ಅಂದಹಾಗೆ, ಮಾರುತಿ ಎರ್ಟಿಗಾ ಎಷ್ಟು ಬುಕ್ಕಿಂಗ್ ಆಗಿದೆ?

Posted By:
ಏಪ್ರಿಲ್ ಹನ್ನೆರಡರಂದು ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ರಸ್ತೆಗಿಳಿದಿತ್ತು. ಬುಕ್ಕಿಂಗ್ ಆರಂಭವಾದ ಒಂದು ವಾರದಲ್ಲಿ ಸುಮಾರು 15 ಸಾವಿರ ಎರ್ಟಿಗಾ ಬುಕ್ಕಿಂಗ್ ಆಗಿದೆ. ದೇಶದಲ್ಲಿ ಅತ್ಯಧಿಕ ಬೇಡಿಕೆಯಿದ್ದರೂ, ಬುಕ್ಕಿಂಗ್ ಪ್ರಕ್ರಿಯೆ ಜೋರಿದ್ದರೂ ಕಂಪನಿಯು ಇತರ ರಾಷ್ಟ್ರಗಳಿಗೆ ಈ ಕಾರನ್ನು ಪರಿಚಯಿಸಲು ಯೋಜಿಸುತ್ತಿದೆ. (ಈ ಕಾರಿನ ವಿಮರ್ಶೆ ಓದಿ)

ಕಂಪನಿಯು ಶೀಘ್ರದಲ್ಲಿ ಇಂಡೋನೇಷ್ಯಾಕ್ಕೆ ನೂತನ ಎರ್ಟಿಗಾ ಕಾರನ್ನು ಪರಿಚಯಿಸಲು ಯೋಜಿಸಿದೆ. ಕಂಪನಿಯು ಇಂಡೋನೇಷ್ಯಾದಲ್ಲಿ ಸುಜುಕಿ ಇಂಡೊಮೊಬೈಲ್ ಮೋಟರ್ ಮೂಲಕ ಮಾರಾಟ ಮಾಡಲಿದೆ. ಇಂಡೋನೇಷ್ಯದಲ್ಲಿ ಎಂಪಿವಿ ಸೆಗ್ಮೆಂಟ್ ಮಾರುಕಟ್ಟೆ ಪಾಲು ಶೇಕಡ 60ಕ್ಕೆ ಹತ್ತಿರದಲ್ಲಿದೆ. ಹೀಗಾಗಿ ಅಲ್ಲಿ ಎರ್ಟಿಗಾ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಕಾರನ್ನು ಇತರ ಏಷ್ಯಾ ಮಾರುಕಟ್ಟೆಗಳಿಗೂ ಪರಿಚಯಿಸಲು ಯೋಜಿಸಿದೆ. ಯುರೋಪ್ ಮತ್ತು ಆಸ್ಟ್ರೇಲಿಯಾದಂತಹ ಪ್ರಮುಖ ವಾಹನ ಮಾರುಕಟ್ಟೆಗೂ ಎರ್ಟಿಗಾ ಲಗ್ಗೆಯಿಡುವ ನಿರೀಕ್ಷೆಯಿದೆ.

ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಎರ್ಟಿಗಾ ಆರಂಭಿಕ ದರ 6.12 ಲಕ್ಷ ರುಪಾಯಿ ಇದೆ. ಪೆಟ್ರೋಲ್ ಆವೃತ್ತಿಯಲ್ಲಿ ಎರ್ಟಿಗಾ ಎಲ್‌ಎಕ್ಸ್ಐ ದರ 6,12,719 ರು, ಎರ್ಟಿಗಾ ವಿಎಕ್ಸ್ಐ ದರ 6,84,666 ರು, ಎರ್ಟಿಗಾ ಝಡ್ಎಕ್ಸ್ಐ ದರ 7,55,602 ರು. ಇದೆ.

ಎರ್ಟಿಗಾ ಡೀಸೆಲ್ ಆವೃತ್ತಿ ದರ: ಎರ್ಟಿಗಾ ಎಲ್‌ಡಿಐ ದರ 7,55,603 ರುಪಾಯಿ, ಎರ್ಟಿಗಾ ವಿಡಿಐ ದರ 8,16,403 ರು. ಮತ್ತು ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಝಡ್‌ಡಿಐ ದರ 8,72,140 ರು. ಇದೆ.

English summary
Maruti Suzuki Ertiga MPV bookings crossed the 15,000 units within a week from the day of its launch. Ertiga Launched April 12. Ertiga Bangalore Ex showroom Starting Price 6.12 lakh.
Story first published: Wednesday, April 25, 2012, 15:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark