ಹರಾಜಿಗಿದೆ ಫುಟ್ಬಾಲಿಗ ರೊನಾಲ್ಡೊ ನಜ್ಜುಗುಜ್ಜಾದ ಕಾರು

Written By:

ಇದರ ಹಿಂದಿನ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಮಾತ್ರ ನಮ್ಮಲ್ಲಿ ಕೇಳದಿರಿ. ಯಾಕೆಂದರೆ ರಿಯಲ್ ಮ್ಯಾಡ್ರಿಡ್ ಹಾಗೂ ಫೋರ್ಚುಗಲ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರ ನಜ್ಜುಗುಜ್ಜಾದ ಕಾರನ್ನು ಹರಾಜಿಗಿಡಲಾಗುತ್ತಿದೆ.

ಹಾಂ ಅದೇನಂತೀರಾ..? ಅದೇ ಕೆಲವು ವರ್ಷಗಳ ಹಿಂದೆಯಷ್ಟೇ ಫುಟ್ಬಾಲ್ ಅಭ್ಯಾಸಕ್ಕೆ ತೆರಳುತ್ತಿರುವಾಗ ವೇಳೆ ರೊನಾಲ್ಡೊ ಅವರ ಫೆರಾರಿ ಕಾರು ಅಪಘಾತಕ್ಕೊಳಗಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದರು.

ಇದೀಗ ರೊನಾಲ್ಡೊ ಅಪಘಾತದಿಂದ ಪಾರಾದ ಫೆರಾರಿ 599 ಜಿಟಿಬಿ ಕಾರನ್ನು ಹರಜಾಗಿಡಲಾಗುತ್ತಿದೆ. ಇ ಬೇ ಮೂಖಾಂತರ ಹರಾಜು ಪ್ರಕ್ರಿಯೆ ಸಾಗಲಿದ್ದು, ಕಾರಿನ ಆರಂಭಿಕ ದರ 64380 ಅಮೆರಿಕನ್ ಡಾಲರ್ ಆಗಿದೆ.

ಅಂದ ಹಾಗೆ ಕಾರಿನ ನೈಜ ಬೆಲೆಗಿಂತಲೂ ಕಡಿಮೆ ದರದಲ್ಲಿ ಹರಾಜಿಡಲಾಗುತ್ತಿದೆ. ಕಾರಿನ ನಿಜವಾದ ಬೆಲೆ 3220000 ಅಮೆರಿಕನ್ ಡಾಲರ್ ಆಗಿದ್ದರೂ ಸದ್ಯ ಕಳಪೆ ಮಟ್ಟದಲ್ಲಿದ್ದರಿಂದ ಕಡಿಮೆ ದರದಲ್ಲಿ ಹರಾಜಿಗಿಡಲು ನಿರ್ಧರಿಸಲಾಗಿದೆ.

ಹರಾಜಿಗಿದೆ ರೊನಾಲ್ಡೊ ನಜ್ಜುಗುಜ್ಜಾದ ಕಾರು

2009ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಫುಟ್ಬಾಲ್ ಅಭ್ಯಾಸಕ್ಕೆ ತೆರಳುತ್ತಿದ್ದ ವೇಳೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸಂಚರಿಸುತ್ತಿದ್ದ ಫೆರಾರಿ 599 ಜಿಟಿಬಿ ಕಾರು ಅಪಘಾತಕ್ಕೊಳಗಾಗಿತ್ತು.

ಹರಾಜಿಗಿದೆ ರೊನಾಲ್ಡೊ ನಜ್ಜುಗುಜ್ಜಾದ ಕಾರು

ರೊನಾಲ್ಡೊ ಅವರ ಫೆರಾರಿ 599 ಕಾರು ಸದ್ಯ ರಸ್ತೆಗಳಲ್ಲಿ ಉಪಯೋಗ ಶೂನ್ಯವಾಗಿದೆ. ಆದರೂ ರಿಪೇರ್ ಮಾಡಿದರೆ ಬಳಕೆ ಮಾಡಬಹುದು ಎಂಬ ನಂಬಿಕೆಯನ್ನು ಹಲವರು ಹೊಂದಿದ್ದಾರೆ.

ಹರಾಜಿಗಿದೆ ರೊನಾಲ್ಡೊ ನಜ್ಜುಗುಜ್ಜಾದ ಕಾರು

ಹರಾಜು ವಿಜೇತರು ಸ್ವಯಂ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕೈಯಿಂದಲೇ ಫೆರಾರಿ ಕಾರಿನ ಕೀಯನ್ನು ಪಡೆಯುವ ಅದೃಷ್ಟ ಗಿಟ್ಟಿಸಿಕೊಳ್ಳಲಿದ್ದಾರೆ.

ಹರಾಜಿಗಿದೆ ರೊನಾಲ್ಡೊ ನಜ್ಜುಗುಜ್ಜಾದ ಕಾರು

ಇಷ್ಟೆಲ್ಲ ಆದರೂ ಯಾವ ಉದ್ದೇಶಕ್ಕಾಗಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಕಾರನ್ನು ಹರಾಜಿಗಿಡಲಾಗುತ್ತಿದೆ ಎಂಬುದಂತೂ ಅರ್ಥವಾಗಿಲ್ಲ.

ಹರಾಜಿಗಿದೆ ರೊನಾಲ್ಡೊ ನಜ್ಜುಗುಜ್ಜಾದ ಕಾರು

ಕ್ರಿಸ್ಟಿಯಾನೊ ರೊನಾಲ್ಡೊಗೆ ಕೇವಲ ಪೋರ್ಚುಗಲ್ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಫುಟ್ಬಾಲ್ ಅಭಿಮಾನಿಗಳಿದ್ದಾರೆ. ಹಾಗಾಗಿ ಅವರ ಆಕ್ಸಿಡೆಂಟ್ ಕಾರಿಗೆ ಯಾವ ರೀತಿಯ ಪ್ರತಿಕ್ರಿಯೆ ದೊರಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Christiano Ronaldo, the Real Madrid and Portugal football star had crashed his brand new Ferrari 599 GTB Fiorano. Now the bashed up Ferrari 599 has been placed on auction on eBay with a starting price of $64,380.
Story first published: Monday, November 26, 2012, 15:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark