ಮಾರುತಿಗೆ ಬಿಸಿ ಮುಟ್ಟಿಸಲಿರುವ ನೌಕರರ ಮುಷ್ಕರ

Written By:
ಮಾರುತಿ ಸುಜುಕಿ ಹಾಗೂ ನೌಕರರ ನಡುವಣ ಬಿಕ್ಕಟ್ಟು ಸದ್ಯಕ್ಕಂತೂ ಬಗೆಹರಿಯುವ ಲಕ್ಷ್ಮಣಗಳು ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯ ಸ್ಥಗತಿಗೊಂಡಿರುವ ಮಾನೇಸರ್ ಘಟಕವು ಕಾರ್ಯಾಚರಣೆ ಪುನರಾರಂಭಿಸಿತ್ತು. ಆದರೆ ಮಾನೇಸರ್ ಘಟಕ ಸಹಜ ಸ್ಥಿತಿಗೆ ಮರಳುತ್ತಿರುವಂತೆಯೇ ನೌಕರರು ಮತ್ತೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುತ್ತಿದ್ದಾರೆ.

ಪ್ರಸ್ತುತ ಜುಲೈ ತಿಂಗಳ ಹಿಂಸಾಚಾರದಿಂದಾಗಿ ತಮ್ಮ ಕೆಲಸವನ್ನೇ ಕಳೆದುಕೊಂಡಿರುವ ನೌಕರರು ಎರಡು ದಿನಗಳ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಹಿನ್ನಲೆ...

ಜುಲೈ ತಿಂಗಳಲ್ಲಿ ಮಾನೇಸರ್ ಘಟಕದಲ್ಲಿ ನೌಕರರ ಮುಷ್ಕರದ ನಡುವೆ ಮಾರುತಿ ಹಿರಿಯ ವ್ಯವಸ್ಥಾಪಕರೊಬ್ಬರು ಕೊಲೆಗೀಡಾಗಿದ್ದರು. ಈ ಘಟನೆಯಿಂದ ಬೆಸತ್ತಿದ್ದ ಮಾರುತಿ 500ರಷ್ಟು ನೌಕರರನ್ನು ಯಾವುದೇ ಕಾರಣ ಕೇಳಲು ನೋಟಿಸ್ ಜಾರಿಗೊಳಿಸಲಿದೆಯೇ ಕೆಲಸದಿಂದ ವಜಾಗೊಳಿಸಿತ್ತು. ಅಲ್ಲದೆ ಯಾವುದೇ ಹಂತದಲ್ಲಿಯೂ ಮರುನೇಮಕ ಮಾಡುವ ಪ್ರಶ್ನೆಯೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.

ಪೊಲೀಸ್ ಎಫ್‌ಐಆರ್‌ನಲ್ಲಿ ಹಿಂಸಾಚಾರ ಪ್ರಕರಣದಲ್ಲಿ 200ರಷ್ಟು ನೌಕರರ ಮೇಲೆ ಮಾತ್ರ ಕೇಸು ದಾಖಲಾಗಿದೆ. ಇದನ್ನೇ ಪ್ರಮುಖವಾಗಿ ಉಲ್ಲೇಖಿಸಿರುವ ನೌಕರರು ಮಾರುತಿ ವಿರುದ್ಧ ಮುಷ್ಕರಕ್ಕೆ ಮುಂದಾಗಿದ್ದಾರೆ. ನೌಕರರ ಈ ಪ್ರಯತ್ನಕ್ಕೆ ಮಾರುತಿ ಉದ್ಯೋಗ್ ಕಾಮಗಾರಿ ಯೂನಿಯನ್ (ಮುಕು) ಕೂಡಾ ಬೆಂಬಲ ಸೂಚಿಸಿದೆ. ಮಾರುತಿ ಸುಜುಕಿಯ ಗುರ್ವಾಂವ್ ಘಟಕವನ್ನು ಮುಕು ಯೂನಿಯನ್ ಪ್ರತಿನಿಧಿಸುತ್ತಿದೆ.

ಹಾಗಿದ್ದರೂ ಮುಕು ನೌಕರರು ನೇರವಾಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗುತ್ತಿಲ್ಲ. ಆದರೆ ರಾಜ್ಯ ಸರಕಾರದ ಕಾರ್ಮಿಕ ಇಲಾಖೆ ಹಾಗೂ ಇತರ ವೇದಿಕೆಗಳಲ್ಲಿ ನೌಕರರನ್ನು ಬೆಂಬಲಿಸಲಿದೆ.

ಹಿಂಸಾಚಾರ ಪ್ರಕರಣ ದಾಖಲಾಗದ ಎಲ್ಲ ನೌಕರರನ್ನು ಕೆಲಸಕ್ಕೆ ಹಿಂಪಡೆಯಬೇಕೆಂಬುದು ಉಪವಾಸ ಸತ್ಯಾಗ್ರಹ ನಿರತರಾಗಿರುವ ನೌಕರರ ಪ್ರಮುಖ ಬೇಡಿಕೆಯಾಗಿದೆ. ಯಾವುದೇ ಅಧಿಕೃತ ತನಿಖೆ ಜಾರಿಗೊಳಿಸದೆಯೇ ತಮ್ಮನ್ನು ವಜಾಮಾಡಿರುವುದು ನ್ಯಾಯಸಮ್ಮತವಲ್ಲ ಎಂದು ನೌಕರರು ವಾದಿಸಿದ್ದಾರೆ.

ಮಾನೇಸರ್ ಘಟಕದಿಂದ ವಜಾಗೊಂಡಿರುವ ನೌಕರರು ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದು, ಗುರ್ವಾಂಗ್ ನೌಕರರು ಸಹ ಇದಕ್ಕೆ ಬೆಂಬಲ ಸೂಚಿಸುವ ನಿರೀಕ್ಷೆಯಿದೆ. ಹಾಗಿದ್ದರೂ ವಜಾಗೊಂಡಿರುವ ನೌಕರರನ್ನು ಯಾವುದೇ ಹಂತದಲ್ಲಿಯೂ ವಾಪಾಸ್ ಪಡೆಯುವುದಿಲ್ಲ ಎಂಬುದನ್ನು ಮಾರುತಿ ಸ್ಪಷ್ಟಪಡಿಸಿದೆ.

English summary
Manesar plant will now face protest in the form of a two day hunger strike being held by workers who were dismissed following violet incidents in the Manesar plant in July
Story first published: Wednesday, November 7, 2012, 15:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark