ಬೆಂಗಳೂರಲ್ಲಿ ಟಿಂಟೆಡ್ ಗ್ಲಾಸ್ ಉಲ್ಲಂಘನೆಗೆ ದಂಡ ಯಾವಾಗ?

ಕಾರಿನ ಕಿಟಕಿಗಳಿಗೆ ಅನಮತಿ ನೀಡಿರುವುದಕ್ಕಿಂತ ಹೆಚ್ಚು ಗಾಢವಾಗಿ ಟಿಂಟೆಡ್ ಗ್ಲಾಸ್ ಹಾಕಿದ್ದರೆ ಮೇ 19ರಿಂದ ನಿಮಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಲಿದ್ದಾರೆ. ಹೊಸ ನಿಯಮದ ಪ್ರಕಾರ ಮುಂಭಾಗದ ಮತ್ತು ಹಿಂಭಾಗದ ಗಾಜು ಶೇಕಡ 70ರಷ್ಟು ಪಾರದರ್ಶಕವಾಗಿರಬೇಕು. ಸೈಡ್ ಗಾಜು ಶೇಕಡ 50ರಷ್ಟು ಪಾರದರ್ಶಕವಾಗಿರಬೇಕು.

Bangalore darktinted glass cars attract penalty

"ಬೆಂಗಳೂರಿನಲ್ಲಿ ಶೇಕಡ 80-90ರಷ್ಟು ಕಾರುಗಳು ಇಂತಹ ಗಾಢ ಬಣ್ಣದ ಟಿಂಟೆಡ್ ಗ್ಲಾಸ್ ಬಳಸುತ್ತಿವೆ. ಅಪರಾಧಿಗಳು ಟಿಂಟೆಡ್ ಗ್ಲಾಸಿನಲ್ಲಿ ತಪ್ಪಿಸಿಕೊಳ್ಳುವ ಅಪಾಯ ಹೆಚ್ಚು. ಟ್ರಾಫಿಕ್ ಪೊಲೀಸರಿಗೂ ಟಿಂಟೆಡ್ ಗ್ಲಾಸ್ ಕಾರಿನೊಳಗೆ ವೀಕ್ಷಣೆ ಕಷ್ಟ ಸಾಧ್ಯ" ಎಂದು ಟ್ರಾಫಿಕ್ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತ ಎಂ.ಎ. ಸಲೀಂ ಹೇಳಿದ್ದಾರೆ.

1989ರ ವಾಹನ ಕಾಯಿದೆಯಲ್ಲಿ ಸೂಚಿಸಿದಂತೆ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ನಿಷೇಧಿಸುವ ಕಾನೂನನ್ನು ಮೇ 4ರಿಂದ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಇತ್ತೀಚೆಗೆ ಕೋರ್ಟ್ ಆದೇಶಿಸಿದೆ.

ಈ ಕಾನೂನನ್ನು ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ರಾಜ್ಯದಲ್ಲಿ ಮೇ 26ರ ನಂತರ ಟಿಂಟೆಡ್ ಗ್ಲಾಸ್ ಇದ್ದರೆ ದಂಡ ಕಟ್ಟುವುದು ಅನಿವಾರ್ಯ. ಝಡ್ ಮತ್ತು ಝಡ್ ಪ್ಲಸ್ ಭದ್ರತೆ ಇರುವರಿಗೆ ಮಾತ್ರ ನೂತನ ಟಿಂಟೆಡ್ ಗ್ಲಾಸ್ ಕಾನೂನಿನಲ್ಲಿ ವಿನಾಯಿತಿ ನೀಡಲಾಗಿದೆ. ಅಂದರೆ ಮುಖ್ಯ ಮಂತ್ರಿ ಮತ್ತು ರಾಜ್ಯಪಾಲ ಮುಂತಾದ ಪ್ರಮುಖ ವಿಐಪಿಗಳು ಟಿಂಟೆಡ್ ಗ್ಲಾಸ್ ಬಳಸಬಹುದು.

ಟಿಂಟೆಡ್ ಗ್ಲಾಸ್ ಕಾನೂನು ಉಲ್ಲಂಘನೆ ಮಾಡಿದವರಿಗೆ ಕೇಂದ್ರ ಮೋಟರ್ ವಾಹನ ಕಾಯಿದೆ 92 ಮತ್ತು 100 ಪರಿಚ್ಛೇದದ ಸೆಕ್ಷನ್ 177ರ ಅನ್ವಯ ಪ್ರಕರಣ ದಾಖಲಿಸಲು ಅವಕಾಶವಿದೆ. ಹೀಗಾಗಿ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸದಿರಿ.

Most Read Articles

Kannada
English summary
Bangalore Traffic Police informed to all vehicle owners to remove black film or dark tinted glass immediately. From May 19 onwards darktinted glass cars attract penalty. Black film of any transparency is not allowed.
Story first published: Wednesday, June 20, 2012, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X