ಆಲ್ಟೊ 800 vs ಇಯಾನ್; ಯಾವುದು ಫೇವರಿಟ್?

Posted By:

ದಶಕಗಳಿಂದಲೂ ದೇಶದ ಆಟೋಮೊಬೈಲ್ ರಂಗದಲ್ಲಿ ಮಾರುತಿ ಸುಜುಕಿ ತನ್ನ ಛಾಪು ಮೂಡಿಸುತ್ತಲೇ ಬಂದಿದೆ. ಉತ್ತಮ ನಿರ್ವಹಣೆ ಹಾಗೂ ಎಂಜಿನ್ ದಕ್ಷತೆ ಮಾರುತಿಯ ಪ್ರಮುಖ ಪ್ಲಸ್ ಪಾಯಿಂಟ್ ಆಗಿದೆ.

ಈ ನಡುವೆ ಆಲ್ಟೊ 800 ಪರಿಷ್ಕೃತ ಆವೃತ್ತಿ ಗ್ರಾಹಕರನ್ನು ಹರಸಿಕೊಂಡು ಬಂದಿತ್ತು. ಆದರೆ ಎಂಟ್ರಿ ಲೆವೆಲ್ ಸಣ್ಣ ಕಾರಿಗೆ ಪೈಪೋಟಿ ನೀಡಲು ಮುಂದಾಗಿದ ಕೊರಿಯಾ ಮೂಲದ ಹ್ಯುಂಡೈ ಕಂಪನಿ ಇಯಾನ್ ಕಾರನ್ನು ದೇಶಕ್ಕೆ ಪರಿಚಯಿಸಿತ್ತು.

ಆರಂಭದಲ್ಲಿ ಮಾರುತಿ ಬ್ರಾಂಡ್‌ಗೆ ಪೈಪೋಟಿ ನೀಡಲು ಇಯಾನ್‌ನಿಂದ ಸಾಧ್ಯವಿಲ್ಲ ಎಂದು ಅಂದುಕೊಂಡವರೆ ಜಾಸ್ತಿ. ಆದರೆ ತನ್ನದೇ ಆದ ಅತ್ಯಾಧುನಿಕ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದ ಇಯಾನ್ ದೇಶದ ರಸ್ತೆಗಳಲ್ಲಿ ಮಾರುತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಎದೆ ತಟ್ಟಿ ನಿಂತಿದೆ.

ಅಂದ ಹಾಗೆ ಮಾರುತಿ 800 ಹಾಗೂ ಹ್ಯುಂಡೈ ಇಯಾನ್ ನಡುವಣ ಭಿನ್ನತೆಯಾದರೂ ಏನು ಎಂಬುದನ್ನು ತಿಳಿದುಕೊಳ್ಳಲು ಗ್ರಾಹಕರು ಖಾತರದಿಂದಿದ್ದಾರೆ. ಹಲವು ಸಾಮ್ಯತೆಗಳ ನಡುವೆ ಯಾವುದು ಶ್ರೇಷ್ಠ ಆಯ್ಕೆ ಎಂಬುದನ್ನು ಅರಿಯಲು ಗ್ರಾಹಕರು ಉತ್ಸುಕರಾಗಿದ್ದಾರೆ.

ಇಂದಿನ ಈ ಲೇಖನದಲ್ಲಿ ಮಾರುತಿ ಹಾಗೂ ಹ್ಯುಂಡೈ ನಡುವಣ ನಿರ್ವಹಣೆ, ಸ್ಥಳಾವಕಾಶ, ಮೈಲೇಜ್, ಸೌಲಭ್ಯ ಹಾಗೂ ದರಗಳ ಆಧಾರದಲ್ಲಿ ಸಾಮ್ಯತೆ ಹಾಗೂ ಭಿನ್ನತೆಗಳ ಬಗ್ಗೆ ಚರ್ಚಿಸಲಿದ್ದೇವೆ.

ವಿನ್ಯಾಸ

ವಿನ್ಯಾಸ

ಫ್ಲೂಯಿಡಿಕ್ ವಿನ್ಯಾಸ ಹೊಂದಿರುವ ಹ್ಯುಂಡೈ ಇಂಟಿರಿಯರ್ ಸಹಿತ ಎಕ್ಸ್‌ಟಿರಿಯರ್‌ನಲ್ಲೂ ಪ್ರೀಮಿಯಂ ಲುಕ್ ಹೊಂದಿದೆ. ಸ್ಪೋರ್ಟಿ ವಿನ್ಯಾಸದ ಡ್ಯಾಷ್ ಬೋರ್ಡ್ ಕಾರಿನ ಆಕರ್ಷತೆಗೆ ಕಾರಣವಾಗಿದೆ. ಒಟ್ಟಾರೆಯಾಗಿ ಇಂಟಿರಿಯರ್ ಫಿನಿಶ್ ಆಲ್ಟೊಗಿಂತ ಉತ್ತಮವಾಗಿದೆ ಎಂದು ಹೇಳಬಹುದು. ಆದರೆ ಮೆಕಾನಿಕಲ್, ನಿರ್ವಹಣೆ ವಿಷಯದಲ್ಲಿ ಆಲ್ಟೊ ಒಂದು ಕೈ ಮೇಲು.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಆಲ್ಟೊ 800 ಪರಿಷ್ಕೃತ ಎಫ್8ಡಿ ಎಂಜಿನ್ ಹೆಚ್ಚು ಟಾರ್ಕ್ ಪವರ್ ನೀಡುತ್ತದೆ. ಅಂದರೆ ಆಲ್ಟೊ ಟಾರ್ಕ್ ಪವರ್ 3500 ಆವರ್ತನಕ್ಕೆ 69 ಎನ್‌ಎಂ ಆಗಿದೆ. ಇದು 6 ಸಾವಿರ ಆವರ್ತನಕ್ಕೆ 48 ಪಿಎಸ್ ಪವರ್ ನೀಡುತ್ತದೆ.

ಇಯಾನ್ 814 ಸಿಸಿಯ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 5500 ಆವರ್ತನಕ್ಕೆ 56 ಪಿಎಸ್ ಪವರ್ ಮತ್ತು 4 ಸಾವಿರ ಆವರ್ತನಕ್ಕೆ 74.56 ಎನ್‌ಎಂ ಟಾರ್ಕ್ ಪವರ್ ನೀಡುತ್ತದೆ.

ಮೈಲೇಜ್ ಎಷ್ಟು?

ಮೈಲೇಜ್ ಎಷ್ಟು?

ಇಯಾನ್‌ಗೆ ಹೋಲಿಸಿದರೆ ಆಲ್ಟೊ ಉತ್ತಮ ಎಂಜಿನ್ ದಕ್ಷತೆ ಹೊಂದಿದೆ. ದಶಕದಿಂದಲೂ ತಮ್ಮ ಬ್ರಾಂಡ್ ಹೆಸರು ಕಾಪಾಡಿಕೊಂಡು ಬಂದಿರುವ ದೇಶದ ಅತಿ ದೊಡ್ಡ ಕಾರು ಕಂಪನಿಯಾದ ಮಾರುತಿ ಸುಜುಕಿಯ ಆಲ್ಟೊ 800 ಸಿಟಿ ಡ್ರೈವಿಂಗ್‌ನಲ್ಲಿ ಪ್ರತಿ ಲೀಟರ್‌ಗೆ 12.2 ಕೀ. ಮೀ ಮೈಲೇಜ್ ನೀಡಲಿದೆ. ಮತ್ತೊಂದೆಡೆ ಇಯಾನ್ ಸ್ವಲ್ಪ ಹಿನ್ನಡೆ ಅನುಭವಿಸಿದೆ.

ಸ್ಥಳಾವಕಾಶ (ಚಿತ್ರದಲ್ಲಿ ಹ್ಯುಂಡೈ ಇಂಟಿರಿಯರ್)

ಸ್ಥಳಾವಕಾಶ (ಚಿತ್ರದಲ್ಲಿ ಹ್ಯುಂಡೈ ಇಂಟಿರಿಯರ್)

ಕಾರಿನ ಒಳಗಡೆಯ ಸ್ಥಳವಕಾಶ ಪರಿಗಣಿಸಿದರೆ ಇಯಾನ್ ತುಂಬಾನೇ ಹೆಚ್ಚು ಸ್ಥಳಾವಕಾಶ ಹೊಂದಿದೆ. ಇದು ಆಲ್ಟೊಕ್ಕಿಂತ 10 mm ಉದ್ದ, 60 mm ಅಗಲ ಹಾಗೂ 25 mm ಎತ್ತರ ಹೊಂದಿದೆ. ಅಂದರೆ ಆಲ್ಟೊಗಿಂತ ಹೆಚ್ಚು ಹೆಡ್ ರೂಂ ಹಾಗೂ ಶೋಲ್ಡರ್ ರೂಂ ಹೊಂದಿದೆ.

ವೀಲ್ ಬೇಸ್ (ಚಿತ್ರದಲ್ಲಿ ಆಲ್ಟೊ ಇಂಟಿರಿಯರ್)

ವೀಲ್ ಬೇಸ್ (ಚಿತ್ರದಲ್ಲಿ ಆಲ್ಟೊ ಇಂಟಿರಿಯರ್)

ಹಾಗೆಯೇ ಇಯಾನ್ ವೀಲ್ ಬೇಸ್ 2380 mm ಆಗಿದ್ದು, ಆಲ್ಟೊಕ್ಕಿಂತ ಸ್ವಲ್ಪ (2360mm) ಹೆಚ್ಚಾಗಿದೆ. ಇದರಿಂದ ಹೆಚ್ಚಿನ ಲೆಗ್ ರೂಂ ಕೂಡಾ ಸಿಗಲಿದೆ. ಇಯಾನ್ ಬೂಟ್ ಸ್ಪೇಸ್ 215 ಲೀಟರ್ ಆಗಿದ್ದು ಇದು ಆಲ್ಟೊಗಿಂತಲೂ (177 ಲೀಟರ್) ಹೆಚ್ಚು ವಿಶಾಲವಾದ ಸ್ಥಳಾವಕಾಶ ಹೊಂದಿದೆ.

ಗ್ರೌಂಡ್ ಕ್ಲಿಯರನ್ಸ್

ಗ್ರೌಂಡ್ ಕ್ಲಿಯರನ್ಸ್

ಆಲ್ಟೊಗೆ ಹೋಲಿಸಿದರೆ ಇಯಾನ್ ಗ್ರೌಂಡ್ ಕ್ಲಿಯರನ್ಸ್ 10 mm ಉತ್ತಮವಾಗಿದೆ. ಆಲ್ಟೊ 160 mm ಹೊಂದಿದ್ದರೆ ಇಯಾನ್ ಗ್ರೌಂಡ್ ಕ್ಲಿಯರನ್ಸ್ 170 mm ಆಗಿದೆ. ಅಂದರೆ ಆಫ್ ರೋಡ್ ಚಾಲನೆಯಲ್ಲಿ ಇಯಾನ್ ಸ್ವಲ್ಪ ಪರಿಣಾಮಕಾರಿ ಎನಿಸಲಿದೆ.

ಫೀಚರ್ಸ್

ಫೀಚರ್ಸ್

ಹ್ಯುಂಡೈ ಇಯಾನ್ ಫ್ರಂಟ್ ಪವರ್ ವಿಂಡೋ, ಸೆಂಟ್ರಲ್ ಲಾಕಿಂಗ್, ಬಾಟಲ್ ಹೋಲ್ಡರ್, ಫ್ರಂಟ್ ಡೋರ್ ಆರ್ಮ್ ರೆಸ್ಟ್ ಹಾಗೂ ರಿಯರ್ ಇಂಟೆಗ್ರೇಟಡ್ ಸ್ಪಾಯ್ಲರ್‌ಗಳಂತ ಫೀಚರ್‌ಗಳನ್ನು ಹೊಂದಿದೆ. ಮತ್ತೊಂದೆಡೆ ಸ್ಟಾಂಡರ್ಡ್ ಲುಕ್ ಹೊಂದಿರುವ ಆಲ್ಟೊದಲ್ಲಿ ಫ್ರಂಟ್ ಪವರ್ ವಿಂಡೋ ಮಾತ್ರ ಇದೆ.

ದರ ಮಾಹಿತಿ

ದರ ಮಾಹಿತಿ

ಹ್ಯುಂಡೈ ಇಯಾನ್ ದರ (ಬೆಂಗಳೂರು ಎಕ್ಸ್ ಶೋ ರೂಂ)

ಇಯಾನ್ ಡಿ ಲೈಟ್- 2.81 ಲಕ್ಷ ರು.

ಇಯಾನ್ ಡಿ ಲೈಟ್ ಮೆಟಾಲಿಕ್- 2.85 ಲಕ್ಷ ರು.

ಇಯಾನ್ ಡಿ ಲೈಟ್ ಪ್ಲಸ್- 3.11 ಲಕ್ಷ ರು.

ಇಯಾನ್ ಡಿ ಲೈಟ್ ಪ್ಲಸ್ ಮೆಟಾಲಿಕ್- 3.14 ಲಕ್ಷ ರು.

ಇಯಾನ್ ಇರಾ ಪ್ಲಸ್- 3.25 ಲಕ್ಷ ರು.

ಇಯಾನ್ ಇರಾ ಪ್ಲಸ್ ಮೆಟಾಲಿಕ್- 3.29 ಲಕ್ಷ ರು.

ಇಯಾನ್ ಡಿಲೈಟ್ ಪ್ಲಸ್-3.39 ಲಕ್ಷ ರು.

ಇಯಾನ್ ಡಿಲೈಟ್ ಪ್ಲಸ್ ಮೆಟಾಲಿಕ್- 3.43 ಲಕ್ಷ ರು.

