ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

ಆಡಿ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಕಾರು ಮಾದರಿಯಾದ ಎ4 ಸೆಡಾನ್ ಮಾದರಿಯ 5ನೇ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸೆಡಾನ್ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

1994ರಲ್ಲಿ ಮೊದಲ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಗೊಂಡಿದ್ದ ಆಡಿ ಎ4 ಸೆಡಾನ್ ಕಾರು ಮಾದರಿಯು ಇದುವರೆಗೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇದೀಗ 5ನೇ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಗೊಂಡಿದೆ. ಹೊಸ ಕಾರು ಮಾದರಿಯು 2020ರ ಮಾದರಿಗಿಂತಲೂ ಸಾಕಷ್ಟು ಅಪ್‌ಡೆಟ್ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಕಾರಿನ ಬೆಲೆಯನ್ನು ಆರಂಭಿಕ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 42.34 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

ಹೊಸ ಎ4 ಕಾರು ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದ್ದು, ಆರಂಭಿಕ ಮಾದರಿಯಾಗಿ ಪ್ರೀಮಿಯಂ ಪ್ಲಸ್ ಮಾರಾಟಗೊಳ್ಳಲಿದ್ದರೆ ಹೈ ಎಂಡ್ ಮಾದರಿಯಾಗಿ ಟೆಕ್ನಾಲಜಿ ಆವೃತ್ತಿಯು ಮಾರಾಟಗೊಳ್ಳಲಿದೆ.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

5ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಹೊಸ ಕಾರಿನಲ್ಲಿ ಆಡಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಪ್ರೇರಿತ ಎಂಜಿನ್ ಆಯ್ಕೆ ನೀಡಿದ್ದು, ಕಾರಿನ ಮುಂಭಾಗದ ಹೆಕ್ಸಾಗೊನಲ್ ಗ್ರಿಲ್ ಮತ್ತು ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಪಡೆದುಕೊಂಡಿದೆ.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

ಎಲ್ಇಡಿ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‌ಎಲ್ಎಸ್ ಸಹ ನೀಡಲಾಗಿದ್ದು, ನವೀಕೃತ ಬಂಪರ್ ವಿನ್ಯಾಸವು ಕಾರಿನ ಬಲಿಷ್ಠತೆಗೆ ಪೂರಕವಾಗಿದೆ. ಹಾಗೆಯೇ ಎಲ್ಇಡಿ ಫಾಗ್ ಲ್ಯಾಂಪ್, ಮರುವಿನ್ಯಾಸಗೊಳಿಸಲಾದ 18-ಇಂಚಿನ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲ್ಯಾಂಪ್, ಟೈಲ್ ಲ್ಯಾಂಪ್ ಕ್ಲಸ್ಟರ್ ಮತ್ತು ಡ್ಯುಯಲ್ ಎಕ್ಸಾಸ್ಟ್ ವಿನ್ಯಾಸವು ಕಾರಿಗೆ ಹೊಸ ಮೆರಗು ನೀಡಿವೆ.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

ಇನ್ನು ಹೊಸ ಕಾರಿನ ಒಳಭಾಗದ ತಾಂತ್ರಿಕ ಅಂಶಗಳು ಸಹ ಮತ್ತಷ್ಟು ಪ್ರೀಮಿಯಂ ಮಾದರಿಗಳಾಗಿದ್ದು, ಸಾಫ್ಟ್ ಟಚ್ ಮಟಿರಿಯಲ್‌ಗಳು ಕಾರಿನ ಕ್ಯಾಬಿನ್ ಐಷಾರಾಮಿಗೆ ಮತ್ತಷ್ಟು ಪೂಕವಾಗಿವೆ ಎನ್ನಬಹುದು.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

ಹೊಸ ಕಾರಿನಲ್ಲಿ ಸಂಪೂರ್ಣ ಡಿಜಿಟಲ್ ಫೀಚರ್ಸ್ ಒಳಗೊಂಡ ವರ್ಚುವಲ್ ಕುಕ್‌ಪಿಟ್, 10.1-ಇಂಚಿನ ಎಂಎಂಐ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಸ್ಟೀರಿಂಗ್ ಮೌಟೆಂಡ್ ಕಂಟ್ರೊಲ್, ಕ್ರೂಸ್ ಕಂಟ್ರೊಲ್, ಆ್ಯಂಬಿಯೆಂಟ್ ಲೈಟ್ಸ್ ಸೇರಿ ಹಲವು ಫೀಚರ್ಸ್‌ಗಳಿವೆ.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಆಡಿ ಇಂಡಿಯಾ ಕಂಪನಿಯು ಹೊಸ ತಲೆಮಾರಿನ ಎ4 ಸೆಡಾನ್ ಕಾರು ಮಾದರಿಯಲ್ಲಿ 2.0-ಲೀಟರ್ ಟಿಎಫ್ಎಸ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಹೊಸ ಎಂಜಿನ್ ಮಾದರಿಯು 188-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

ಹೊಸ ಎಂಜಿನ್ ಮಾದರಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಉತ್ಪಾದನೆ ಮಾಡಲಿದ್ದು, ಕೇವಲ 7.3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ನ್ಯೂ ಜನರೇಷನ್ ಆಡಿ ಎ4 ಸೆಡಾನ್ ಬಿಡುಗಡೆ

ಈ ಮೂಲಕ ಐಷಾರಾಮಿ ಸೌಲಭ್ಯಗಳು ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರು ಮಾರುಕಟ್ಟೆಯಲ್ಲಿರುವ ಪ್ರತಿ ಸ್ಪರ್ಧಿ ಕಾರು ಮಾದರಿಗಳಾದ ಬಿಎಂಡಬ್ಲ್ಯು 3 ಸೀರಿಸ್, ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಮತ್ತು ಜಾಗ್ವಾರ್ ಎಕ್ಸ್‌ಇ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Most Read Articles

Kannada
Read more on ಆಡಿ audi
English summary
New (2021) Audi A4 Sedan Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X