ಫೋರ್ಡ್ ಮಾರಾಟ ಕುಸಿತ, ಯಾಕೆ ಹೀಗಾಯ್ತು?

Posted By:
To Follow DriveSpark On Facebook, Click The Like Button
ಅಮೆರಿಕದ ಕಾರು ಕಂಪನಿಯ ಅಂಗಸಂಸ್ಥೆ ಫೋರ್ಡ್ ಇಂಡಿಯಾ ಕಳೆದ ತಿಂಗಳು ದೇಶದಲ್ಲಿ ಸುಮಾರು 7,729 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಶೇಕಡ 15ರಷ್ಟು ಇಳಿಕೆ ದಾಖಲಿಸಿದೆ. ಕಂಪನಿಯು ಕಳೆದ ವರ್ಷದ ಮೇ ತಿಂಗಳಲ್ಲಿ ಸುಮಾರು 9,057 ಯುನಿಟ್ ವಾಹನ ಮಾರಾಟ ಮಾಡಿತ್ತು.

ಕಂಪನಿಯು ಕಳೆದ ವರ್ಷ ದೇಶದಲ್ಲಿ 6,036 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2011ರ ಮೇ ತಿಂಗಳ 7,046 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 14.33ರಷ್ಟು ಇಳಿಕೆಯಾಗಿದೆ. ಇದೇ ಸಮಯದಲ್ಲಿ ಫೋರ್ಡ್ ಇಂಡಿಯಾ ಸುಮಾರು 1,693 ಯುನಿಟ್ ಕಾರು ರಫ್ತು ಮಾಡಿದ್ದು, ಕಳೆದ ವರ್ಷದ 2,011 ಯುನಿಟ್ ರಫ್ತಿಗೆ ಹೋಲಿಸಿದರೆ ಗಮನಾರ್ಹವಾಗಿ ಇಳಿಕೆ ದಾಖಲಿಸಿದೆ.

ಮಾರುಕಟ್ಟೆಯ ಪರಿಸ್ಥಿತಿ ಕಠಿಣವಾಗಿದ್ದು, ಮಾರಾಟ ಹೆಚ್ಚಿಸಿಕೊಳ್ಳಲು ಅಡ್ಡಿಯಾಗಿದೆ. ಆದರೆ ಕಂಪನಿಯು ಮುಂಬರುವ ದಿನಗಳಲ್ಲಿ ಕುರಿತು ಹೆಚ್ಚು ಭರವಸೆ ಹೊಂದಿದೆ. ನಾವು ಈಗಾಗಲೇ ವ್ಯಾಲ್ಯೂ ಆಫ್ ಮನಿ, ಫನ್ ಟು ಡ್ರೈವ್ ಮತ್ತು ಮೈಲೇಜ್ ಮಂತ್ರಗಳಿಂದ ಕಾರು ಮಾರಾಟ ಹೆಚ್ಚಿಸಿಕೊಳ್ಳಲಿದ್ದೇವೆ" ಎಂದು ಫೋರ್ಡ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮೈಕಲ್ ಬೊನೆಮ್ ಹೇಳಿದ್ದಾರೆ.

ದೇಶದಲ್ಲಿ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಕಂಪನಿಯು ಇನ್ನಷ್ಟು ಡೀಸೆಲ್ ಆವೃತ್ತಿಗಳನ್ನು ಪರಿಚಯಿಸಲು ಕೂಡ ಯೋಜಿಸಿದೆ. ಡೀಸೆಲ್ ಆವೃತ್ತಿಗಳ ಮೂಲಕ ಮಾರಾಟ ಹೆಚ್ಚಿಸಿಕೊಳ್ಳುವ ಯೋಜನೆಯಲ್ಲಿ ಕಂಪನಿಯಿದೆ.

English summary
Ford India 2012 may sales decline 14.66 per cent. Company Last Month total sales at 7,729 units. Ford’s domestic sales at 6,036 units as compared from 7,046 units of the same month in Last year.
Story first published: Saturday, June 2, 2012, 15:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark