ಪ್ಲೇಬಾಯ್ ಬೆತ್ತಲೆ ಸುಂದರಿ ಲಿಂಡ್ಸೆ ಕಾರು ಅಪಘಾತ

Posted By:

ಹಾಲಿವುಡ್ ಕಿರಿಕ್ ನಟಿ ಖ್ಯಾತಿಯ ಲಿಂಡ್ಸೆ ಲೋಹನ್ ಬಾಡಿಗೆ ಕಾರು ಪೋರ್ಷ್ 911, ಟ್ರಕ್ಕೊಂದಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಪ್ಲೇಬಾಯ್ ಮ್ಯಾಗಜಿನ್‌ ಮುಖಪುಟಕ್ಕಾಗಿ ಬೆತ್ತಲೆಯಾಗಿದ್ದ ಬಿಳಿ ಸುಂದರಿ ಲಿಂಡ್ಸೆಗೆ ಯಾವುದೇ ಅಪಾಯವಾಗಿಲ್ಲ. ಹಿಂದೊಮ್ಮೆ ಜಲಕ್ರೀಡೆಯಲ್ಲಿ ಬಿಕಿನಿ ಜಾರಿಬಿಟ್ಟು ಪಡ್ಡೆಗಳ ನಿದ್ದೆ ಕೆಡಿಸಿದ್ದ ಲಿಂಡ್ಸೆ ಇಂತಹ ಹಲವು ಕಾರು ಅಪಘಾತಗಳನ್ನು ಮಾಡಿ ಕುಖ್ಯಾತಿ ಗಳಿಸಿದ್ದಾಳೆ.

ದಿವಂಗತ ಹಾಲಿವುಡ್ ನಟ ಎಲಿಜಬೆತ್ ಟೈಲರ್ ಜೀವನ ಚರಿತ್ರೆ ಆಧರಿತ ಲಿಝ್ ಆಂಡ್ ಡಿಕ್ ಸಿನಿಮಾ ಶೂಟಿಂಗ್‌ಗೆ ಹೋಗುತ್ತಿದ್ದಾಗ ಕ್ಯಾಲಿಫೋರ್ನಿಯಾ ಸಮೀಪದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಅಮೆರಿಕದ ಸೆಲೆಬ್ರಿಟಿ ಲಿಂಡ್ಸೆ ಲೋಹನ್ ಪೋರ್ಷ್ 911 ಕಾರನ್ನು ವೇಗವಾಗಿ ಚಾಲನೆ ಮಾಡುತ್ತ 18 ಚಕ್ರದ ಟ್ರಕ್ಕೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪೋರ್ಷ್ 911 ಕಾರಿನೊಳಗೆ ಲಿಂಡ್ಸೆ ಮತ್ತು ಆಕೆಯ ಪಿಎ ಇದ್ದರು. ಆಕೆಗೆ ಹೆಚ್ಚಿನ ಗಾಯವಾಗಿಲ್ಲ ಮತ್ತು ಆಕೆ ತುಸು ವಿಶ್ರಾಂತಿ ನಂತರ ಶೂಟಿಂಗಿಗೆ ಮರಳಿದ್ದಾರೆ ಎಂದು ವರದಿಗಳು ಹೇಳಿವೆ.

ಕೆಲವು ವರದಿಗಳ ಪ್ರಕಾರ ಲಿಂಡ್ಸೆ ಕುಡಿದು ಡ್ರೈವ್ ಮಾಡುತ್ತಿದ್ದರು. ಅಪಘಾತದ ನಂತರ ಟ್ರಕ್ ಚಾಲಕನಿಗೆ ಲಂಚ ನೀಡಿ, ಟ್ರಕ್ ಚಾಲಕನದ್ದೇ ತಪ್ಪು ಎಂಬಂತೆ ವರ್ತಿಸಿದ್ದಾಳೆ ಎಂದು ಹೇಳಲಾಗಿದೆ. ಲಿಂಡ್ಸೆ ಲೋಹನ್ ಈ ಹಿಂದೆ ಮಾಡಿದ ಹಲವು ಸರಣಿ ಅಪಘಾತಗಳಿಂದ ಆಕೆಯ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸಲಾಗಿತ್ತು. ನಂತರ ಮತ್ತೆ ಡ್ರೈವಿಂಗ್ ಲೈಸನ್ಸ್ ಪಡೆದಿದ್ದಳು.

"ಅಪಘಾತ ಸಂಭವಿಸಿದ ನಂತರ ಲಿಂಡ್ಸೆ ಲೋಹನ್ ಸಾಂತಾ ಮೊನಿಕಾ ಯುಸಿಎಲ್ಎ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಎರಡು ಗಂಟೆ ಕಳೆದು ಅವರು ಶೂಟಿಂಗಿಗೆ ಮರಳಿದ್ದಾರೆ. ಈ ಅಪಘಾತದಲ್ಲಿ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ" ಎಂದು ಲಿಂಡ್ಸೆ ಲೋಹನ್ ವಕ್ತಾರರು ಹೇಳಿದ್ದಾರೆ.

ಅಂದ ಹಾಗೆ ಇದು ಲಿಂಡ್ಸೆ ಮಾಡಿದ ಮೊದಲ ವಾಹನ ಅಪಘಾತವಲ್ಲ. ಕುಡಿದು ವಾಹನ ಚಾಲನೆ ಮಾಡಿರುವ ಪ್ರಕರಣಗಳಲ್ಲಿ ಲಿಂಡ್ಸೆ ಲೋಹನಿಗೆ ಹಲವು ಬಾರಿ ದಂಡ ವಿಧಿಸಲಾಗಿತ್ತು. ಅಷ್ಟೇ ಅಲ್ಲ ಆಕೆ ಇದೇ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದರು. ಹೆಚ್ಚಿನ ಪ್ರಕರಣಗಳಲ್ಲಿ ಡ್ರಿಂಕ್ ಆಂಡ್ ಡ್ರೈವ್ ಮಾಡುತ್ತಿರುವುದು ಸಾಬೀತಾದ ಹಿನ್ನಲೆಯಲ್ಲಿ ಆಕೆಯನ್ನು ಒತ್ತಾಯ ಪೂರ್ವಕವಾಗಿ ಆಕೆಯನ್ನು ಮದ್ಯವರ್ಜನ ಶಿಬಿರ(ಡಿ ಅಡಿಕ್ಷನ್ ಸೆಂಟರ್)ಕ್ಕೆ ದಾಖಲಿಸಲಾಗಿತ್ತು.

ಓದಿ: ಸೆಲೆಬ್ರೆಟಿ ಕಾರು

English summary
American celebrity Lindsay Lohan was involved in a car accident near California where she rammed her Porsche 911 into a truck and totaled the car. Reports say that the accident happened while she was driving her rented black Porsce 911 to the sets of Liz & Dick, the movie based on the life and times of late Hollywood star Elizabeth Taylor.
Story first published: Tuesday, June 12, 2012, 9:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark