ಸ್ಕೋಡಾ ರಾಪಿಡ್ ರಸ್ತೆಗಿಳಿಯಲು ಕ್ಷಣಗಣನೆ

Posted By:
Skoda Rapid Set To Be Launched Nov 16
ಝೆಕ್ ಗಣರಾಜ್ಯದ ಕಾರು ಕಂಪನಿ ಸ್ಕೋಡಾದ ಬಹುನಿರೀಕ್ಷಿತ ಕಾರು ರಾಪಿಡ್ ಇಂದು ಅಂದರೆ ನವೆಂಬರ್ ಹದಿನಾರರಂದು ರಸ್ತೆಗಿಳಿಯಲಿದೆ. ಇಂದು ಟೆಲಿವಿಷನ್ ಕಾರ್ಯಕ್ರಮವೊಂದರ ಮೂಲಕ ರಾಪಿಡ್ ಅನಾವರಣಗೊಳ್ಳಲಿದೆ.

ಫೋಕ್ಸ್ ವ್ಯಾಗನ್ ವೆಂಟೊ ಫ್ಲಾಟ್ ಫಾರ್ಮ್ ನಲ್ಲಿ ನೂತನ ರಾಪಿಡ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಹಳೆಯ ಒಕ್ಟಾವಿಯಾ ಕಾರಿನ ಸ್ಥಾನ ತುಂಬುವ ನಿರೀಕ್ಷೆಯಿದೆ.

ವೆಂಟೊದೊಂದಿಗೆ ರಾಪಿಡ್ ನಂಟು ಇಲ್ಲಿಗೆ ಮುಗಿಯುವುದಿಲ್ಲ. ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಂಪನಿಗಳು ಫೋಕ್ಸ್ ವ್ಯಾಗನ್ ಗ್ರೂಪ್ ನ ಸಂಸ್ಥೆಗಳು. ಇವೆರಡು ಕಂಪನಿಗಳು ವಾಹನ ಬಿಡಿಭಾಗಗಳನ್ನು ವಿನಿಮಯ ಮಾಡಿಕೊಳ್ಳುತ್ತಿವೆ.

ನಿಜ ಹೇಳಬೇಕೆಂದರೆ ವೆಂಟೊ ಕಾರಿನ ಬಾಡಿ ಪ್ಯಾನೆಲನ್ನೇ ರಾಪಿಡ್ ಗೆ ಬಳಸಲಾಗಿದೆ. ಸ್ಕೋಡಾ ರಾಪಿಡ್ ಕಾರನ್ನು ಫೋಕ್ಸ್ ವ್ಯಾಗನಿನ ಚಕನ್ ಘಟಕದಲ್ಲಿಯೇ ಉತ್ಪಾದಿಸಲಾಗುತ್ತಿದೆ. ಸ್ಕೋಡಾದ ಔರಂಗಬಾದ್ ಘಟಕದಲ್ಲಿ ಉತ್ಪಾದಿಸಲಾಗುತ್ತಿಲ್ಲ.

ವೆಂಟೊ ಕಾರಿನಲ್ಲಿರುವ ಎಂಜಿನ್ ರಾಪಿಡ್ ನಲ್ಲೂ ಇರಲಿದೆ. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಸ್ಕೋಡಾ ಕಂಪನಿಯು ಒಂದು ತಿಂಗಳ ಹಿಂದೆ ರಾಪಿಡ್ ಉತ್ಪಾದನೆ ಆರಂಭಿಸಿತ್ತು.

ಇದೀಗ ಕೆಲವು ನೂರು ರಾಪಿಡ್ ಕಾರುಗಳು ಉತ್ಪಾದನೆಯಾಗಿರುವ ನಿರೀಕ್ಷೆಯಿದೆ. ಹೀಗಾಗಿ ಶೀಘ್ರದಲ್ಲಿ ಬುಕ್ಕಿಂಗ್ ಮಾಡಿದವರಿಗೆ ರಾಪಿಡ್ ವೇಟಿಂಗ್ ಪಿರೆಯಿಡ್ ಕಡಿಮೆ ಇರಲಿದೆ.

ಗ್ರಾಹಕರಿಗೆ ವೇಟಿಂಗ್ ಪಿರೆಯಿಡ್ ಕಡಿಮೆಗೊಳಿಸಲು ಕಾರು ರಸ್ತೆಗಿಳಿಯುವ ಮುನ್ನವೇ ಉತ್ಪಾದನೆ ಆರಂಭಿಸಲಾಗಿದೆ. ಟೊಯೊಟಾ ಕೂಡ ತನ್ನ ಇಟಿಯೋಸ್ ಮತ್ತು ಇಟಿಯೋಸ್ ಲಿವಾ ಕಾರುಗಳನ್ನು ರಸ್ತೆಗಿಳಿಯುವ ಮುನ್ನವೇ ಉತ್ಪಾದಿಸಿತ್ತು.

ವೆಂಟೊದಂತಹ ಸ್ಕೋಡಾ ಕಾರು ಖರೀದಿಸಲು ಬಯಸುವರಿಗೆ ರಾಪಿಡ್ ಉತ್ತಮ ಆಯ್ಕೆಯಾದೀತು. ಸ್ಕೋಡಾ ರಾಪಿಡ್ ದರ ಫೋಕ್ಸ್ ವ್ಯಾಗನ್ ವೆಂಟೊಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಹೀಗಾಗಿ ವೆಂಟೊ ಕಾರು ಕೊಂಚ ದುಬಾರಿ ಎಂದೆನಿಸಿದರೆ ರಾಪಿಡ್ ಖರೀದಿಸಬಹುದು.

English summary
The Skoda Rapid will be the Czech carmaker's latest entry level sedan., It will replace the revered Octavia. The Rapid was unveiled in India during a TV programme and will now be seen in the metal in showrooms today. The Skoda Rapid is built on the platform used by the Volkswagen Vento.
Story first published: Wednesday, November 16, 2011, 11:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark