ಆಡಿ ಇಂಡಿಯಾ ನೂತನ ಎ4 ಸೆಡಾನ್ ಕಾರ್ ರಸ್ತೆಗೆ

ಫೋಕ್ಸ್‌ವ್ಯಾಗನ್ ಗ್ರೂಪ್ ಮಾಲಿಕತ್ವದ ಆಡಿ ಇಂಡಿಯಾ ಕಂಪನಿಯು ದೇಶದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯನ್ನು ಹಿಂದಿಕ್ಕಲು ಸನ್ನದವಾಗಿದೆ. ಇದೀಗ ಕಂಪನಿಯು 8ನೇ ತಲೆಮಾರಿನ ನೂತನ ಎ4 ಐಷಾರಾಮಿ ಕಾರನ್ನು ಪರಿಚಯಿಸಿದೆ. ಇದರ ಎಕ್ಸ್ ಶೋರೂಂ ದರ ಸುಮಾರು 27.33 ಲಕ್ಷ ರುಪಾಯಿಯಿಂದ 38 ಲಕ್ಷ ರುಪಾಯಿವರೆಗಿದೆ. ಈ ಹಿಂದಿನ ಎ4 ಆವೃತ್ತಿಗಿಂತ ಇದು 60 ಸಾವಿರ ರು. ಅಗ್ಗವಾಗಿರೋದು ವಿಶೇಷ.

ನೂತನ ಎ4 ಐಷಾರಾಮಿ ಕಾರು 1.8 ಲೀಟರಿನ ಟಿಎಫ್ಎಸ್ ಐ ಎಂಜಿನ್ ಕಾರಿನ ದರ 27.33 ಲಕ್ಷ ರು. ಆಗಿದೆ. 2.0 ಲೀಟರಿನ ಟಿಡಿಐ ಆವೃತ್ತಿ ದರ 29.38 ಲಕ್ಷ ರುಪಾಯಿ ಮತ್ತು 3.0 ಲೀಟರಿನ ಟಿಡಿಐ ಎಂಜಿನ್ ಕಾರಿನ ದರ 38 ಲಕ್ಷ ರು.ನಿಂದ ಆರಂಭವಾಗುತ್ತದೆ.

ಪ್ರಸಕ್ತ ವರ್ಷದ ಆರಂಭದಿಂಧ ಕಂಪನಿಯು ಇಲ್ಲಿವರೆಗೆ 2,831 ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಹಳೆಯ ಎ4 ಆವೃತ್ತಿ ಸುಮಾರು 850 ಯುನಿಟ್ ಮಾರಾಟವಾಗಿದೆ. ಕಂಪನಿಯು ನೂತನ ತಲೆಮಾರಿನ ಎ-4 ಕಾರಿನ ಮೂಲಕ ಮಾರಾಟವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುವ ಭರವಸೆಯನ್ನು ವ್ಯಕ್ತಪಡಿಸಿದೆ.

ಕಳೆದ ವರ್ಷ ದೇಶದಲ್ಲಿ ಬಿಎಂಡಬ್ಲ್ಯು ಸುಮಾರು 9,400 ಕಾರು ಮಾರಾಟ ಮಾಡುವ ಮೂಲಕ ನಂಬರ್ ಒನ್ ಸ್ಥಾನ ಪಡೆದುಕೊಂಡಿತ್ತು. 7,430 ಕಾರು ಮಾರಾಟ ಮಾಡುವ ಮೂಲಕ ಮರ್ಸಿಡಿಸ್ ಬೆಂಝ್ ಎರಡನೇ ಸ್ಥಾನ ಗಳಿಸಿಕೊಂಡಿತ್ತು. 5,511 ಕಾರುಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನಕ್ಕೆ ಆಡಿ ಇಂಡಿಯಾ ತೃಪ್ತಿಪಟ್ಟುಕೊಂಡಿತ್ತು.

Most Read Articles

Kannada
English summary
German luxury carmaker Audi has launched the facelifted A4 2012 mid-level luxury sedan between Rs 27.33-38 lakh (ex-showroom, Maharashtra). Interestingly, the new A4 is about 60k cheaper than the outgoing model.
Story first published: Thursday, May 3, 2012, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X