ಟೈಮ್ಸ್ ವಾಹನ ಪ್ರದರ್ಶನದಲ್ಲಿ ಏನಿತ್ತು ವಿಶೇಷ?

Posted By:
Times Auto Expo In Bangalore Disappoints
ವಾಹನ ಪ್ರೇಮಿಗಳಿಗೆ ಬೆಂಗಳೂರು ಯಾವತ್ತೂ ಆಕರ್ಷಣೆ. ಇಲ್ಲಿ ವರ್ಷಕ್ಕೆ ಹಲವಾರು ವಾಹನ ಪ್ರದರ್ಶನಗಳು ನಡೆಯುತ್ತವೆ. ಇತ್ತೀಚೆಗೆ ಅರಮನೆ ಮೈದಾನದಲ್ಲಿ ಟೈಮ್ಸ್ ಆಟೋ ಶೋ ನಡೆದಿತ್ತು. ಅದರ ಝಲಕ್ ಇಲ್ಲಿದೆ.

ಅರಮನೆ ಮೈದಾನದಲ್ಲಿ ನಡೆದ ಈ ಹಿಂದಿನ ವಾಹನ ಪ್ರದರ್ಶನಗಳಿಗೆ ಹೋಲಿಸಿದರೆ ಟೈಮ್ಸ್ ಆಟೋ ಶೋ ಸಪ್ಪೆ. ಯಾಕೆಂದರೆ ಅದು ಡೀಲರುಗಳ ಮಾರಾಟ ಸಂತೆಯಂತೆ ಕಾಣುತ್ತಿತ್ತು. ಅಲ್ಲಿ ನಗರದ ರಸ್ತೆಯಲ್ಲಿ ಕಾಣುವ ವಾಹನಗಳಿದ್ದವು. ಹೊರತಾಗಿ ಹೊಸತು, ವಿನೂತನವಾದದ್ದು ಏನೂ ಇರಲಿಲ್ಲ.

ಈ ಹಿಂದೆ ನಡೆದ ವಾಹನ ಪ್ರದರ್ಶನಗಳಲ್ಲಿ ವಿಂಟೇಜ್ ಕಾರು ಮತ್ತು ಬೈಕುಗಳಂತಹ ಆಕರ್ಷಣೆಗಳಿದ್ದವು. ಟೈಮ್ಸ್ ವಾಹನ ಪ್ರದರ್ಶನದಲ್ಲಿ ಡರ್ಟ್ ಬೈಕ್ ರೈಡಿಂಗ್ ಹೊರತುಪಡಿಸಿ ಅಂತಹ ವಿಶೇಷ ಏನೂ ಇರಲಿಲ್ಲ. ಹಳೆಯ ಪ್ರದರ್ಶನಗಳಿಗೆ ಹೋಲಿಸಿದರೆ ಟೈಮ್ಸ್ ವಾಹನ ಪ್ರದರ್ಶನದ ಸ್ಥಳಾವಕಾಶವೇ ಕಡಿಮೆ.

ಟೊಯೊಟಾ, ಹ್ಯುಂಡೈ, ಫೋಕ್ಸ್ ವ್ಯಾಗನ್, ಹೋಂಡಾ, ಮಿಟ್ಸುಬಿಸಿ, ಮಹೀಂದ್ರ, ಮಾರುತಿ ಸುಜುಕಿ ಮತ್ತು ಸ್ಕೋಡಾ ಕಂಪನಿಗಳ ಕಾರುಗಳು ಪ್ರದರ್ಶನದಲ್ಲಿದ್ದವು. ಯಮಹಾ, ಟಿವಿಎಸ್, ಹೀರೋ ಮೊಟೊಕಾರ್ಪ್ ಮತ್ತು ಹ್ಯೊಸಂಗ್ ಕಂಪನಿಯ ಬೈಕುಗಳಿದ್ದವು. ಇದರಲ್ಲಿ ಯಾವುದೇ ವಾಹನಗಳು ಗ್ರಾಹಕರಿಗೆ ಸರ್ ಪ್ರೈಸ್ ಉಂಟು ಮಾಡದು ವಿಶೇಷ.

ಉದಾಹರಣೆಗೆ ಹೋಂಡಾ ಕಂಪನಿಯ ನೂತನ ಸಿಟಿ ಕಾರನ್ನು ನೋಡಲು ಹೋದವರಿಗೆ ನಿರಾಶೆ ಗ್ಯಾರಂಟಿ. ಅಲ್ಲಿ ಹಳೆಯ ಸಿಟಿ ಸೆಡಾನ್ ಕಾರನ್ನು ಇಡಲಾಗಿತ್ತು. ಹೋಂಡಾ ಮಾತ್ರವಲ್ಲದೇ ಇತರ ಕಂಪನಿಗಳು ಕೂಡ ಇದೇ ರೀತಿ ಮಾಡಿದ್ದವು.

ಈ ವಾಹನ ಪ್ರದರ್ಶನದಲ್ಲಿ ಕೆಲವು ಸ್ಥಳೀಯ ಆಕ್ಸೆಸರಿ ಕಂಪನಿಗಳ ಉತ್ಪನ್ನಗಳು ಕೊಂಚ ಆಕರ್ಷಿಸಿದವು. ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸುವ ಇಸಿಯು ಉತ್ಪನ್ನ, ಕಾರು ಟ್ರಾಕಿಂಗ್, ಎಲ್ ಜಿ ಕಂಪನಿಯ ಹೊಸ ಮ್ಯೂಸಿಕ್ ಸಿಸ್ಟಮ್ ಮುಂತಾದ ಆಕ್ಸೆಸರಿಗಳಿದ್ದವು. ಡರ್ಟ್ ಬೈಕ್ ರೈಡ್ ಇಷ್ಟವಾಗುವಂತ್ತಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)

English summary
Times Auto Expo In Bangalore Disappoints. The display area was much smaller than previous events and these was not a single car on show that we had not seen on the street. One could easily say the event was organized to offer some new selling space for car dealers.
Story first published: Monday, December 19, 2011, 10:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark