ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಹೋಂಡಾ ಎದುರಾಳಿ

Posted By:

ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಎಂಪಿವಿ ಅಥವಾ ಎಲ್‌ಯುವಿ ಎರ್ಟಿಗಾಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ರಸ್ತೆಗಿಳಿದ ಒಂದು ತಿಂಗಳಲ್ಲೇ ಸುಮಾರು 32 ಸಾವಿರ ಜನರು ಬುಕ್ಕಿಂಗ್ ಮಾಡಿದ್ದಾರೆ. ಎಂಪಿವಿ ಮಾರುಕಟ್ಟೆಯಲ್ಲಿ ಇದು ದಾಖಲೆಯ ಬೇಡಿಕೆಯಾಗಿದೆ.

ಇದೀಗ ಎರ್ಟಿಗಾ ಎಂಪಿವಿಗೆ ಸರಿಸಾಟಿಯಾದ ಉತ್ಪನ್ನವೊಂದನ್ನು ಪರಿಚಯಿಸಲು ಹೋಂಡಾ ಕಾರು ಕಂಪನಿ ಯೋಜಿಸುತ್ತಿದೆ. ಅಂದರೆ ಜಾಝ್ ಹ್ಯಾಚ್‌ಬ್ಯಾಕ್ ಪ್ಲಾಟ್‌ಫಾರ್ಮಿನಲ್ಲೇ ನೂತನ ಎಂಪಿವಿಯನ್ನು ಪರಿಚಯಿಸಲಿದೆಯಂತೆ. ಅಂದ ಹಾಗೆ ಹೋಂಡಾ ಹೊಸ ಕಾರಿನ ಹೆಸರು ಫ್ರೀಡ್ ಎಂದಿರಲಿದೆ ಎಂದು ಮೂಲಗಳು ಹೇಳಿವೆ.

To Follow DriveSpark On Facebook, Click The Like Button

ನೂತನ ಫ್ರೀಡ್ 1.5 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಇದೇ ಎಂಜಿನ್ ಹೋಂಡಾ ಸಿಟಿ ಕಾರಿನಲ್ಲೂ ಇದೆ. ಆದರೆ ಹೋಂಡಾ ಫ್ರೀಝ್ ಎಂಪಿವಿಗೆ ಎರ್ಟಿಗಾ ಭಯಪಡುವ ಅಗತ್ಯವೇನೂ ಇಲ್ಲ. ಯಾಕೆಂದ್ರೆ ಫ್ರೀಡ್ ರಸ್ತೆಗಿಳಿಯುವುದು 2014ರಲ್ಲಿ. ಇಷ್ಟು ದೀರ್ಘಾವದಿ ಇರುವ ಕಾರಣ ಮಾರುತಿ ಸುಜುಕಿ ಚಿಂತಿಸಬೇಕಿಲ್ಲ.

ಮಾರುತಿ ಸುಜುಕಿ ಎರ್ಟಿಗಾ ತಲಾ ಮೂರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತದೆ. ಪೆಟ್ರೋಲ್ ಆವೃತ್ತಿಯು ಕೆ14ಬಿ, 1.4 ಲೀಟರ್ ಮೋಟರ್ ಎಂಜಿನ್ ಹೊಂದಿದೆ. ಡೀಸೆಲ್ ಆವೃತ್ತಿಗಳು 1.3 ಲೀಟರ್ ಎಂಜಿನ್ ಹೊಂದಿವೆ. ಮಾರುತಿ ಎಂಪಿವಿ 5 ಸ್ಪೀಡ್ ಮ್ಯಾನುಯಲ್ ಗೇರ್ ವ್ಯವಸ್ಥೆ ಹೊಂದಿದೆ.

ಮಾರುತಿ ಸುಜುಕಿ ಎರ್ಟಿಗಾ ಬೆಂಗಳೂರು ಎಕ್ಸ್‌ಶೋರೂಂ ಆರಂಭಿಕ ದರ ಸುಮಾರು 6.12 ಲಕ್ಷ ರುಪಾಯಿ ಇದೆ. ಅಂದರೆ ಎಲ್ಎಕ್ಸ್ಐ ಆವೃತ್ತಿಗೆ 6,12,719 ರುಪಾಯಿ, ವಿಎಕ್ಸ್ಐ ಆವೃತ್ತಿಗೆ 6,84,666 ರುಪಾಯಿ ಮತ್ತು ಝಡ್ಎಕ್ಸ್ಐ ಆವೃತ್ತಿಗೆ 7,55,602 ರು. ಇದೆ. ಡೀಸೆಲ್ ಆವೃತ್ತಿಗಳಲ್ಲಿ ಎಲ್‌ಡಿಐ ದರ 7,55,603 ರುಪಾಯಿ, ವಿಡಿಐ ದರ 8,16,403 ರು. ಮತ್ತು 8,72,140 ರುಪಾಯಿ ಇದೆ.

ಸಂಪೂರ್ಣ ವಿಮರ್ಶೆ ಓದಿ

English summary
Honda Motor Co is planning to bring its first compact MPV in India by the end of 2014. Honda currently developing an MPV under code name '2NH. It will be competing with Maruti Suzuki Ertiga MPV. The all-new Honda MPV will be based on the next-gen Jazz platform.
Story first published: Tuesday, May 22, 2012, 11:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark