20 ಲಕ್ಷ ಮಾರಾಟಗೊಂಡ ಮಾರುತಿ ಸುಜುಕಿ ಆಲ್ಟೊ

Posted By:
ಮಾರುತಿ ಸುಜುಕಿ ಆಲ್ಟೊ ಮಾರಾಟ 20 ಲಕ್ಷ ಗಡಿ ದಾಟಿದೆ. ಮಾರುತಿ ಸುಜುಕಿ ಆಲ್ಟೊ ಜಾಗತಿಕ ಮಾರುಕಟ್ಟೆಗೆ ಆಗಮಿಸಿ 11 ವರ್ಷ, 9 ತಿಂಗಳು ಕಳೆದಿದೆ. ಕಂಪನಿಯು ದೇಶದ ರಸ್ತೆಗೆ ಆಗಮಿಸಿ 7 ವರ್ಷ ಕಳೆದಿದೆ. ಈ ಕಾರು 2000ನೇ ಇಸವಿಯಲ್ಲಿ ರಸ್ತೆಗಿಳಿದು 8 ವರ್ಷ, ಮೂರು ತಿಂಗಳು ಕಳೆದಾಗ ಸುಮಾರು 10 ಲಕ್ಷ ಯುನಿಟ್ ಮಾರಾಟವಾಗಿತ್ತು. ನಂತರದ ಮೂರು ವರ್ಷ ಮೂರು ತಿಂಗಳಲ್ಲಿ ಮತ್ತೆ 10 ಲಕ್ಷ ಯುನಿಟ್ ಮಾರಾಟ ಮಾಡಿ ಕಂಪನಿಯು ದಾಖಲೆ ನಿರ್ಮಿಸಿದೆ.

"ಅತ್ಯುತ್ತಮ ಇಂಧನ ದಕ್ಷತೆಯ, ಕಾಂಪ್ಯಾಕ್ಟ್ ವಿನ್ಯಾಸದ, ಕಡಿಮೆ ರನ್ನಿಂಗ್ ವೆಚ್ಚದ ಮತ್ತು ಮೊದಲ ಕಾರು ಖರೀದಿದಾರರಿಗೆ ಸೂಕ್ತವಾದ ಆಲ್ಟೊ 20 ಲಕ್ಷ ಮಾರಾಟವಾಗಿ ಹೊಸ ಮೈಲುಗಲ್ಲು ಸ್ತಾಪಿಸಿರುವುದು ಹರ್ಷ ತಂದಿದೆ" ಎಂದು ಮಾರುತಿ ಸುಜುಕಿ ಸಿಇಒ ಮಾಯಂಕ್ ಪರೇಕ್ ಹೇಳಿದ್ದಾರೆ.

2011-12ನೇ ಆರ್ಥಿಕ ವರ್ಷದಲ್ಲಿ ಆಲ್ಟೊ ಮಾರಾಟ 3 ಲಕ್ಷ ಯುನಿಟ್ ಆಗಿತ್ತು. ದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬೇರೆ ಯಾವುದೇ ಕಾರು ಮಾರಾಟವಾಗಿಲ್ಲ. ಸುಮಾರು 25 ಗಂಟೆಯ ಎಂಡೋರ್ಸ್ ಟೆಸ್ಟಿನಲ್ಲಿ ಮಾರುತಿ ಸುಜುಕಿ ಆಲ್ಟೊ ಸುಮಾರು 13 ರಾಷ್ಟ್ರೀಯ ದಾಖಲೆ ನಿರ್ಮಿಸಿದೆ.

ಗ್ರಾಹಕರ ಅತ್ಯುತ್ತಮ ಬೇಡಿಕೆಯಿಂದಾಗಿ ಕಂಪನಿಯು 2010ರಲ್ಲಿ ಕೆ ಸೀರಿಸ್ ಎಂಜಿನಿನ ಆಲ್ಟೊ ಪರಿಚಯಿಸಿತ್ತು. ಅದೇ ಸಮಯದಲ್ಲಿ ಕಂಪನಿಯು ಸಿಎನ್ ಜಿ ಎಂಜಿನಿನ ಆಲ್ಟೊ ಪರಿಚಯಿಸಿತ್ತು. ಮಾರುತಿ ಸುಜುಕಿ ಆಲ್ಟೊ ಮೈಲೇಜ್ ಪ್ರತಿಲೀಟರಿಗೆ 19.7 ಕಿ.ಮೀ. ಇದೆ. ಕೆ ಸೀರಿಸ್ ಎಂಜಿನ್ ಆಲ್ಟೊ ಮೈಲೇಜ್ ಸುಮಾರು 20.2 ಕಿ.ಮೀ. ಇದೆ.

English summary
Riding high on its popularity as Maruti Suzuki's highest selling model and India's favorite car Alto, crossed the 20 lakh cumulative sales mark recently, just 11 years and 9 months after its launch. Maruti Suzuki Alto, has been the highest selling car, in the domestic market for the past 7 years.
Story first published: Saturday, June 16, 2012, 10:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark