ದೇಶಕ್ಕೆ ಶೀಘ್ರದಲ್ಲಿ ಬರಲಿದ್ದಾನೆ ಫೋರ್ಸ್ ಗೂರ್ಖಾ

Posted By:
To Follow DriveSpark On Facebook, Click The Like Button
ದೇಶದ ರಸ್ತೆಗೆ ಮೂರು ವರ್ಷದ ಹಿಂದೆ ಆಗಮಿಸಿ ತೆರೆ ಮರೆಗೆ ಸರಿದಿದ್ದ ಆಫ್ ರೋಡರ್ ಫೋರ್ಸ್ ಗೂರ್ಖಾ ಎಸ್‌ಯುವಿಯನ್ನು ಮತ್ತೆ ದೇಶದ ರಸ್ತೆಗೆ ಪರಿಚಯಿಸಲು ಫೋರ್ಸ್ ಮೋಟರ್ಸ್ ಯೋಜಿಸಿದೆ. ಕ್ಲಾಸಿಕ್ ವಿನ್ಯಾಸದ ಗೂರ್ಖಾ ನೋಡಲು ಸರಳ ವಿನ್ಯಾಸ ಹೊಂದಿದ್ದು, ಅತ್ಯುತ್ತಮ ಆಫ್ ರೋಡರ್ ಎಂಬ ಖ್ಯಾತಿ ಪಡೆದಿದೆ.

ವಿಶೇಷವೆಂದರೆ ಫೋರ್ಸ್ ಗೂರ್ಖಾ ಕಾರಿಗೆ ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್ ತಂತ್ರಜ್ಞಾನವನ್ನು ಎರವಲು ಪಡೆಯಲಾಗಿದೆ. ಇದರಿಂದ ಇದು ಅಲ್ಟಿಮೆಟ್ ಆಫ್ ರೋಡರ್ ಆಗಿ ಹೊರಹೊಮ್ಮಿದೆ. ಸಾಮಾನ್ಯ ಇಂಟಿರಿಯರ್, ಬ್ರಿಟನ್ ಮಾದರಿಯ ಲುಕ್, ಅತ್ಯುತ್ತಮ ದಕ್ಷತೆಯಿಂದ ಗೂರ್ಖಾ ಎಸ್ ಯುವಿ ಇಷ್ಟವಾಗುತ್ತದೆ.

"ಗೂರ್ಖಾ ಎನ್ನುವುದು ದೇಶದ ರಸ್ತೆಗೆ ಅತ್ಯುತ್ತಮ ಆಫ್ ರೋಡರ್ ಕಾರಾಗಿದೆ" ಎಂದು ಫೋರ್ಸ್ ಮೋಟರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸನ್ ಪಿರೊಡಿಯಾ ಹೇಳುತ್ತಾರೆ. "ಕಂಪನಿಯು ಪ್ರಯಾಣಿಕ ವಾಹನ, ವಾಣಿಜ್ಯ ವಾಹನ, ಕಮ್ಯೂಟರ್ ವಾಹನಗಳನ್ನೆಲ್ಲ ಪರಿಚಯಿಸಿದೆ. ಇದೀಗ ನೂತನ ಗೂರ್ಖಾವನ್ನು ಇಲ್ಲಿಗೆ ಮರುಪರಿಚಯಿಸಲು ಯೋಜಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ದೇಶದ ಆಫ್ ರೋಡ್ ಸವಾರರನ್ನು ಈ ಹಿಂದೆಯೇ ಫೋರ್ಸ್ ಗೂರ್ಖಾ ಸೆಳೆದಿತ್ತು. ಆದರೆ ಅಲಭ್ಯತೆ ಮತ್ತು ದೀರ್ಘಕಾಲದ ವೇಟಿಂಗ್ ಪಿರೆಯಿಡ್ ಮತ್ತು ಸರ್ವಿಸ್ ಬ್ಯಾಕಪ್ ಸಮರ್ಪಕವಾಗಿರದೆ ಇದು ಹೆಚ್ಚು ಯಶಸ್ವಿಯಾಗಿರಲಿಲ್ಲ. ಇದೀಗ ಕಂಪನಿಯು ನೂತನ ವಿತರಣೆ ಜಾಲ ಮೂಲಕ ಈ ಎಲ್ಲಾ ತೊಂದರೆಗಳನ್ನು ಬಗೆಹರಿಸುವ ನಿರೀಕ್ಷೆಯಿದೆ.

ಕಂಪನಿಯು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ದೇಶದ ರಸ್ತೆಗೆ ಫೋರ್ಸ್ ಒನ್ ಎಂಬ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಪರಿಚಯಿಸಿತ್ತು. ಆದರೆ ಅದು ಹೆಚ್ಚು ಮಾರಾಟಗೊಂಡಿಲ್ಲ. ಇದಕ್ಕಾಗಿ ಡೀಲರ್ಷಿಪ್ ಕೊರತೆ ಇದಕ್ಕೆ ಕಾರಣವೆಂದು ಪಿರೊಡಿಯಾ ಹೇಳಿದ್ದಾರೆ.

ಇದರೊಂದಿಗೆ ಕಂಪನಿಯು ಮುಂದಿನ ವರ್ಷದ ಮಲ್ಟಿ ಯುಟಿಲಿಟಿ ವ್ಯಾನೊಂದನ್ನು ಪರಿಚಯಿಸಲು ಯೋಜಿಸಿದೆ. ಇದು ಇನ್ನೋವಾ ಜೊತೆ ಪೈಪೋಟಿ ನಡೆಸಲಿದೆಯಂತೆ.

English summary
Indian offroader Force Gurkha SUV Comeback India Soon. Force Motor planning to relaunch Gurkhs SUV in Indian Market. Force Motors last year launched first SUV Force One in India. Company Planning to increase dealership Network in India.
Story first published: Monday, July 2, 2012, 11:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark