ಕಾರು ಖರೀದಿಗೂ ಮುನ್ನ 7 ಸೂತ್ರಗಳನ್ನು ಪಾಲಿಸಿರಿ

Posted By:

ತಾನು ದೊಡ್ಡವನಾಗಿ ಉದ್ಯೋಗಕ್ಕೆ ಸೇರಿಕೊಂಡ ಬಳಿಕ ಆಕರ್ಷಕವಾದ ಕಾರೊಂದನ್ನು ಖರೀದಿಸುವುದು ಬಹುತೇಕರ ಕನಸಾಗಿರುತ್ತದೆ. ಆದರೆ ತಮ್ಮ ಕನಸಿನ ಬಗ್ಗೆ ಇತರರ ಜತೆ ಹಂಚಿಕೊಳ್ಳಲು ಸಂಕೋಚಪಡುತ್ತಾರೆ.

ಕೆಲವರು ತಮ್ಮ ಕನಸನ್ನು ಹಿಂಬಾಸುವುದರಲ್ಲಿ ಯಶ ಕಂಡರೆ ಇನ್ನು ಕೆಲವರು ಆರ್ಥಿಕ ಸಮಸ್ಯೆಯಿಂದಾಗಿ ತಮ್ಮ ಕನಸನ್ನು ಮೂಲೆಗೆ ಜೋತು ಬಿಡುತ್ತಾರೆ. ಹಾಗಿರುವಾಗ ಕಾರಿನ ಹೆಮ್ಮೆಯ ಮಾಲಿಕರಾಗಬೇಕೆಂಬ ಕನಸು ನಿಮ್ಮನ್ನು ಸದಾ ಕಾಡುತ್ತಿದೆಯೇ? ಇದನ್ನು ಶುಭ ಸಂಕೇತ ಎಂದೇ ವ್ಯಾಖ್ಯಾನಿಸಬಹುದು.

ಯಾಕೆಂದರೆ ನಿಮ್ಮಲ್ಲಿ ಕಾರು ಖರೀದಿ ಮಾಡಬೇಕೆಂಬ ಹಂಬಲವಿದ್ದಲ್ಲಿ ಅದನ್ನು ಖಂಡಿತ ನೀವು ಸಾಧಿಸಿಯೇ ಬಿಡುತ್ತೀರಾ ಎಂಬುದರಲ್ಲಿ ಎರಡು ಮಾತಿಲ್ಲ. ಅಂದ ಹಾಗೆ ದೇಶಿಯ ಮಾರುಕಟ್ಟೆಯಲ್ಲಿಂದು ಹಲವು ವಿವಿಧ ರಂಗುರಂಗಿನ ಕಾರುಗಳ ಪರಿಚಯವಾಗುತ್ತಿದೆ.

ಸಣ್ಣ ಕಾರಿನಿಂದ ಹಿಡಿದು ದುಬಾರಿ ಕಾರುಗಳನ್ನು ನಾವು ನೋಡಬಹುದು. ಈ ಪೈಕಿ ಯಾವುದು ಉತ್ತಮ ಬ್ರಾಂಡ್ ಎಂದು ತಿಳಿದುಕೊಳ್ಳುವುದು ಕಷ್ಟಕರ. ಹಾಗಾಗಿ ನಾವಿಂದು ಇಲ್ಲಿ ಚರ್ಚಿಸಲಿರುವ ಕೆಲವು ಅಂಶಗಳನ್ನು ಗಮನವಿಟ್ಟುಕೊಂಡು ಕೇಳಬೇಕು. ಅಲ್ಲದೆ ನಾವು ಸೂಚಿಸುವ ಏಳು ಸಲಹೆಗಳನ್ನು ಪಾಲಿಸಿದ್ದಲ್ಲಿ ಖಂಡಿತ ನಿಮ್ಮ ನೆಚ್ಚಿನ ಕಾರು ನಿಮ್ಮದಾಗಿಸಬಹುದಾಗಿದೆ.

ಮನೆ ಬಳಿಕ ಕಾರು ಖರೀದಿ ಮಾಡುವುದೆಂದರೆ ಕಷ್ಟದ ಕೆಲಸ. ಇದು ಸ್ವಲ್ಪ ದುಬಾರಿ ಕೂಡಾ ಹೌದು. ಹಾಗಿದ್ದರೆ ಬನ್ನಿ ಕಾರು ಖರೀದಿಗೆ ಮುನ್ನ ಯಾವೆಲ್ಲ ಅಂಶಗಳಿಗೆ ಪ್ರಾಧಾನ್ಯತೆ ನೀಡಬೇಕೆಂಬುದನ್ನು ನೋಡೋಣ.

ಹೋಂವರ್ಕ್ ಅಥವಾ ಶೋಧನೆ ಮಾಡಿ

ಹೋಂವರ್ಕ್ ಅಥವಾ ಶೋಧನೆ ಮಾಡಿ

ಕಾರು ಖರೀದಿಗೂ ಮುನ್ನ ಮೇಲೆ ಹೇಳಿದ ವಿಷಯಕ್ಕೆ ಅತಿ ಹೆಚ್ಚಿನ ಮಹತ್ವ ಕೊಡುವುದು ಅತಿ ಅಗತ್ಯ. ಇಂದಿನ ಯಾಂತ್ರಿಕ ಯುಗದಲ್ಲಿ ಇಂಟೆರ್‌ನೆಟ್‌ಗಳ ಸೇವೆ ಲಭ್ಯವಿರುವುದರಿಂದ ಯಾವೆಲ್ಲ ಕಂಪನಿಗಳು ಯಾವ ಮಾಡೆಲ್‌ಗಳನ್ನು ಬಿಡುಗಡೆಗೊಳಿಸುತ್ತಿವೆ ಎಂಬುದನ್ನು ತಿಳಿಯುವುದು ಸುಲಭಕರ. ಇದರಂತೆ ನಿಮ್ಮ ಬಜೆಟ್‌ಗೆ ಅನುಸಾರವಾಗಿ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು. ದೇಶದ ಪ್ರಖ್ಯಾತ ಆಟೋಮೊಬೈಲ್ ವೆಬ್‌ಸೈಟ್ ಅಥವಾ ಮ್ಯಾಗಜಿನ್‌ಗಳಲ್ಲಿ ವಿವಿಧ ತರಹದ ವರ್ಣೀಯ ಕಾರು ವೆರಿಯಂಟ್‌ಗಳ ಬಗ್ಗೆ ಮಾಹಿತಿಗಳು ಲಭ್ಯವಿದೆ.

ಕಾರಿನ ಬೇಸಿಕ್ ದರದಿಂದ ಹಿಡಿದು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಂಡರೆ ಉತ್ತಮ. ಸಾಮಾನ್ಯವಾಗಿ ಕಾರುಗಳು ಏಕ್ಸ್ ಶೋ ರೂಂ ದರಗಳನ್ನು ಪ್ರಕಟಿಸುತ್ತವೆ. ಹಾಗಾಗಿ ಅಂತಹ ನಿರ್ದಿಷ್ಟ ಆನ್ ರೋಡ್ ದರ ಎಷ್ಟಾಗಬಹುದು ಎಂಬುದನ್ನು ಪರಿಣಿತರಿಂದ ತಿಳಿದುಕೊಂಡರೆ ಉತ್ತಮ.

ಬಜೆಟ್ ನಿಗದಿಪಡಿಸಿ

ಬಜೆಟ್ ನಿಗದಿಪಡಿಸಿ

ಯಾವುದೇ ಕೆಲಸ ಕಾರ್ಯಕ್ಕೂ ಮುಂದಾಗುವ ಮುನ್ನ ನಿಮ್ಮ ಕೈಯಲ್ಲಿರುವ ಬಜೆಟ್ ಬಗ್ಗೆ ಮೊದಲೇ ಯೋಜನೆ ಹೊಂದಿರಬೇಕಾಗಿರುವುದು ಅತಿ ಅಗತ್ಯ. ನಿಮ್ಮ ಉದ್ಯೋಗದಲ್ಲಿ ಪಡೆಯುವ ವೇತನದಲ್ಲಿ ಉಳಿತಾಯವಾಗುವ ವೇತನದ ಎಷ್ಟು ಪಾಲನ್ನು ಕಾರು ಖರೀದಿಗಾಗಿ ವಿನಿಯೋಗಿಸಲು ಸಾಧ್ಯ ಎಂಬುದರ ಬಗ್ಗೆ ಸ್ಪಷ್ಟ ಯೋಜನೆಯಿರಬೇಕು. ನಿಮಗೆ ಕಾರು ಲೋನ್ ಪಡೆಯುವ ಅಗತ್ಯವಿದೆಯೇ? ಬಹುತೇಕ ಬ್ಯಾಂಕ್‌ಗಳು ಕಾರಿಗೆ ಸಾಲ ನೀಡುವುದರಿಂದ ನಿಗದಿತ ಬಡ್ಡಿದರದಲ್ಲಿ ಹಿಂತುರಿಗಿಸಬೇಕಾಗಿದೆ. ಅಂತೆಯೇ ಆರಂಭದಲ್ಲಿ ಎಷ್ಟು ದುಡ್ಡು (ಡೌನ್ ಪೇಮೆಂಟ್)ಕಟ್ಟಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡ ಮೇಲಷ್ಟೇ ಜಾಗರೂಕತೆಯಿಂದ ಮುಂದುವರೆಯಿರಿ.

ನಿಮ್ಮ ಅಗತ್ಯಗಳ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಅಗತ್ಯಗಳ ಬಗ್ಗೆ ತಿಳಿದುಕೊಳ್ಳಿ

ನೀವು ನಿಗದಿಪಡಿಸಿದ ಬಜೆಟ್‌ನೊಳಗೆ ಹಲವು ಕಾರು ತಯಾರಕ ಕಂಪನಿಗಳು ಲಭ್ಯವಿರಬಹುದು. ಹಾಗಾಗಿ ಮೊದಲು ನಿಮ್ಮ ಅಗತ್ಯಗಳನ್ನು ತಿಳಿದುಕೊಳ್ಳುವುದು ಉತ್ತಮ. ಈ ಕೆಳಗಿನ ಪಾಯಿಂಟ್‌ಗಳ ಬಗ್ಗೆ ಗಮನವಿರಿಸಿ.

ಕಾರಿನಲ್ಲಿ ಎಷ್ಟು ಜನರು ಸಂಚರಿಸುತ್ತಾರೆ?

ಇದು ಕಾರಿನ ಸಿಟ್ಟಿಂಗ್ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಲು ನೆರವಾಗಲಿದೆ.

ದೈನಂದಿನ ಜೀವನದಲ್ಲಿ ಎಷ್ಟು ದೂರ ಪಯಣಿಸಬೇಕಾಗುತ್ತದೆ?

ದೈನಂದಿನ ಜೀವನದಲ್ಲಿ 20 ಕೀ.ಮಿಗಿಂತಲೂ ಕಡಿಮೆ ಸಂಚರಿಸುವುದಾದರೆ ನಿಮಗೆ ಡೀಸೆಲ್ ಕಾರುಗಳ ಅಗತ್ಯವಿರುವುದಿಲ್ಲ.

ಹೆಚ್ಚು ಲಗ್ಗೇಜ್ ಸ್ಪೇಸ್ ಅಗತ್ಯವಿದೆಯೇ?

ಹೆಚ್ಚು ಲಗ್ಗೇಜ್ ಸ್ಪೇಸ್ ಅಗತ್ಯವಿದ್ದಲ್ಲಿ ಸೆಡಾನ್, ಎಂಪಿವಿ ಅಥವಾ ಎಸ್‌ಯುವಿ ಕಾರು ಆಯ್ಕೆ ಮಾಡುವುದು ಹೆಚ್ಚು ಸೂಕ್ತ. ಒಂದು ವೇಳೆ ಲಗ್ಗೇಜ್ ಸ್ಪೇಸ್ ಅಗತ್ಯವಿಲ್ಲದಿದ್ದಲ್ಲಿ ಹ್ಯಾಚ್‌ಬ್ಯಾಕ್ ಅಥವಾ ಸಣ್ಣ ಕಾರು ಆಯ್ಕೆ ಮಾಡಬಹುದಾಗಿದೆ.

ಎಕ್ಸ್‌ಜೇಂಜ್ ಬೋನಸ್

ಎಕ್ಸ್‌ಜೇಂಜ್ ಬೋನಸ್

ಇದು ಕಾರು ಖರೀದಿಯ ಅತಿ ಮುಖ್ಯ ಘಟಕವಾಗಿದೆ. ನಾವು ಯಾವ ಸಮಯದಲ್ಲಿ ಕಾರು ಖರೀದಿಗೆ ಮುಂದಾಗುತ್ತೇವೆ ಎಂಬುದು ಬಹಳ ಪ್ರಾಮುಖ್ಯವೆನಿಸುತ್ತದೆ. ಯಾಕೆಂದರೆ ಕೆಲವೊಂದು ಕಾರು ಕಂಪನಿಗಳು ನಿಗದಿತ ಅವಧಿಗಳಲ್ಲಿ ತಮ್ಮ ಕಾರುಗಳಿಗೆ ಭಾರಿ ಡಿಸ್ಕೌಂಟ್ ಘೋಷಿಸುತ್ತವೆ. ಹಾಗೆಯೇ ಹಬ್ಬದ ಸೀಸನ್ ಸಂದರ್ಭದಲ್ಲಿ ಕಾರು ಖರೀದಿಗೆ ಸುಗ್ಗಿಯ ಕಾಲವಾಗಿರುತ್ತದೆ.

ಅಂತೆಯೇ ನೀವು ಈಗಾಗಲೇ ಕಾರು ಹೊಂದಿದ್ದು ಎಕ್ಸ್‌ಚೇಂಜ್ ಮಾಡಲು ಬಯಸಿದಾಗಲೂ ಎಕ್ಸ್‌ಚೇಂಜ್ ಬೋನಸ್ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇದು ನಿಮಗೆ ಲಾಭದಾಯಕವಾಗಲಿದೆ.

ಟೆಸ್ಟ್ ಡ್ರೈವ್

ಟೆಸ್ಟ್ ಡ್ರೈವ್

ನೀವು ಕಾರು ಖರೀದಿ ಮಾಡುವ ಮುನ್ನ ಟೆಸ್ಟ್ ಡ್ರೈವ್ ಮಾಡುವುದು ಅತಿ ಮುಖ್ಯ. ಇದರಿಂದ ಕಾರು ನಿಮ್ಮ ದೇಹಭಾಷೆಗೆ ಸರಿಯಾಗಿ ಹೊಂದಿಕೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗೆಯೇ ಕಾರಿನ ಕುಂದು ಕೊರತೆಗಳ ಬಗ್ಗೆಯೂ ಟೆಸ್ಟ್ ಡ್ರೈವ್‌ನಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಕಾರು ಖರೀದಿಗೆ ಮೊದಲು ಒಂದೆರಡು ಕಂಪನಿಗಳ ಕಾರುಗಳನ್ನು ಟೆಸ್ಟ್ ಡ್ರೈವ್ ಮಾಡುವ ಮೂಲಕ ಯಾವುದು ಒಳ್ಳೆಯದು ಎಂದು ತಿಳಿದುಕೊಳ್ಳಲು ಪರಿಣಿತರ ಸಹಾಯ ಪಡೆಯುವುದು ಉತ್ತಮ.

ಚೌಕಾಶಿ

ಚೌಕಾಶಿ

ಇತ್ತೀಚೆಗಿನ ದಿನಗಳಲ್ಲಿ ಚೌಕಾಶಿ ಅಷ್ಟು ಪ್ರಾಯೋಗಿಕವಲ್ಲದಿದ್ದರೂ ಕರಾರು ಸಂದರ್ಭದಲ್ಲಿ ಕಾರಿನ ದರದ ಬಗ್ಗೆ ಚೌಕಾಶಿ ಮಾಡುವುದರಿಂದ ತಪ್ಪೇನಿಲ್ಲ. ಡೀಲರ್ ಜತೆ ಕಾರು ದರ, ಇನ್ಸುರನ್ಸ್ ಹಾಗೂ ಇತರ ಪ್ರಯೋಜನಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ. ಒಂದು ವೇಳೆ ವಿಲಾಸಿ ಪ್ರಯಾಣಕ್ಕಾಗಿ ಕಾರಿಗೆ ಹೆಚ್ಚುವರಿ ಬಿಡಿಭಾಗಗಳನ್ನು ಜೋಡಿಸಬೇಕೆಂದಿದ್ದರೆ ಅದಕ್ಕೆ ಎಷ್ಟು ಹೆಚ್ಚುವರಿ ವೆಚ್ಚ ತಗಲಬಹುದು ಎಂಬುದರ ಬಗ್ಗೆಯೂ ಸಂಪೂರ್ಣ ಮಾಹಿತಿ ಪಡೆಯಕೊಳ್ಳತಕ್ಕದ್ದು.

ಹಾಗೆಯೇ ನಿಕಟ ಭವಿಷ್ಯದಲ್ಲಿ ಯಾವುದಾದರೂ ಆಫರ್‌ಗಳು ಇದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು. ಅಂತೆಯೇ ಹಳೆ ಕಾರಿನ ಎಕ್ಸ್‌ಜೇಂಚ್ ಸಂದರ್ಭದಲ್ಲಿ ಬಾರ್ಗೈನ್ ಮಾಡುವುದರಿಂದ ತಪ್ಪೇನಿಲ್ಲ.

ಡೀಲ್ ಸಮಾಪ್ತಿಗೊಳಿಸಿರಿ

ಡೀಲ್ ಸಮಾಪ್ತಿಗೊಳಿಸಿರಿ

ಈ ಎಲ್ಲ ವಿಚಾರಗಳ ಬಗ್ಗೆ ತಿಳಿದುಕೊಂಡ ಬಳಿಕ ನಿಮ್ಮ ಡೀಲ್ ಅಂತ್ಯಗೊಳಿಸಬಹುದು. ಹಾಗಂತ ಡೀಲ್ ಅಂತಿಮಗೊಳಿಸಲು ಅವಸರಪಡಬಾರದು. ಒಪ್ಪಂದವನ್ನು ಸರಿಯಾಗಿ ಓದಿದ ಬಳಿಕ ಕರಾರಿಗೆ ಸಹಿ ಮಾಡತಕ್ಕದ್ದು. ಹಾಗೆಯೇ ವೇಟಿಂಗ್ ಅವಧಿ ಹಾಗೂ ಡೆಲಿವೆರಿ ಡೇಟ್ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕು.

ಕಾರು ಖರೀದಿಗೂ ಮುನ್ನ 7 ಸೂತ್ರಗಳನ್ನು ಪಾಲಿಸಿರಿ

ಮೇಲೆ ತಿಳಿಸಲಾದ ಈ ಎಲ್ಲ ಏಳು ವಿಧಾನಗಳನ್ನು ಸರಿಯಾಗಿ ಪಾಲಿಸಿದ್ದಲ್ಲಿ ನಿಮ್ಮ ಕನಸಿನ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು. ನಾವಿಲ್ಲಿ ತಿಳಿಸಿದ ಸಲಹೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ. ಶುಭವಾಗಲಿ!

English summary
Buying a car can be a very easy task if you follow these seven steps. Identify your needs and start your car research. Set your budget and shortlist the cars you want to buy.
Please Wait while comments are loading...

Latest Photos