2013 ಹೋಂಡಾ ಅಕಾರ್ಡ್ ಅಫಿಷಿಯಲ್ ಚಿತ್ರ ಬಹಿರಂಗ

Posted By:
ಹೋಂಡಾ ಕಾರು ಕಂಪನಿಯು 2013ರ ಹೋಂಡಾ ಅಕಾರ್ಡ್ ಕಾರಿನ ಚಿತ್ರವೊಂದನ್ನು ಪ್ರಕಟಿಸಿದೆ. "ನೂತನ ಅಕಾರ್ಡ್ ಕಾರು ಅತ್ಯುತ್ತಮ ಕೆತ್ತನೆ, ವಿನ್ಯಾಸದಿಂದ ಕೂಡಿದೆ" ಎಂದು ಹೋಂಡಾ ಕಂಪನಿಯು ನೂತನ ಅಕಾರ್ಡ್ ಕಾರನ್ನು ಬಣ್ಣಿಸಿದೆ.

ಸದ್ಯ ಇಲ್ಲಿರುವ ಚಿತ್ರ ನೋಡಿ. 2013ರ ಹೋಂಡಾ ಅಕಾರ್ಡ್ ಕಾರು ನಿಮಗೆ ಇಷ್ಟವಾಯಿತೇ. ಇದು ಹೊರಗೆ ಸಣ್ಣದಾಗಿ ಕಾಣುವ ಮತ್ತು ಒಳಗಡೆ ಹೆಚ್ಚು ಸ್ಥಳಾವಕಾಶವಿರುವ ಕಾರೆಂದು ಕಂಪನಿ ಹೇಳಿದೆ. ಜಪಾನಿನ ಹೋಂಡಾ ಕಂಪನಿಯ ವಿನ್ಯಾಸದ ಪರಿಣತಿಯನ್ನೆಲ್ಲ ಈ ಕಾರಿನಲ್ಲಿ ನೋಡಬಹುದು ಎಂದು ಹೇಳಲಾಗಿದೆ.

ಸದ್ಯ ರಸ್ತೆಯಲ್ಲಿರುವ ಹೋಂಡಾ ಅಕಾರ್ಡ್ ಕಾರೊಂದರ ಕುರಿತು ನೋಡೋಣ.

ಎಂಟನೇ ತಲೆಮಾರಿನ ಹೋಂಡಾ ಅಕಾರ್ಡ್ 2.4 ಲಕ್ಷುರಿ ಸವಾರಿಗೆ ಸೂಕ್ತವಾಗಿದೆ. ಪೆಟ್ರೊಲ್ ಎಂಜಿನ್ ಹೊಂದಿರುವ ಈ ಕಾರಿನ ದರ 22.30 ಲಕ್ಷ ರು. ಆಸುಪಾಸಿನಲ್ಲಿದೆ. ಈ ಕಾರು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಆಯ್ಕೆಗಳಲ್ಲಿ ದೊರಕುತ್ತಿದೆ.

ಡಿಪ್ಲಸ್ ಸೆಗ್ಮೆಂಟಿನ ನಾಯಕನಂತೆ ಕಾಣುವ ಅಕಾರ್ಡ್ 2.4 ಕಾರು ಸ್ಕೋಡಾ ಸೂಪರ್ಬ್, ಬಿಎಂಡಬ್ಲ್ಯು 3 ಸೀರಿಸ್, ಆಡಿ ಎ 4 ಕಾರುಗಳಿಗೆ ಎದುರಾಳಿ. ಅಕಾರ್ಡ್ ಕಾರು ನಗರದಲ್ಲಿ ಪ್ರತಿಲೀಟರ್ ಪೆಟ್ರೊಲ್ ಗೆ 7.8 ಕಿ.ಮೀ. ಮತ್ತು ಹೆದ್ದಾರಿಯಲ್ಲಿ 11.1 ಕಿ.ಮೀ. ಮೈಲೇಜ್ ನೀಡುತ್ತದೆ. ಆಟೋಮ್ಯಾಟಿಕ್ ಗೇರ್ ಹೊಂದಿರುವ ಅಕಾರ್ಡ್ ಕೊಂಚ ಅಂದರೆ ಪಾಯಿಂಟ್ 5ರಷ್ಟು ಹೆಚ್ಚು ಮೈಲೇಜ್ ನೀಡುತ್ತದೆ.

ಸುರಕ್ಷತೆಯ ಸವಾರಿಗಾಗಿ ಐ-ಎಸ್ಆರ್ಎಸ್ ಏರ್ ಬ್ಯಾಗ್, ಸೈಡ್ ಕರ್ಟೈನ್ ಏರ್ ಬ್ಯಾಗ್, ಆಂಟಿಲಾಕ್ ಬ್ರೇಕಿಂಗ್, ಎಲೆಕ್ಟ್ರಾನಿಕ್ ಬ್ರೇಕ್ ವಿತರಣೆ ವ್ಯವಸ್ಥೆ, ಎಲ್ಇಡಿ ಬ್ರೇಕ್ ಲೈಟ್, ಸೆಕ್ಯೂರಿಟಿ ಅಲಾರಂ ಇತ್ಯಾದಿ ಫೀಚರ್ ಗಳಿವೆ.

English summary
Honda has officially released, the 2013 Honda Accord images. Honda has stated, that the 2013 Accord is the "most sculpted Accord ever." So with the launch of the 2013 Accord, would it be the end of a conservative styling era for the Japanese automaker?
Story first published: Saturday, August 11, 2012, 13:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark