ದರ ಹೆಚ್ಚಳ: ಹೋಂಡಾ ಕಾರುಗಳಿಗೆಷ್ಟು ರೇಟು?

Posted By:
To Follow DriveSpark On Facebook, Click The Like Button
ಬಜೆಟ್ ತರುವಾಯ ದರ ಹೆಚ್ಚಳ ಕಾರ್ಯಕ್ರಮಕ್ಕೆ ದೇಶದ ಹೆಚ್ಚಿನ ಕಾರು ಕಂಪನಿಗಳು ಚಾಲನೆ ನೀಡಿದ್ದವು. ಕೆಲವು ದಿನ ತಡವಾಗಿ ಹೋಂಡಾ ಕೂಡ ಈ ಬಳಗಕ್ಕೆ ಸೇರಿದೆ. 2012-13 ಕೇಂದ್ರ ಬಜೆಟಿನಲ್ಲಿ ಅಬಕಾರಿ ಸುಂಕ ಹೆಚ್ಚಳವಾದ ಹಿನ್ನಲೆಯಲ್ಲಿ ದರ ಹೆಚ್ಚಿಸಿರುವುದಾಗಿ ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಎಂಟ್ರಿ ಲೆವೆಲ್ ಸಣ್ಣಕಾರು ಹೋಂಡಾ ಬ್ರಿಯೊ ಬೇಸಿಕ್ ಎಂಟಿ ಮಾಡೆಲ್ ದರ ಸುಮಾರು 4 ಸಾವಿರ ರು.ವರೆಗೆ ಮತ್ತು ಬ್ರಿಯೊ ವಿ ಎಂಟಿ ದರ 10 ಸಾವಿರ ರು.ವರೆಗೆ ಏರಿಕೆ ಕಂಡಿದೆ(ದೆಹಲಿ ಎಕ್ಸ್ ಶೋರೂಂ ದರ).

ಪ್ರೀಮಿಯಂ ಹ್ಯಾಚ್ ಬ್ಯಾಕ್ ಹೋಂಡಾ ಜಾಝ್ ದರ 15 ಸಾವಿರ ರುಪಾಯಿ ಹೆಚ್ಚಾಗಿದೆ. ಈ ಹಿಂದೆ ಜಾಝ್ ಎಕ್ಸ್ ಶೋರೂಂ ದರ 5.75 ಲಕ್ಷ ರುಪಾಯಿ ಆಗಿತ್ತು.

ಮಧ್ಯಮ ಗಾತ್ರದ ಸೆಡಾನ್ ಕಾರು ಹೋಂಡಾ ಸಿಟಿ ವಿವಿಧ ಆವೃತ್ತಿಗಳ ದರ 5 ಸಾವಿರ ರು.ನಿಂದ 10,500 ರು.ವರೆಗೆ ಏರಿಕೆ ಕಂಡಿದೆ. ಇನ್ನು ಮುಂದೆ ಸಿಟಿ ದರ 7.1 ಲಕ್ಷ ರು.ನಿಂದ 10.33 ಲಕ್ಷ ರು. ಆಸುಪಾಸಿನಲ್ಲಿರಲಿದೆ.

ಹೋಂಡಾ ಸಿವಿಕ್ ವಿವಿಧ ಆವೃತ್ತಿಗಳ ದರ 36,600 ರುಪಾಯಿಯಿಂದ 45,800 ರುಪಾಯಿವರೆಗೆ ಹೆಚ್ಚಳವಾಗಿದೆ. ಇದರಿಂದಾಗಿ ಇನ್ನು ಮುಂದೆ ಸಿವಿಕ್ ವಿವಿಧ ಆವೃತ್ತಿಗಳ ದರ 12.59 ಲಕ್ಷ ರುಪಾಯಿಯಿಂದ 14.88 ಲಕ್ಷ ರು. ಆಸುಪಾಸಿನಲ್ಲಿರಲಿದೆ.

ಹೈಎಂಡ್ ಸೆಡಾನ್ ಹೋಂಡಾ ಅಕಾರ್ಡ್ ಕಾರು 67,500 ರು.ನಿಂದ 93,973 ಸಾವಿರ ರು.ವರೆಗೆ ದುಬಾರಿಯಾಗಿದೆ. ಹೀಗಾಗಿ ಇನ್ನು ಮುಂದೆ ವಿವಿಧ ಆವೃತ್ತಿ ಅಕಾರ್ಡ್ ಕಾರು ದರ 67,500 ರು.ನಿಂದ 93,975 ಸಾವಿರ ರು.ವರೆಗೆ ಇರಲಿದೆ. ಹೋಂಡಾ ಸಿಆರ್-ವಿ ಕಾರಿಗೆಷ್ಟು ದರ ಹೆಚ್ಚಳವಾಗಿದೆ ಎಂಬ ಮಾಹಿತಿಯನ್ನು ಕಂಪನಿ ಇನ್ನೂ ನೀಡಿಲ್ಲ.

English summary
Honda Revised Model-Wise Price List in India. Brio price increased by Rs 4,000 to Rs 10,000. Jazz's price gone up by Rs 15,000. City costlier by Rs 5,000 to Rs 10,500. Civic dearer by Rs 36,600 to Rs 45,800. Accord costly by Rs 67,500 to Rs 93,975.
Story first published: Thursday, March 22, 2012, 10:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark