ದಾರಿಬಿಡಿ; ಬರುತ್ತಿದೆ ಹೊಂಡಾ ಸಿವಿಕ್ ಡೀಸೆಲ್ ಕಾರು

By Nagaraja

ಸದ್ಯದಲ್ಲೇ ಹೊಂಡಾ ಡೀಸೆಲ್ ಎಂಜಿನ್ ಪೈಪೋಟಿಗಿಳಿಯಲಿದೆ. ಆದರೆ ಹೊಂಡಾ ಡೀಸೆಲ್ ಎಂಜಿನ್‌‍ಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಸಾಧ್ಯವೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಹೊಂಡಾ ಪೆಟ್ರೋಲ್ ಎಂಜಿನ್ ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ 2013ರಲ್ಲಿ ಹೊರ ಬರಲಿರುವ ಹೊಂಡಾ ಸಿವಿಕ್ ಡೀಸೆಲ್ 1.6 ಲೀಟರ್ ಐ-ಡಿಟೆಕ್ ಎಂಜಿನ್ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅರ್ಥ್ ಡ್ರೀಮ್ಸ್ ತಂತ್ರಜ್ಞಾನ ಪರಿಸರ ಕಾರ್ಯಕ್ರಮದಲ್ಲಿ ನೂತನ ಹೊಂಡಾ ಡೀಸೆಲ್ ಕಾರು ಲಾಂಚ್ ಆಗಲಿದೆ. ಈ ಬಹುನಿರೀಕ್ಷಿತ ಕಾರು ಸದ್ಯದಲ್ಲೇ ಭಾರತಕ್ಕೂ ಪ್ರವೇಶಿಸಲಿದೆ.

2013 ಹೊಂಡಾ ಸಿವಿಕ್ ಡೀಸೆಲ್

2013ರಿಂದ ಹೊಂಡಾ ಸಿವಿಕ್ ಡೀಸೆಲ್ ಎಂಜಿನ್ ಲಭ್ಯವಿರಲಿದೆ. ಗ್ರಾಹಕರ ಬೇಡಿಕೆಯಂತೆ ಉತ್ತಮ ಇಂಧನ ದಕ್ಷತೆ ನೀಡುವುದು ಕಂಪನಿ ಗುರಿಯಾಗಿದೆ.

2013 ಹೊಂಡಾ ಸಿವಿಕ್ ಡೀಸೆಲ್

ಬಹುನಿರೀಕ್ಷಿತ ಹೊಂಡಾ ಸಿವಿಕ್ ಎಂಜಿನ್ ಮುಂದಿನ ವರ್ಷ ರಸ್ತೆಗಿಳಿಯಲಿದ್ದು, ಪ್ರತಿ ಲೀಟರ್‌ಗೆ 27.79 ಕಿಲೋ ಮೀಟರ್ ಮೈಲೇಜ್ ನೀಡುವ ನಿರೀಕ್ಷೆಯಿದೆ.

2013 ಹೊಂಡಾ ಸಿವಿಕ್ ಡೀಸೆಲ್

ಅಲ್ಲದೆ ಹೊಂಡಾ ಸಿವಿಕ್ ಡೀಸೆಲ್ ಕಾರಿನಲ್ಲಿ ನೂತನ ಫೀಚರ್‌ಗಳನ್ನು ಆಳವಡಿಸಲಾಗುವುದು. 16 ಇಂಚು ಅಲೋಯ್ ವೀಲ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಆಟೋ ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಹಾಗೂ ಡಿಎಬಿ ಡಿಜಿಟಲ್ ರೆಡಿಯೋಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

2013 ಹೊಂಡಾ ಸಿವಿಕ್ ಡೀಸೆಲ್

ಹೊಂಡಾ 1.6 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದ್ದು, 4000 ಆರ್‌ಪಿಎಂನಲ್ಲಿ 120 ಪಿಎಸ್ ಪವರ್ ಉತ್ಪಾದಿಸಲಿದೆ. ಗರಿಷ್ಠ ಟರ್ಕ್ಯೂ 2000 ಆರ್‌ಪಿಎಂನಲ್ಲಿ 300 ಎನ್‌ಎಂ ಆಗಿರಲಿದೆ.

2013 ಹೊಂಡಾ ಸಿವಿಕ್ ಡೀಸೆಲ್

ಹೊಂಡಾ ನೂತನ ಅವತರಣಿಕೆಯು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯಿದೆ.

Most Read Articles

Kannada
English summary
Honda petrol engines are rock solid. Honda's new 1.6 liter i-DTEC engine, will be seen in the 2013 Honda Civic Diesel
Story first published: Tuesday, November 13, 2012, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X