ಹ್ಯುಂಡೈ ಸ್ಯಾಂಟ್ರೊ, ಐ10 ಕಾರುಗಳಿಗೆ 5 ಸ್ಟಾರ್ ಆಫರ್

Posted By:
To Follow DriveSpark On Facebook, Click The Like Button
ಸಣ್ಣಕಾರು ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಕಾರು ಕಂಪನಿಗಳು ಗ್ರಾಹಕರಿಗೆ ನಾನಾ ಆಮೀಷ, ಆಫರುಗಳನ್ನು ನೀಡುತ್ತಿವೆ. ಇದೀಗ ಹ್ಯುಂಡೈ ಕಂಪನಿಯು ಸ್ಯಾಂಟ್ರೊ ಮತ್ತು ಐ10 ಕಾರುಗಳಿಗೆ 5 ಸ್ಟಾರ್ ವಿಮಾ ಕಾರ್ಯಕ್ರಮವನ್ನು ಆರಂಭಿಸಿದೆ. ಹೊಸದಾಗಿ ಸ್ಯಾಂಟ್ರೊ, ಐ10 ಖರೀದಿಸುವರು ಈ ಐದು ಸೌಲಭ್ಯಗಳನ್ನು ಪಡೆಯಬಹುದಾಗಿದೆ.

5 ಸ್ಟಾರ್ ಸೌಲಭ್ಯ ಅಂದ್ರೆ...

* ಸಂಪೂರ್ಣ ಕಾರು ನಿರ್ವಹಣೆ ವಿಮೆ: ಮೂರು ವರ್ಷ/40 ಸಾವಿರ ಕಿ.ಮೀ. ಪ್ರಯಾಣಕ್ಕೆ ಸಂಪೂರ್ಣ ಮೇಟೆಂನ್ಸ್ ವಿಮೆ.

* ಮೋಟರ್ ವಿಮೆ: ಕೇವಲ ಒಂದು ರುಪಾಯಿಗೆ ವಾಹನ ವಿಮಾ ಸೌಲಭ್ಯ

* ವಾರೆಂಟಿ ವಿಮೆ: ಮೂರು ವರ್ಷಕ್ಕೆ ವಾರೆಂಟಿ ವಿಮೆ. ಅಂದ್ರೆ 40 ಸಾವಿರ ಕಿ.ಮೀ.ವರೆಗೆ ವಾರೆಂಟಿ ವಿಮಾ ಸೌಲಭ್ಯ.

* ವಿನಿಮಯ ಬೋನಸ್: ಬೇರೆ ಹ್ಯುಂಡೈ ಕಾರು ವಿನಿಮಯ ಮಾಡಲು ಇಚ್ಚಿಸುವರಿಗೆ 15 ಸಾವಿರ ರುಪಾಯಿ ಎಕ್ಸ್ ಚೇಂಜ್ ಬೋನಾಸ್.

* ರಸ್ತೆ ಬದಿ ಸೇವೆ: ಎರಡು ವರ್ಷಗಳ ಕಾಲ ದಿನದ 24 ಗಂಟೆ, ವಾರದ ಏಳು ದಿನವೂ ರೋಡ್ ಸೈಡ್ ಸೇವಾ ಸೌಲಭ್ಯ

"ನೂತನ 5 ಸ್ಟಾರ್ ಕಾರ್ಯಕ್ರಮದ ಮೂಲಕ ಗ್ರಾಹಕರಿಗೆ ಸಂಪೂರ್ಣ ಸೇವೆ ನೀಡಲು ಕಂಪನಿ ಬದ್ಧವಾಗಿದೆ" ಎಂದು ಹ್ಯುಂಡೈ ಇಂಡಿಯಾದ ನಿರ್ದೇಶಕರಾದ ಅರವಿಂದ್ ಸಕ್ಸೆನಾ ಹೇಳಿದ್ದಾರೆ.

ಇದೇ ರೀತಿ ಷೆವರ್ಲೆ ಕೂಡ ತನ್ನ ಸ್ಪಾರ್ಕ್ ಕಾರಿಗಾಗಿ ಉಚಿತ ನಿರ್ವಹಣಾ ಸ್ಕೀಮ್ ಹೊರತಂದಿತ್ತು. ಇಂತಹ ಆಫರ್ ಮೂಲಕ ಕಂಪನಿಯು ತನ್ನ ಮಾರಾಟ ಹೆಚ್ಚಿಸಿಕೊಂಡಿತ್ತು. ಗ್ರಾಹಕರಿಗೆ ಇಂತಹ 5-ಸ್ಟಾರ್ ಸೇವೆ ನೀಡುವ ಮೂಲಕ ಕಂಪನಿಯು ತನ್ನ ಮಾರಾಟ ಹೆಚ್ಚಿಸಿಕೊಳ್ಳುವುದೇ ಕಾದು ನೋಡಬೇಕಿದೆ.

English summary
t a time when petrol car sales are faring poorly, car manufacturers are offering many goodies to attract buyers towards their petrol cars. The new entrant to join the group is Hyundai Motors by launching a new programme called Hyundai 5 Star Assurance Program on its Santro and next generation i10 small cars.
Story first published: Tuesday, May 8, 2012, 15:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark