ವೆಂಟೊ ಮತ್ತಷ್ಟು ಆಕರ್ಷಕ, ಫಿಗೊಗೆ ಸವಾಲು

Vento Follows Ford Figo, Gets More Features
ಮಧ್ಯಮ ಗಾತ್ರದ ಸೆಡಾನ್ ಕಾರು ಮಾರುಕಟ್ಟೆಗೆ ಹಲವು ಹೊಸ ಹೊಸ ಕಾರುಗಳು ಬರುತ್ತಿವೆ. ಈ ಸೆಗ್ಮೆಂಟಿನಲ್ಲಿ ಫೋಕ್ಸ್ ವ್ಯಾಗನ್ ವೆಂಟೊ ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ.

ಇದೀಗ ನವೆಂಬರ್ 16ರಂದು ಸ್ಕೋಡಾ ರಾಪಿಡ್ ಕಾರನ್ನು ಹೊರತರಲಿದೆ. ಈ ಸಮಯದಲ್ಲಿ ಫೋಕ್ಸ್ ವ್ಯಾಗನ್ ವೆಂಟೊ ಕಾರಿಗೆ ಇನ್ನಷ್ಟು ಫೀಚರುಗಳನ್ನು ಸೇರಿಸಿ ಗ್ರಾಹಕರನ್ನು ಕೈ ಬೀಸಿ ಕರೆಯಲಿದೆ.

ಫೋಕ್ಸ್ ವ್ಯಾಗನ್ ಕಂಪನಿಯು ಹೊಸದಾಗಿ ಮೂರು ಫೀಚರುಗಳನ್ನು ಸೇರಿಸಲಿದೆ. ಇದರಿಂದ ವೆಂಟೊ ಇನ್ನಷ್ಟು ಆಕರ್ಷಕವಾಗಲಿದೆ. ವೆಂಟೊ ಹೈಲೈನ್ ಡೀಸೆಲ್ ಆವೃತ್ತಿ ಕಾರು ಈ ಕೆಳಗಿನ ಮೂರು ಹೊಸ ಫೀಚರುಗಳ ಜೊತೆ ದೊರಕಲಿದೆ.

1. ಸ್ಟೀಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೊಲ್ಸ್
2. ಪಾರ್ಕ್ ಡಿಸ್ಟೆನ್ಸ್ ಕಂಟ್ರೊಲ್
3. ಆರ್ ಸಿಡಿ 310 ಮ್ಯೂಸಿಕ್ ಸಿಸ್ಟಮ್, ಯುಎಸ್ ಬಿ, ನಾಲ್ಕು ಸ್ಪೀಕರುಗಳು

ಇದೀಗ ಫೋಕ್ಸ್ ವ್ಯಾಗನ್ ವೆಂಟೊ ಹೈಲೈನ್ ಡೀಸೆಲ್ ಕಾರು ಸುಮಾರು 9.77 ಲಕ್ಷ ರುಪಾಯಿಗೆ ಮಾರಾಟವಾಗುತ್ತಿದೆ. ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಹೋಲಿಸಿದರೆ ಇದು ಕೊಂಚ ದುಬಾರಿ ಕಾರು.

ಸ್ಕೋಡಾ ಕಂಪನಿಯ ಇಂತಹ ಕಾರುಗಳಿಗೆ ಹೋಲಿಸಿದರೆ ಯಾವತ್ತಿಗೂ ಫೋಕ್ಸ್ ವ್ಯಾಗನ್ ಕಾರುಗಳು ತುಟ್ಟಿ. ಇದರರ್ಥವೆಂದರೆ ರಾಪಿಡ್ ಕಾರು ವೆಂಟೊಗಿಂತ ಅಗ್ಗವಾಗಿರಲಿದೆ.

ರಾಪಿಡ್ ಮತ್ತು ವೆಂಟೊ ಕಾರುಗಳ ದರ ವ್ಯತ್ಯಾಸವಿರುವುದರಿಂದ ಇವೆರಡು ಕಾರುಗಳಿಗೆ ಪ್ರತ್ಯೇಕವಾಗಿ ಗ್ರಾಹಕರಿರುತ್ತಾರೆ. ಹೀಗಾಗಿ ಇವೆರಡು ಕಾರುಗಳ ನಡುವೆ ಅಂತಹ ಪೈಪೋಟಿ ಇರುವ ನಿರೀಕ್ಷೆಯಿಲ್ಲ.

ವೆಂಟೊ ಕಾರಿಗೆ ಇನ್ನಷ್ಟು ಫೀಚರು ಸೇರಿಸುವ ಫೋಕ್ಸ್ ವ್ಯಾಗನ್ ನಿರ್ಧಾರಕ್ಕೂ ಫೋರ್ಡ್ ಕಂಪನಿಯು ಫಿಗೊ ಹ್ಯಾಚ್ ಬ್ಯಾಕ್ ಕಾರಿಗೆ ಇನ್ನಷ್ಟು ಫೀಚರು ಸೇರಿಸುವ ನಿರ್ಧಾರಕ್ಕೂ ಸಾಮ್ಯತೆ ಇದೆ. ಆದರೆ ಫಿಗೊ ಪರಿಷ್ಕೃತ ಕಾರು ಬರುವುದು 2014ಕ್ಕೆ. ಅಲ್ಲಿವರೆಗೆ ವೆಂಟೊ ಭಯಪಡಬೇಕಿಲ್ಲ.

Most Read Articles

Kannada
English summary
Vento follows Ford Figo, Gets More Features. Volkswagen has decided add three new features to the Vento to make it more attractive. The Vento Highline diesel variant will now be available with the following features. Steering mounted audio controls. Park distance control, RCD 310 Music System with USB and 4 speakers as standard features...
Story first published: Saturday, November 12, 2011, 11:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X