ವದಂತಿ: ಮಾರುತಿ ಆಲ್ಟೊ 800 ಸೆ 15ರಂದು ಆಗಮನ

ನವದೆಹಲಿ, ಸೆ 11: ಮಾರುತಿ 800 ಬದಲಿ ಆವೃತ್ತಿ ನಿರೀಕ್ಷೆಯಲ್ಲಿರುವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಮಾರುತಿ ಸುಜುಕಿ ಕಂಪನಿಯು ನೂತನ ಆಲ್ಟೊ 800 ಕಾರನ್ನು ಪರಿಚಯಿಸಲು ಮಹೂರ್ತ ನಿಗದಿಪಡಿದೆಯೆಂದು ವದಂತಿಗಳು ದಟ್ಟವಾಗಿವೆ.

ವರದಿಗಳ ಪ್ರಕಾರ ನೂತನ ಆಲ್ಟೊ 800 ಕಾರು ಸೆಪ್ಟೆಂಬರ್ 15ರಂದು ದೇಶದ ರಸ್ತೆಗೆ ಆಗಮಿಸಲಿದೆಯಂತೆ. ಇನ್ನೂ ನಾಲ್ಕೇ ದಿನ ಬಾಕಿಯಿದ್ದರೂ ಕಂಪನಿ ಅಧಿಕೃತವಾಗಿ ಯಾಕೆ ಪ್ರಕಟಿಸಿಲ್ಲವೆಂಬ ಸಂಶಯಕ್ಕೆ ಈ ವದಂತಿಗಳು ಉತ್ತರಿಸಿಲ್ಲ.

ಮಾನೆಸರ್ ಘಟಕದಲ್ಲಿ ಜುಲೈ ತಿಂಗಳಲ್ಲಿ ನೌಕರರ ಗಲಭೆಯಿಂದಾಗಿ ಕಂಪನಿಯ ಕಾರು ಉತ್ಪಾದನೆ ಸ್ಥಗಿತಗೊಂಡಿತ್ತು. ಹಬ್ಬದ ವೇಳೆಗೆ ಮಾರುತಿ 800 ಬದಲಿ ಆವೃತ್ತಿ ಪರಿಚಯಿಸುವುದು ಕಷ್ಟವೆಂದು ಕಂಪನಿ ಪ್ರಕಟಿಸಿತ್ತು.

ಇತ್ತೀಚೆಗೆ ಕಂಪನಿಯು ಮಾನೆಸರ್ ಘಟಕದಲ್ಲಿ ಉತ್ಪಾದನೆ ಪುನಾರಂಭಿಸಿದೆ. ಹಬ್ಬದ ವೇಳೆಗೆ ಕುಸಿದಿರುವ ಕಾರು ಮಾರಾಟವನ್ನು ಹೆಚ್ಚಿಸಲು ಮಾರುತಿ 800 ಬದಲಿ ಆವೃತ್ತಿಯನ್ನು ಪರಿಚಯಿಸುವುದೇ ಉಳಿದಿರುವ ದಾರಿಯೆಂದು ಕಂಪನಿ ಅರಿತಿರುವಂತಿದೆ.

ಒಂದು ಮೂಲದ ಪ್ರಕಾರ ಮಾರುತಿ ಸುಜುಕಿ ಆಲ್ಟೊ 800 ಬದಲಿ ಆವೃತ್ತಿ ದರ 2 ಲಕ್ಷ ರುಪಾಯಿಗಿಂತ ಕಡಿಮೆ ಇರಲಿದೆಯಂತೆ. ಇಷ್ಟು ಕಡಿಮೆ ದರಕ್ಕೆ ನೂತನ ಆಲ್ಟೊ 800 ಕಾರು ದೊರಕಿದರೆ ಹ್ಯುಂಡೈ ಇಯಾನ್ ಮತ್ತು ಟಾಟಾ ನ್ಯಾನೊ ಕಾರುಗಳಿಗೆ ಪ್ರಬಲ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.

Most Read Articles

Kannada
English summary
This festive season is going to be more colorful for car buyers. It is speculated that the much awaited entry level small car the all-new Alto 800 from Maruti Suzuki to hit the roads on 15th of September, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X