ಬ್ರೇಕಿಂಗ್ ನ್ಯೂಸ್: ಹೋಂಡಾ ಸಿಟಿ ಡೀಸೆಲ್ ಬರೋದು ಗ್ಯಾರಂಟಿ

ಆದರೆ ನಿರೀಕ್ಷೆಗಿಂತ ಬೇಗ ಅಂದರೆ ಈ ವರ್ಷವೇ ಡೀಸೆಲ್ ಹೋಂಡಾ ಸಿಟಿ ರಸ್ತೆಗಿಳಿಯುವುದು ಖಚಿತವಾಗಿದೆ. 2012ರ ಅಂತ್ಯಕ್ಕೆ ನೂತನ ಸಿಟಿ ಡೀಸೆಲ್ ಬರುವುದಾಗಿ ಕಂಪನಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ನೂತನ ಹೋಂಡಾ ಸಿಟಿ ಡೀಸೆಲ್ ಕಾರು 1.6 ಲೀಟರಿನ ಐಡೆಕ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದರ ಇಂಧನ ದಕ್ಷತೆ ಪ್ರತಿಲೀಟರ್ ಡೀಸೆಲಿಗೆ ಸುಮಾರು 20 ಕಿ..ಮಿ. ಇರಲಿದೆ. ಇದರ ದರ ಸುಮಾರು 8-8.5 ಲಕ್ಷ ರು. ಆಸುಪಾಸಿನಲ್ಲಿರಲಿದೆ.
ಈ ಕಾರು ವೆರ್ನಾ ಫ್ಲೂಡಿಕ್, ಮಾರುತಿ ಎಸ್ಎಕ್ಸ್4, ಫೋಕ್ಸ್ ವ್ಯಾಗನ್ ವೆಂಟೊ, ಸ್ಕೋಡಾ ರಾಪಿಡ್ ಮುಂತಾದ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಮುಂದಿನ ವರ್ಷ ಹೋಂಡಾ ಜಾಝ್ ಕೂಡ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ರಸ್ತೆಗಿಳಿಯಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








