ನಿರೀಕ್ಷೆಗಿಂತ ಬೇಗ ಬಂದ ಫೋಕ್ಸ್ ವ್ಯಾಗನ್ ಅಪ್

Posted By:
To Follow DriveSpark On Facebook, Click The Like Button
Volkswagen Up Sighted In Mumbai Before Auto Expo
ಶೀಘ್ರದಲ್ಲಿ ದೇಶದ ರಸ್ತೆಗೆ ಫೋಕ್ಸ್ ವ್ಯಾಗನ್ ಅಪ್ ಕಾರು ಆಗಮಿಸಲಿದೆ. ಜರ್ಮನಿಯ ಕಾರು ಕಂಪನಿ ಈಗಾಗಲೇ ಐದು ಸೀಟಿನ ಅಪ್ ಕಾರನ್ನು ದೇಶದ ರಸ್ತೆಗೆ ಸೂಕ್ತವಾಗುವಂತೆ ಅಭಿವೃದ್ಧಿಪಡಿಸಿದೆ. ಆದರೆ ಮೂರು ಡೋರಿನ ಅಪ್ ಕಾರು ಈಗಾಗಲೇ ಮುಂಬೈಗೆ ಬಂದು ತಲುಪಿದೆ. ಎನ್ ಡಿಟಿವಿ ಕಾರು ಮತ್ತು ಬೈಕ್ ಶೋನಲ್ಲಿ ಫೋಕ್ಸ್ ವ್ಯಾಗನ್ ಅಪ್ ಕಾರು ಪ್ರದರ್ಶಿಸಲಾಗಿದೆ.

ಫೋಕ್ಸ್ ವ್ಯಾಗನ್ ನೂತನ "ಅಪ್" ಸಣ್ಣ ಕಾರನ್ನು ವಿಶೇಷವಾಗಿ ಭಾರತ, ಬ್ರೆಝಿಲ್ ಮತ್ತು ಚೀನಾ ಮಾರುಕಟ್ಟೆಗಾಗಿ ಕಂಪನಿ ಅಭಿವೃದ್ಧಿಪಡಿಸಲಾಗಿದೆ. ಫ್ರಾಂಕ್ ಫರ್ಟ್ ವಾಹನ ಪ್ರದರ್ಶನದಲ್ಲಿ ನೂತನ ಅಪ್ ಕಾರನ್ನು ಪ್ರದರ್ಶಿಸಲಾಗಿತ್ತು. ಅಲ್ಲಿ ಐದು ಡೋರಿನ ಕಾರನ್ನು ಪ್ರದರ್ಶಿಸಲಾಗಿತ್ತು. ಆದರೆ ಈಗ ಮೂರು ಡೋರಿನ ಅಪ್ ಕಾರು ಬಂದಿದೆ.

ನೂತನ ಅಪ್ ಸಣ್ಣ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತಿದೆ. ಕಂಪನಿಯು ನೂತನ ಅಪ್ ಕಾರಿಗೆ ಯಾವುದೇ ಬಿಡುಗಡೆ ಸಮಾರಂಭ ಮಾಡದ್ದು ವಿಶೇಷ. ಜನವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ನೂತನ ಕಾರನ್ನು ಪ್ರದರ್ಶಿಸುವ ನಿರೀಕ್ಷೆಯಿತ್ತು. ಆದರೆ ಅದಕ್ಕೆ ಮೊದಲೇ ಇಲ್ಲಿಗೆ ಆಗಮಿಸಿರುವುದು ವಿಶೇಷ.

English summary
The Volkswagen Up is a small car that will be launched in India soon. The German carmaker has already developed a five door version of the Up especially for the Indian market. However a three door version has already been sighted in Mumbai. The image of the Volkswagen UP has been posted in Facebook on the NDTV Car and Bike Show's page.
Story first published: Thursday, November 24, 2011, 15:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark