ಅಶೋಕ್ ಲೇಲ್ಯಾಂಡ್ ನಿರ್ಧರಿಸಿದ್ದು, ಇನ್ನು ಮುಂದೆ ಲೇಲ್ಯಾಂಡ್ ಕಾರುಗಳು ರಸ್ತೆಯಲ್ಲಿ ಕಾಣಸಿಗಲಿವೆ.
ಪ್ರಯಾಣಿಕ ಕಾರು ಮಾತ್ರವಲ್ಲದಢ ಹಗುರ ವಾಣಿಜ್ಯ ವಾಹನಗಳನ್ನು ಕೂಡ ಜಂಟಿ ಕಂಪನಿ ಪರಿಚಯಿಸಲಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಹಿಂದೂಜಾ ಆಟೋಮೋಟಿವ್ ಲಿಮಿಟೆಡ್ ಉಪಾಧ್ಯಕ್ಷ ಮತ್ತು ನಿಸ್ಸಾನ್ ಅಶೋಕ್ ಲೇಲ್ಯಾಂಡ್ ಚೇರ್ಮನ್ ವಿ ಸುಮಂತ್ರನ್ ಮಾಹಿತಿ ನೀಡಿದ್ದಾರೆ.
" ನಾವು ದೋಸ್ಟ್ ವಾಣಿಜ್ಯ ವಾಹನವನ್ನು ಸೆಪ್ಟಂಬರ್ 2011ರಂದು ಪರಿಚಯಿಸಿದ್ದೇವೆ. ಇದಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈಗಾಗಲೇ 3 ಸಾವಿರ ಜನರು ಬುಕ್ಕಿಂಗ್ ಮಾಡಿದ್ದಾರೆ" ಎಂದು ಸುಮತ್ರನ್ ಹೇಳಿದ್ದಾರೆ.


Click it and Unblock the Notifications








