ಏಪ್ರಿಲ್ ತಿಂಗಳಲ್ಲಿ ಮಹೀಂದ್ರ ಕಂಪನಿಗೆ ಭರ್ಜರಿ

Posted By:
ದೇಶದ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಏಪ್ರಿಲ್ ತಿಂಗಳ ಮಾರಾಟ 40,719 ಯುನಿಟಿಗೆ ತಲುಪಿದ್ದು, ಶೇಕಡ 27ರಷ್ಟು ಏರಿಕೆ ಕಂಡಿದೆ. ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ 32,090 ಯುನಿಟ್ ವಾಹನ ಮಾರಾಟ ಮಾಡಿತ್ತು. ಇದೇ ಸಮಯದಲ್ಲಿ ಕಂಪನಿಯ ದೇಶಿ ವಾಹನ ಮಾರಾಟ ಶೇಕಡ 29ರಷ್ಟು ಏರಿಕೆ ಕಂಡಿದೆ. ಆದರೆ ರಫ್ತು ವಹಿವಾಟು ಕೊಂಚ ಇಳಿಕೆ ಕಂಡಿದೆ.

ಹೊಸ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ಶೇಕಡ 27ರಷ್ಟು ವಾಹನ ಮಾರಾಟ ಹೆಚ್ಚಾಗಿರುವುದು ಕಂಪನಿಗೆ ಆನಂದವನ್ನು ತಂದಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಮುಖ್ಯ ಕಾರ್ಯನಿರ್ವಾಹಕರಾದ ಪವನ್ ಷಾ ಹೇಳಿದ್ದಾರೆ. "ಮುಂದಿನ ದಿನಗಳಲ್ಲಿ ಕಂಪನಿಯ ಮಾರಾಟ ಪ್ರಗತಿ ಮುಂದುವರೆಯುವ ಭರವಸೆ ನಮಗಿದೆ" ಎಂದು ಅವರು ಹೇಳಿದ್ದಾರೆ.

ದೇಶೀಯ ಮಾರಾಟದಲ್ಲಿ 2012ರ ಏಪ್ರಿಲ್ ತಿಂಗಳಲ್ಲಿ ಕಂಪನಿಯು 39,299 ಯುನಿಟ್ ವಾಹನ ಮಾರಾಟ ಮಾಡಿತ್ತು. ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಇದು 30,349 ಯುನಿಟ್ ಆಗಿತ್ತು. ಇದೇ ಸಮಯದಲ್ಲಿ ಕಂಪನಿಯು ಸುಮಾರು 1,420 ವಾಹನಗಳನ್ನು ರಫ್ತು ಮಾಡಿದ್ದು, ಕಳೆದ ವರ್ಷದ ಏಪ್ರಿಲ್ ತಿಂಗಳ 1,741 ಯುನಿಟ್ ರಫ್ತಿಗೆ ಹೋಲಿಸಿದರೆ ಗಮನಾರ್ಹವಾಗಿ ಇಳಿಕೆ ಕಂಡಿದೆ.

ಇದೇ ಸಮಯದಲ್ಲಿ ಪ್ರಯಾಣಿಕ ಕಾರುಗಳ ಮಾರಾಟ ಶೇಕಡ 33ರಷ್ಟು ಏರಿಕೆ ಕಂಡಿದೆ. ಅಂದರೆ ಎಕ್ಸ್‌ಯುವಿ 500, ಸ್ಕಾರ್ಪಿಯೊ, ಬೊಲೆರೊ ಮತ್ತು ವೆರಿಟೊ ಪ್ರಯಾಣಿಕ ಕಾರುಗಳ ಮಾರಾಟ 20,558 ಯುನಿಟಿಗೆ ತಲುಪಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಇದು 15,459 ಯುನಿಟ್ ಆಗಿತ್ತು.

ಜಿಯೊ ಮತ್ತು ಮ್ಯಾಕ್ಸಿಮೊ ವಾಣಿಜ್ಯ ವಾಹನ ಮಾರಾಟ 13,504 ಯುನಿಟಿಗೆ ತಲುಪಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಇದು 9,538 ಯುನಿಟ್ ಮಾರಾಟವಾಗಿತ್ತು. ವಾಣಿಜ್ಯ ವಾಹನ ವಿಭಾಗದಲ್ಲಿ ತ್ರಿಚಕ್ರ ವಾಹನ ಮಾರಾಟ 4,659 ಯುನಿಟಿಗೆ ತಲುಪಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಇದು 4,411 ಯುನಿಟ್ ಆಗಿತ್ತು.

English summary
Mahindra and Mahindra, India's leading suv manufacturer posted an enviable 27% increase in April sales after selling 40,719 units. Mahindra had previously sold 32,090 vehicles in April 2011. Mahindra's domestic sales increased by 29% while exports saw a decline.
Story first published: Wednesday, May 2, 2012, 13:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark