ಮಹೀಂದ್ರ ಘಟಕದಲ್ಲಿ ಭಾರಿ ಬೆಂಕಿ ಅನಾಹುತ

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ನಾಸೀಕ್ ಘಟಕದಲ್ಲಿ ಬುಧವಾರ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟಕದ ಸ್ಕಾರ್ಪಿಯೊ ಉತ್ಪಾದನಾ ವಿಭಾಗದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯನ್ನು ನಾಸೀಕ್ ಮುನ್ಸಿಪಲ್ ಕಾರ್ಪೊರೇಷನಿನ 25 ಅಗ್ನಿಶಾಮಕ ವಾಹನಗಳ ಸಹಾಯದಿಂದ ನಂದಿಸಲಾಗಿದೆ.

ಘಟಕದ ಸ್ಕಾರ್ಪಿಯೊ ಲಾಜಿಸ್ಟಿಕ್ ವಿಭಾಗದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕಂಪನಿಯ ಯಾವುದೇ ಕೆಲಸಗಾರರು ಗಾಯಗೊಂಡಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಮೊದಲ ಶಿಫ್ಟ್ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಹೀಂದ್ರ ವಕ್ತಾರರು ಹೇಳಿದ್ದಾರೆ.

ನಾಸೀಕ್ ಘಟಕದಲ್ಲಿ ಮಹೀಂದ್ರ ಕಂಪನಿಯು ಸುಮಾರು 300-350 ವಾಹನಗಳನ್ನು ಉತ್ಪಾದಿಸುತ್ತದೆ. ಇಲ್ಲಿ ಬೊಲೆರೊ, ಸ್ಕಾರ್ಪಿಯೊ, ಕ್ಷೈಲೊ ಮತ್ತು ವೆರಿಟೊ ವಾಹನಗಳನ್ನು ಉತ್ಪಾದಿಸಲಾಗುತ್ತದೆ.

ಸರಕಾರದ ನೀತಿನಿಯಮದ ಅನುಸಾರವೇ ಕಂಪನಿಯು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಕಿ ಅನಾಹುತದ ನಷ್ಟದ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಇದೀಗ ಬಂದ ಮಾಹಿತಿಯ ಪ್ರಕಾರ ನಾಸೀಕ್ ಘಟಕದಲ್ಲಿ ಸುಮಾರು 250 ಸ್ಕಾರ್ಪಿಯೊಗಳು ಉರಿದಿವೆ.

Most Read Articles

Kannada
English summary
A Major Fire broke out in Mahindra and Mahindra Nasik plant on Wednesday. Fire was brought under control with the help of 25 fire tenders. There have been no injuries to any company personnel.
Story first published: Thursday, May 10, 2012, 16:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X