ಇಯಾನ್ ಮ್ಯಾಗ್ನಾ ಪ್ಲಸ್- 3.56 ಲಕ್ಷ ರು.

ಇಯಾನ್ ಮ್ಯಾಗ್ನಾ ಪ್ಲಸ್ ಮೆಟಾಲಿಕ್- 3.58 ಲಕ್ಷ ರು.

ಇಯಾನ್ ಸ್ಪೋರ್ಟ್ಸ್- 3.85 ಲಕ್ಷ ರು.

ಇಯಾನ್ ಸ್ಪೋರ್ಟ್ಸ್ ಮೆಟಾಲಿಕ್- 3.89 ಲಕ್ಷ ರು.

ದರ ಮಾಹಿತಿ

ದರ ಮಾಹಿತಿ

ಮಾರುತಿ ಆಲ್ಟೊ 800 (ಬೆಂಗಳೂರು ಎಕ್ಸ್ ಶೋ ರೂಂ)

ಸ್ಟಾಂಡರ್ಡ್- 2.52 ಲಕ್ಷ ರು.

ಸ್ಟಾಂಡರ್ಡ್ ಮೆಟಾಲಿಕ್- 2.55 ಲಕ್ಷ ರು.

ಎಲ್ ಎಕ್ಸ್- 2.85 ಲಕ್ಷ ರು.

ಎಲ್ ಎಕ್ಸ್ ಮೆಟಾಲಿಕ್- 2.88 ಲಕ್ಷ ರು.

ಎಲ್ ಎಕ್ಸ್ ಐ- 3.08 ಲಕ್ಷ ರು.

ಎಲ್ ಎಕ್ಸ್ ಐ ಮೆಟಾಲಿಕ್- 3.11 ಲಕ್ಷ ರು.

ಎಲ್ ಎಕ್ಸ್ ಐ ಮೆಟಾಲಿಕ್- 3.23 ಲಕ್ಷ ರು.

ಎಲ್ ಎಕ್ಸ್ ಐ ಮೆಟಾಲಿಕ್ ಏರ್ ಬ್ಯಾಗ್- 3.23 ಲಕ್ಷ ರು.

ಅಂತಿಮ ತೀರ್ಪು

ಅಂತಿಮ ತೀರ್ಪು

ಆಲ್ಟೊ ಕಾರಿನ ವಿನ್ಯಾಸ ಸರಳವಾಗಿದೆ. ಹಾಗೆಯೇ ಎಂಜಿನ್, ಮೈಲೇಜ್‌ಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮತ್ತೊಂದೆಡೆ ಆಕರ್ಷಕ ಫೀಚರ್ ಹೊಂದಿರುವ ಇಯಾನ್ ವಿಶಾಲವಾದ ಹಾಗೂ ದೊಡ್ಡದಾದ ಸೀಟುಗಳನ್ನು ಹೊಂದಿದೆ.

ಒಟ್ಟಿನಲ್ಲಿ ಸೌಂದರ್ಯ, ಫೀಚರ್ ವಿಷಯದಲ್ಲಿ ಇಯಾನ್ ಉತ್ತಮವಾದರೂ ಮೆಕಾನಿಕ್ಸ್ ವಿಷಯದಲ್ಲಿ ಆಲ್ಟೊ ತನ್ನ ಬ್ರಾಂಡ್ ನೇಮ್ ಉಳಿಸಿಕೊಂಡಿದೆ. ಅಂದರೆ ನಿಮ್ಮ ಬಜೆಟ್‌ಗೆ ಅನುಸಾರವಾಗಿ ಕಾರಿನ ಆಯ್ಕೆ ಮಾಡಬಹುದು.

ಗುಣಮಟ್ಟ, ಹ್ಯಾಂಡ್ಲಿಂಗ್ ಹಾಗೂ ಸರ್ವೀಸ್ ಜಾಲದ ವಿಷಯದಲ್ಲಿ ಇಯಾನ್ ಕಾರನ್ನು ಆಲ್ಟೊ ಹಿಂದಿಕ್ಕಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಹೆಚ್ಚಿನ ಫೀಚರ್ ಹಾಗೂ ಕಡಿಮೆ ಮೈಲೇಜ್ ಓಕೆಯಾದರೆ ಫ್ಲೂಡಿಕ್ ವಿನ್ಯಾಸದ ಹ್ಯುಂಡೈ ಆಯ್ಕೆ ಉತ್ತಮ.

English summary
The battle of the small cars has begun. Hyundai and Maruti Suzuki who have always had at least battle between them have pitted their latest entry level cars against each other. The Hyundai Eon is now being compared with the recently launched Maruti Suzuki Alto 800.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark