ಮಾರುತಿ ಸುಜುಕಿಯಿಂದ 30 ಕಿ.ಮೀ. ಮೈಲೇಜ್ ಕಾರು!

Posted By:

ಟಾಟಾ ಮೋಟರ್ಸ್ ಕಂಪನಿಯು ಜಗತ್ತಿನ ಅಗ್ಗದ ಸಣ್ಣಕಾರು ನ್ಯಾನೊವನ್ನು ಅತ್ಯಧಿಕ ಮೈಲೇಜ್ ಜೊತೆ ಹೊರತರುವುದಾಗಿ ಹೇಳಿದಾಗ ಎಲ್ಲರೂ ಹುಬ್ಬೇರಿಸಿದ್ದರು. ಕಂಪನಿಯು ಪ್ರತಿಲೀಟರಿಗೆ 25 ಕಿ.ಮೀ. ಆಸುಪಾಸಿನಲ್ಲಿ ಮೈಲೇಜ್ ನೀಡುವ ನ್ಯಾನೊ ಕಾರನ್ನು ಪರಿಚಯಿಸಿತ್ತು. ಇದೀಗ ದೇಶದ ಅಗ್ರ ಕಾರು ಕಂಪನಿ ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಇದಕ್ಕೂ ಹೆಚ್ಚು ಮೈಲೇಜ್ ನೀಡುವ ಎಂಜಿನ್ ಹೊರಬರಲಿದೆಯಂತೆ!

ಮಾರುತಿ ಸುಜುಕಿಯು 800ಸಿಸಿಯ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿರುವುದಾಗಿ ವರದಿಗಳು ಹೇಳಿವೆ. ಇದು 40 ಅಶ್ವಶಕ್ತಿ ನೀಡುವ ಎಂಜಿನಾಗಿದ್ದು, ಲೀಟರಿಗೆ ಸುಮಾರು 25ರಿಂದ 30 ಕಿ.ಮೀ.ವರೆಗೆ ಮೈಲೇಜ್ ನೀಡುವ ನಿರೀಕ್ಷೆಯಿದೆ. ಕಂಪನಿಯು ಈ ಪ್ರಾಜೆಕ್ಟಿಕೆ ಇ2 ಎಂದು ಹೆಸರಿಟ್ಟಿದೆ.

ಮಾರುತಿ ಸುಜುಕಿ ಇ2 ಎಂಜಿನ್ ಅಭಿವೃದ್ಧಿ ಕೆಲಸವು ಆರಂಭಿಕ ಹಂತದಲ್ಲಿದೆಯಷ್ಟೇ. ಮಾರುತಿ ಸುಜುಕಿಯ ಪೋಷಕ ಕಂಪನಿ ಸುಜುಕಿ ಮೋಟರ್ಸ್ ನ ಜಪಾನಿನ ಘಟಕದಲ್ಲಿ ನೂತನ ಎಂಜಿನನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

"ನೂತನ ಎಂಜಿನ್ ಅಭಿವೃದ್ಧಿ ಕಾರ್ಯವು ತುಂಬಾ ಆರಂಭಿಕ ಹಂತದಲ್ಲಿದೆ. ಇದನ್ನು ಹೊರತರಲು ಸಾಕಷ್ಟು ಪರಿಶ್ರಮ ಪಡಲಾಗುತ್ತಿದೆ. ಬಯಸಿದಷ್ಟು ಮಟ್ಟದ ಕ್ಷಮತೆ, ಕಾರ್ಯನಿರ್ವಹಣೆ, ಇಂಧನ ದಕ್ಷತೆ, ಶಕ್ತಿ ಸಾಮರ್ಥ್ಯದ ಎಂಜಿನ್ ಅಭಿವೃದ್ಧಿಪಡಿಸಲು ಹಲವು ವರ್ಷಗಳ ಅಗತ್ಯವಿದೆ" ಎಂದು ಮಾರುತಿ ಸುಜುಕಿ ನಿಕಟಮೂಲಗಳು ತಿಳಿಸಿವೆ.

"ಸಣ್ಣ ಡೀಸೆಲ್ ಎಂಜಿನ್ ನೋಡುವುದು ನನ್ನ ಮಹತ್ವದ ಕನಸು" ಎಂದು ಹಿಂದೊಮ್ಮೆ ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ನಕನಿಶಿ ಹೇಳಿದ್ದಾರೆ. "ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ವಿವಿಧ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದೆ. ಎಲೆಕ್ಟ್ರಿಕ್ ವಾಹನಗಳು, ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಹಲವು ಪ್ರಾಜೆಕ್ಟ್ ನಡೆಸಲಾಗುತ್ತಿದೆ" ಎಂದು ಅವರು ಹೇಳಿದ್ದರು.

ಸಣ್ಣ ಸಾಮರ್ಥ್ಯದ ಡೀಸೆಲ್ ಎಂಜಿನುಗಳು ಭವಿಷ್ಯದಲ್ಲಿ ಮಾರುತಿ ಸುಜುಕಿಯ ಕಾರುಗಳಲ್ಲಿರುವ ನಿರೀಕ್ಷೆಯಿದೆ. ನೂತನ ಆಲ್ಟೊ 800, ಮಾರುತಿ ಎ ಸ್ಟಾರ್ ಸೇರಿದಂತೆ ಸಣ್ಣಕಾರುಗಳು ಈ ಡೀಸೆಲ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಪ್ರತಿಲೀಟರಿಗೆ 30 ಕಿ.ಮೀ. ಮೈಲೇಜ್ ನೀಡುವ ಎಂಜಿನ್ 2015ಕ್ಕೆ ಆಗಮಿಸಲಿದೆ ಎಂದು ಮೂಲಗಳ ತಿಳಿಸಿವೆ.

English summary
Maruti Suzuki is reportedly working on an 800 cc diesel engine producing 40 hp that will deliver an astonishing mileage of 25-30 kmpl. The project is said to be code named E2 and is just in its initial stage at its parent company - Suzuki Motors' Japanese plant.
Story first published: Monday, July 2, 2012, 14:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark