ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು

By Nagaraja

ಭವಿಷ್ಯದ ಕಾರುಗಳ ಪಟ್ಟಿಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಸಿಎಕ್ಸ್-75 ಸೂಪರ್ ಕಾರು ಕಾನ್ಸೆಪ್ಟನ್ನು ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಕೈಬಿಟ್ಟಿದೆ. ಇದರೊಂದಿಗೆ ಜಗತ್ತಿನೆಲ್ಲೆಡೆಯ ಕಾರು ಪ್ರಿಯರಿಗೆ ನಿರಾಸೆಯಾಗಿದೆ.

ಯೂನಿಕ್ ಲುಕ್ ಹಾಗೂ ರನ್ನಿಂಗ್ ಗೇರ್ ತಂತ್ರಜ್ಞಾನ ಹೊಂದಿದ್ದ ಈ ಭವಿಷ್ಯದ ಹೈಪರ್ ಕಾರು ನಿರ್ಮಾಣಕ್ಕೆ ಬ್ರಿಟಿಷ್ ಕಾರು ತಯಾರಕ ಕಂಪನಿ ಮುಂದಾಗಿತ್ತು. ಆದರೆ ಜಾಗತಿಕ ಹಿಂಜರಿತದ ನಡುವೆ ಸದ್ಯದ ಪರಿಸ್ಥಿತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ದುಬಾರಿ ಕಾರು ತಯಾರಿಸುವುದು ಸಮಂಜಸವಲ್ಲ ಎಂಬ ನಿರ್ಧಾರಕ್ಕೆ ಕಂಪನಿ ಬಂದಿದೆ.

ಜಾಗ್ವಾರ್ ಪ್ರಕಾರ ಯಾವುದೇ ತಾಂತ್ರಿಕ ತೊಂದರೆಗಳಿಂದಾಗಿ ಯೋಜನೆ ಕೈಬಿಟ್ಟಿಲ್ಲ. ನಮಗೆ ಬೇಕಾದರೆ ಯೋಜನೆಯೊಂದಿಗೆ ಮುಂದಕ್ಕೆ ಸಾಗಬಹುದು. ಆದರೆ ಪ್ರಸಕ್ತ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ ಒಂದು ಮಿಲಿಯನ್ ಪೌಂಡ್ (8.74 ಕೋಟಿ) ಬೆಳೆಬಾಳುವ ಕಾರನ್ನು ತಯಾರಿಸುವುದು ತಪ್ಪಾದ ನಿರ್ಧಾರವಾದಿತು ಎಂದು ಜಾಗ್ವಾರ್ ಬ್ರಾಂಡ್ ನಿರ್ದೇಶಕರಾದ ಆಡ್ರಾಯ್ನ್ ಹಾಲ್‌ಮಾರ್ಕ್ ಅವರು ಆಟೋಕಾರು ಡಾಟ್ ಕೊ ಡಾಟ್ ಯುಕೆಗೆ ತಿಳಿಸಿದ್ದಾರೆ.

ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು

2010ರ ಪ್ಯಾರಿಸ್ ಮೋಟಾರ್ ಶೋದಲ್ಲಿ ಜಾಗ್ವಾರ್ ಸಿಎಕ್ಸ್-75 ಸೂಪರ್ ಕಾರು ಕಾನ್ಸೆಪ್ಟನ್ನು ಮೊದಲ ಬಾರಿಗೆ ಅನಾವರಣ ಮಾಡಲಾಗಿತ್ತು.

ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು

ಆ ಬಳಿಕ 2012ರ ಆರಂಭದಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲೂ ಜಾಗ್ವಾರ್ ಸೂಪರ್ ಕಾರು ಪ್ರಮುಖ ಆಕರ್ಷಣೆಯಾಗಿತ್ತು.

ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು

ಜಾಗ್ವಾರ್ ಸಿಎಕ್ಸ್-75 ಕಾರು ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಪ್ರತಿ ವೀಲ್ 778 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು

ಕಾರ್ಬನ್ ಫೈಬರ್‌ನಿಂದ ಚಾಸೀಸ್ ತಯಾರಿಸಲಾಗಿದೆ. ಅಲ್ಲದೆ ಬ್ಯಾಟರಿಗಳನ್ನು ಮೈಕ್ರೊ ಗ್ಯಾಸ್ ಟರ್ಬೈನ್ ನೆರವಿನಿಂದ ಚಾರ್ಚ್ ಮಾಡಬಹುದಾಗಿದೆ.

ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು

2011ರಲ್ಲಿ ಲಿಮಿಟೆಡ್ 250ರಷ್ಟು ಯುನಿಟ್‌ಗಳನ್ನು ಉತ್ಪಾದಿಸುವ ಬಗ್ಗೆ ಜಾಗ್ವಾರ್ ಸಂಕೇತ ನೀಡಿತ್ತು. ಇದಕ್ಕೆ 1.6 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಸುವ ಕುರಿತು ಚಿಂತನೆ ನಡೆಸಲಾಗಿತ್ತು.

ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು

ಆದರೆ ಇದೀಗ ಅತಿ ದುಬಾರಿ ಸೂಪರ್ ಕಾರು ಯೋಜನೆ ಕೈಬಿಡಲು ಕಂಪನಿ ನಿರ್ಧರಿಸಿದೆ.

ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು
ಕನಸಾಗಿಯೇ ಉಳಿದ ಜಾಗ್ವಾರ್ ಸೂಪರ್ ಕಾರು

Most Read Articles

Kannada
English summary
British luxury carmaker Jaguar has stopped its plans to launch the C-X75 supercar. “We feel we could make the car work, but looking at the global austerity measures in place now, it seems the wrong time to launch an £800,000 to £1 million (Rs 8.74 crore) supercar. This is backed up by other products from us that people are screaming out for” said Global brand director Adrian Hallmark.
Story first published: Monday, December 17, 2012, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X