ಬಾಯ್ ಫ್ರೆಂಡ್ ಕಯಿನ್ ಜೊತೆ ಬಿಪಾಶ ಬಸು ಕಹಾನಿ

Posted By:
Bipasa Basu
ಬಿಪಾಶ ಬಸು ಅಂದ್ರೆ ಪುರುಷರ ಹೃದಯದ ಬಡಿತವನ್ನು ಬಿಪ್ಸ್ ಬಿಪ್ಸ್ ಹೆಚ್ಚಿಸುವ ಹಾಟ್ ಲೇಡಿ. ಪುರುಷರು ಮಾತ್ರವೇಕೆ ಅಂದೊಮ್ಮೆ ಬೆಂಗ್ಳೂರು ಏರ್ ಪೋರ್ಟ್ ನಲ್ಲಿ ಮಹಿಳೆಯೊಬ್ಳು ಬಸುಗೆ ಕಿಸ್ ಮಾಡೋಕ್ಕೆ ಟ್ರೈ ಮಾಡಿದ್ರು. ಈಕೆಯ ಬೆರಳು ಕಚ್ಚಿದ ಅಭಿಮಾನಿಗಳೂ ಇದ್ದಾರೆ.

ಬಿಪಾಶ ಪ್ರೇಮಪಾಶದಲ್ಲಿರುವ ಬಾಯ್ ಫ್ರೆಂಡ್ ಬಗ್ಗೆ ಕೇಳಿದರೆ ಎಲ್ಲರಿಗೂ ದೀರ್ಘಕಾಲದ ಸಖ ಜಾನ್ ಅಬ್ರಹಾಂ ನೆನಪಾಗಬಹುದು. ಅಥವಾ ಬೆಂಗಳೂರಿನ ಡಿನೊ ಮೊರಿಯಾ ಅಂತನೂ ಹೇಳಬಹುದು. ಅಥವಾ ಇನ್ಯಾರೋ ನಟ ನೆನಪಾಗಬಹುದು.

ಆದ್ರೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಹಾಟ್ ಲೇಡಿ ಬಿಪಾಶಗೆ ಇನ್ನೊಬ್ಬ ಬಾಯ್ ಫ್ರೆಂಡ್ ಇದ್ದಾನೆ. ಯಾರವನು? ಎಲ್ಲಿ ಅವನ ಊರು? ಅವ್ನ ಬಗ್ಗೆ ನಮ್ಗೆ ಗೊತ್ತೇ ಇರಲಿಲ್ಲ ಅಂತೀರಾ? ಈ ಲಕ್ಕಿ ಬಾಯ್ ಫ್ರೆಂಡ್ ಹೆಸ್ರು ಪೊರ್ಷ್ ಕಯಿನ್.

ಈ ಕಯಿನ್ ನಿಜಕ್ಕೂ ಲಕ್ಕಿ. ಎಲ್ಲಿಗಾದ್ರೂ ಹೋಗ್ಬೆಕಾದ್ರೆ ಬಿಪಾಶ ಬಸು ಕಯಿನ್ ಜೊತೆನೆ ಸವಾರಿ ಹೊರಡ್ತಾಳೆ. ಬೇಜಾರಾದ್ರೆ ಕಯಿನ್ ಮಡಿಲಲ್ಲಿ ಮಲಗ್ತಾಳೆ, ಖುಷಿಯಾದ್ರೆ ಅವನಲ್ಲೇ ಹಾಯಾಗಿ ಕಾಲ ಕಳೆಯುತ್ತಾಳೆ.

ಅಷ್ಟೇ ಅಲ್ಲ, ಅವನ ಸೀಟಿಗೆ ಒರಗಿ ಮಲಗುವುದೂ ಉಂಟು. ಅವ್ನ ಶಕ್ತಿ, ಹಾರ್ಸ್ ಪವರ್ ಅವಳಿಗಿಷ್ಟವಂತೆ.

ಫೂ...ಫ್ ಇದ್ಯಾಕೊ ಜಾಸ್ತಿ ಆಯ್ತು ಅಂತಿರಾ? ಕ್ಷಮಿಸಿ, ನಾವು ಮಾತನಾಡುತ್ತಿರುವುದು ಹಾಟ್ ಕಾರು ಪೊರ್ಷ್ ಕಯಿನ್. ಯಿನ್ ಕ್ರಾಸೊವರ್ ಕಾರಿನ ಹೆಮ್ಮೆಯ ಸಂಗಾತಿ ಬಿಪಾಶ ಬಸು. ಇದು ಐದು ಸೀಟಿನ ಮಧ್ಯಮಗಾತ್ರದ ಐಷಾರಾಮಿ ಕ್ರಾಸೊವರ್ ಕಾರು. ಇದು 3,598 ಸಿಸಿಯಿಂದ 4,806 ಸಿಸಿವರೆಗೆ ಐದು ಆವೃತ್ತಿಗಳಲ್ಲಿ ದೊರಕುತ್ತಿದೆ. ಈ ಎಲ್ಲಾ ಮಾದರಿಗಳು ಐಷಾರಾಮಿ ಫೀಚರುಗಳನ್ನು ಹೊಂದಿದೆ.

ಇದು ವಿ6 ಮತ್ತು ವಿ8 ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇದರ ದರ 65 ಲಕ್ಷ ರುಪಾಯಿಯಿಂದ 1.46 ಲಕ್ಷ ರು.ವರೆಗಿದೆ. ಬಾಷ್ ಹೈಎಂಡ್ ಸೌಂಡ್ ಸಿಸ್ಟಮ್, ಕಮ್ಯೂನಿಕೇಷನ್ ಮ್ಯಾನೆಜ್ ಮೆಂಟ್ ಸಿಸ್ಟಮ್, ಲೇನ್ ಚೇಂಜ್ ಅಸಿಸ್ಟ್, ಸಿಡಿಆರ್-31 ಆಡಿಯೋ ಸಿಸ್ಟಮ್, ಬ್ಲೂಟೂಥ್ ಕನೆಕ್ಟಿವಿಟಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪಾರ್ಕ್ ಅಸಿಸ್ಟ್ ಮತ್ತು ರಿಯರ್ ವ್ಯೂ ಕ್ಯಾಮರಾ ಮುಂತಾದ ಫೀಚರುಗಳನ್ನು ಕಯಿನ್ ಕಾರಲ್ಲಿ ಕಾಣಬಹುದಾಗಿದೆ.

ಇತ್ತೀಚೆಗೆ ಬಿಪಾಶ ಬೀಟಲ್ ಗೆ ಲೈನ್ ಹೊಡೆದ ಸ್ಟೋರಿ ಓದಿ

ಹಾಟ್ ಸೆಲೆಬ್ರಿಟಿ ಕಾರು

English summary
Celebrity Cars. Bipasa Basu owned Luxury Crossover Porsche Cayenne. This Car price between Rs 65 lakh to 1.46 crore.
Story first published: Friday, February 24, 2012, 12:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark