ಕಾರು ಮತ್ತು ಸ್ಮಾರ್ಟ್ ಫೋನ್ ಯುಗಳಗೀತೆ

ಕಂಪನಿಯು ಕಾರುಗಳಿಗೆ ಅಡ್ವಾನ್ಸಡ್ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಈ ಕಾನ್ಸೆಪ್ಟ್ ಪರಿಚಯಿಸಲಾಗಿದೆ. ಈ ಕಾರನ್ನು ಟೊಯೊಟಾ ಬಾಸ್ ಅಕಿಯೊ ಟೊಯೊಡಾ ಅನಾವರಣ ಮಾಡಿದ್ದಾರೆ. ಈ ಕಾರು ಪರ್ಸನಲ್ ಕಂಪ್ಯೂಟರಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಕಾರಿನ ಇಂಟಿರಿಯರ್ ಪ್ಯಾನೆಲ್ ಸ್ಮಾರ್ಟ್ ಫೋನಿನಂತೆ ಕಾರ್ಯನಿರ್ವಹಿಸುತ್ತದೆ.
ಈ ಕಾರಿನ ಒಳಗಿನ ಪ್ಯಾನೆಲ್ ಸ್ಮಾರ್ಟ್ ಫೋನಿನಂತೆ ಕಾರ್ಯನಿರ್ವಹಿಸುತ್ತದೆ. ಅಂದರೆ ಸ್ಮಾರ್ಟ್ ಫೋನಿನಲ್ಲಿ ಮಾಡುವ ಎಲ್ಲಾ ಕಾರ್ಯಗಳನ್ನು ಇಲ್ಲಿ ಮಾಡಬಹುದಾಗಿದೆ. ಈ ಕಾರಿನ ಉತ್ಪಾದನೆ ಯಾವಾಗ? ಅಥವಾ ಉತ್ಪಾದನೆ ಮಾಡಲಾಗುವುದೇ ಎಂದು ಕಂಪನಿ ಖಚಿತ ಪಡಿಸಿಲ್ಲ. ಆದರೆ ಯಾವತ್ತಾದರೂ ಈ ಕಾರು ರಸ್ತೆಗಿಳಿಯುವುದಂತು ನಿಜವೆಂದು ಕಂಪನಿ ಹೇಳಿದೆ.
ಈ ಕಾರಿನ ಇನ್ನೊಂದು ವಿಶೇಷ ಆಕರ್ಷಕವಾಗಿದೆ. ಕಾರಿನ ಹೊರಗಡೆಯ ಸ್ಕ್ರೀನ್ ನಲ್ಲಿ ನಿಮಗೆ ಬೇಕಾದ ವಾಲ್ ಪೇಪರ್ ಅಳವಡಿಸಬಹುದಾಗಿದೆ. ಇದರಿಂದ ಈ ಕಾರು ದಿನಕ್ಕೊಂದು ರೀತಿ ಕಾಣಬಹುದು.
ಟೊಯೊಟಾ ಕಂಪನಿಯು ಇನ್ನೊಂದು ಕಾನ್ಸೆಪ್ಟ್ ಕಾರನ್ನು ಪರಿಚಯಿಸಿದೆ. ಅದರ ಹೆಸರು ಎಫ್ ಟಿ-ಇವಿ 3. ಇದು ಎಲೆಕ್ಟ್ರಿಕ್ ಕಾರಾಗಿದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 105 ಕಿ.ಮೀ. ಪ್ರಯಾಣಿಸಬಹುದಾಗಿದೆ. ಮತ್ತೊಂದು ಆಕರ್ಷಕ ಕಾರಿನ ಹೆಸರು ಅಕ್ವಾ. ಇದು ಶೀಘ್ರದಲ್ಲಿ ಜಪಾನ್ ರಸ್ತೆಗಿಳಿಯಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








