ಹೊಸ ಮಾರುತಿ ವ್ಯಾಗನಾರ್ ಪ್ರೊ ಕಾರು ರಸ್ತೆಗೆ

Posted By:
To Follow DriveSpark On Facebook, Click The Like Button
Maruti Wagon R Pro Launched
ಎತ್ತರದ ಹುಡುಗ ಖ್ಯಾತಿಯ ವ್ಯಾಗನಾರ್ ಕಾರಿನ ಹೊಸ ಆವೃತ್ತಿಯೊಂದನ್ನು ಮಾರುತಿ ಸುಜುಕಿ ಪರಿಚಯಿಸಿದೆ. ನೂತನ ಸ್ಪೆಷಲ್ ಅಡಿಷನ್ ವ್ಯಾಗನಾರ್ ಪ್ರೊ ಆವೃತ್ತಿಯು ಹತ್ತು ಹಲವು ಹೊಸ ಆಕ್ಸೆಸರಿಗಳನ್ನು ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು 30 ಸಾವಿರ ರು. ಮೌಲ್ಯದ ಹೊಸ ಆಕ್ಸೆಸರಿಗಳನ್ನು ನೂತನ ವ್ಯಾಗನಾರಿಗೆ ಅಳವಡಿಸಿದೆ. ಆದರೆ ಕಂಪನಿಯು ಹಳೆಯ ವ್ಯಾಗನಾರ್ ಕಾರಿಗಿಂತ ನೂತನ ಕಾರಿನ ದರವನ್ನು ಕೇವಲ 20 ಸಾವಿರ ರು.ನಷ್ಟು ಹೆಚ್ಚಿಸಿದೆ. ಹೀಗಾಗಿ ಗ್ರಾಹಕರಿಗೆ ಸುಮಾರು 10 ಸಾವಿರ ರು. ಲಾಭವಾಗಲಿದೆ.

ಮಾರುತಿ ಸುಜುಕಿ ಕಂಪನಿಯು ನೂತನ ವ್ಯಾಗನಾರ್ ಪ್ರೊ ಆವೃತ್ತಿಗೆ ಭರ್ಜರಿ ಪ್ರಚಾರವನ್ನು ಕೊಡುತ್ತಿದೆ. "ಲಿಮಿಟೆಡ್ ಅಡಿಷನ್, ಅನ್ ಲಿಮಿಟೆಡ್ ಸ್ಮಾರ್ಟ್ ನೆಸ್" ಎಂಬ ವಾಕ್ಯದ ಜಾಹೀರಾತುಗಳು ಎಲ್ಲೆಲ್ಲೂ ಕಾಣುತ್ತಿದೆ.

ಹೊಸ ವ್ಯಾಗನಾರ್ ಕಾರಿನಲ್ಲಿ ಹೊಸತು ಏನಿದೆ?

* ಹೊಚ್ಚಹೊಸ ಗ್ರಾಫಿಕ್ಸ್

* ರಿಯರ್ ಸ್ಪಾಯ್ಲರ್

* ಮುಂಭಾಗ ಮತ್ತು ಹಿಂಭಾಗಕ್ಕೆ ಬಂಪರ್ ರಕ್ಷಕ

* ಕಾರು ಪರ್ಫ್ಯೂಮ್

* ವೀಲ್ ಕವರ್

* ಸೈಡ್ ಮೋಲ್ಡಿಂಗ್

* ಹದಿನಾರು ಸೆಂ.ಮೀ. ನಾಲ್ಕು ವೇ ಸ್ಪೀಕರ್ಸ್

* ಸಾಮಾನ್ಯ ಮ್ಯಾಟ್

* ಎರಡು ಟೂನಿನ ನೂತನ ಸೀಟು ಕವರ್

* ಯುಎಸ್ ಬಿ ಡಬಲ್ ಡಿನ್ ಮ್ಯೂಸಿಕ್ ಸಿಸ್ಟಮ್

ವ್ಯಾಗನಾರ್ ಕಾರು ಸಿಟಿ ರಸ್ತೆಯಲ್ಲಿ 16.1 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಸುಮಾರು 20.8 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 998ಸಿಸಿಯ ಮೂರು ಸಿಲಿಂಡರಿನ 1.0ಲೀಟರ್ ಐ3 ಪೆಟ್ರೋಲ್ ಕೆ10 ಬಿ ಎಂಜಿನ್ ಹೊಂದಿದೆ. ಇದರ ಆರಂಭಿಕ ದರ: 3.47 ಲಕ್ಷ ರು. ( ವ್ಯಾಗನಾರ್ ವಿಮರ್ಶೆ ಓದಿ )

ಓದಿ: ರಮ್ಯಳಿಗೆ ಒಲಿದ ಎತ್ತರದ ಹುಡುಗ-ವ್ಯಾಗನಾರ್

English summary
Maruti Suzuki, amidst all the chaos at the Manesar plant, has launched a limited edition Wagaon R Pro. The limited Pro edition Wagon R Pro, is offered with a host of new features. The company is offering the limited edition features over the standard variant's price at INR 20,000.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark