ಫೋರ್ಡ್ ಇಕೊಸ್ಪೋರ್ಟ್: ಚೆನ್ನೈ ಘಟಕಕ್ಕೆ 750 ಕೋಟಿ ರು. ಹೂಡಿಕೆ

Ford To Invest Rs.750 Crores For EcoSport
ಚೆನ್ನೈ ಫೋರ್ಡ್ ಘಟಕಕ್ಕೆ ಸುಮಾರು 750 ಕೋಟಿ ರುಪಾಯಿ ಹೂಡಿಕೆ ಮಾಡಲು ಫೋರ್ಡ್ ನಿರ್ಧರಿಸಿದೆ. ಈ ಕುರಿತು ಫೋರ್ಡ್ ಇಂಡಿಯಾ ಮುಖ್ಯಸ್ಥ ಮೈಕಲ್ ಬೊನೆಮ್ ತಮಿಳು ನಾಡು ಮುಖ್ಯಮಂತ್ರಿ ಜೆ ಜಯಲಲಿತಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

AIADMK ಆಡಳಿತಕ್ಕೆ ಬಂದ ನಂತರ ಫೋರ್ಡ್ ಇಂಡಿಯಾ ಚೆನ್ನೈನಲ್ಲಿ ಸುಮಾರು 1,130 ಕೋಟಿ ರು. ಹೂಡಿಕೆ ಮಾಡಿದೆ ಎಂದು ತಮಿಳುನಾಡು ಸರಕಾರ ತಿಳಿಸಿದೆ. ಜಾಗತಿಕ ಕಾರು ಪ್ಲಾಟ್ ಫಾರ್ಮ್ ನಲ್ಲಿ ಬರಲಿರುವ ಇಕೊಸ್ಪೋರ್ಟ್ ಉತ್ಪಾದನೆ ಈ ವರ್ಷ ಆರಂಭವಾಗಲಿದೆ. ಇಕೊಸ್ಪೋರ್ಟ್ ಕಾರು ಫೋರ್ಡ್ ನ ಮೊದಲ ಕಾಂಪ್ಯಾಕ್ಟ್ ಎಸ್ ಯುವಿ ಆಗಲಿದೆ.

ನೂತನ ಹೂಡಿಕೆಯಿಂದ ಫೋರ್ಡ್ ಚೆನ್ನೈ ಘಟಕದಲ್ಲಿ ಸುಮಾರು 400 ಉದ್ಯೋಗ ಸೃಷ್ಟಿಯಾಗಲಿದೆ. ಚೆನ್ನೈ ಘಟಕದಲ್ಲಿ ಕಂಪನಿಯು ಈಗಾಗಲೇ ಫೀಗೊ, ಫಿಯೆಸ್ಟ್ ಕ್ಲಾಸಿಕ್ ಮತ್ತು ಇಂಡೊವರ್ ಕಾರುಗಳನ್ನು ಚೆನ್ನೈ ಘಟಕದಲ್ಲಿ ಉತ್ಪಾದಿಸುತ್ತಿದೆ.

ಫೋರ್ಡ್ ಈಗಾಗಲೇ ಚೆನ್ನೈ ಘಟಕಕ್ಕೆ 4,500 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಗುಜರಾತ್ ಘಟಕಕ್ಕೆ ಸುಮಾರು 4 ಸಾವಿರ ರುಪಾಯಿ ಹೂಡಿಕೆ ಮಾಡುವುದಾಗಿ ಕಂಪನಿಯು ಈಗಾಗಲೇ ಪ್ರಕಟಿಸಿದೆ.

Most Read Articles

Kannada
English summary
Ford India will soon invest more than Rs. 750 Crore in its Chennai plant to build the recently unveiled EcoSport compact SUV. The new car based on Ford's global car platform will be built in India this year. The EcoSport will be the first compact SUV from Ford.
Story first published: Monday, January 23, 2012, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X