ನಮ್ಮೂರ ರಸ್ತೆಗೆ ಎಸ್ಎಲ್350 ಬಂದ್ರೆ ಏನಾದೀತು?

Posted By:
ಕನ್ವರ್ಟಿಬಲ್ ಯಾನೆ ಮೇಲ್ಚಾವಣಿ ತೆರೆದ ಕಾರುಗಳು ಯಾವತ್ತಿಗೂ ಸ್ಪೆಷಲ್. ಆದ್ರೆ ನಮ್ಮ ರಸ್ತೆಯಲ್ಲಿ ವಿದೇಶಗಳಂತೆ ಮೇಲ್ಚಾವಣಿ ತೆರೆದ ಕಾರುಗಳು ಕಾಣಸಿಗುವುದು ಅಪರೂಪ. ಪಕ್ಕದಲ್ಲಿ ಸಾಗುವ ಬಸ್ ನಲ್ಲಿದ್ದ ವ್ಯಕ್ತಿ ಫೂಪ್ ... ಅಂತ ಯಾವಾಗ ಪಾನ್ ಉಗುಳುತ್ತಾನೋ.. ಯಾವನಿಗೊತ್ತು?. ಇಲ್ಲಿನ ಧೂಳಿಗೆ, ವಾತಾವರಣಕ್ಕೆ ಕನ್ವರ್ಟಿಬಲ್ ಅಷ್ಟು ಸೂಕ್ತವಲ್ಲ.

ಆದರೂ ಬೆರಳೆಣಿಕೆಯ ಕಾರುಗಳು ಟಾಪ್ ಇಲ್ಲದೇ ರಸ್ತೆಯಲ್ಲಿ ಆಗೋಮ್ಮೆ ಈಗೊಮ್ಮೆ ಕಾಣಸಿಗುತ್ತವೆ. ಹೊಸದಾಗಿ ಈ ಸೆಗ್ಮೆಂಟಿಗೆ ಯಾವುದಾದರೂ ಕಾರು ಬಂದಿದೆಯೇ ಎಂದು ಹುಡುಕಿದರೆ ಕಣ್ಣಿಗೆ ಕಾಣುವುದು ಮರ್ಸಿಡಿಸ್ ಬೆಂಝ್ ಕಂಪನಿಯ ಎಸ್ಎಲ್350. ಭಾರತದ ರಸ್ತೆಯ ಗುಣಮಟ್ಟಕ್ಕೆ ಹೋಲಿಸಿದರೆ ಇಂತಹ ಕಾರು ಬೇಕಿಲ್ಲ. ಆದ್ರೂ ದುಡ್ಡು ಜಾಸ್ತಿ ಇರುವರು ಖರೀದಿಸಿ ಇಟ್ಕೋಬಹುದು.

ಮರ್ಸಿಡಿಸ್ ಬೆಂಝ್ ಎಲ್350 ಸೌಂದರ್ಯ ನೋಡಿ ಮೋಸಹೋಗುವ ಛಾನ್ಸ್ ಇದೆ. ಯಾಕೆಂದರೆ ಇದರ ಎಂಜಿನ್ ನೋಡಿದಾಗ ಇದೆಂಥ ಸ್ಪೋರ್ಟ್ ಕಾರು ಎನಿಸದೆ ಇರದು. ಅಸಲಿಗೆ ಇದು ಸ್ಪೋರ್ಟ್ ಕಾರೇ ಅಲ್ಲ. ಇದು 3.5 ಲೀಟರಿನ 316 ಹಾರ್ಸ್ ಪವರಿನ ಎಂಜಿನ್ ಹೊಂದಿದೆ. ಅಂದ್ರೆ ಇದರ ಎಂಜಿನ್ ಸಾಮರ್ಥ್ಯ ಬೆಂಝ್ ಎಸ್ಎಲ್ಕೆ350 ಕಾರಿಗಿಂತಲೂ ಕಡಿಮೆ. ಥಕ್..

ಈ ಕಾರು ಭಾರ ಹೆಚ್ಚಿದೆ. ಇದರ ಕರ್ಬ್ ತೂಕ 1.8 ಟನ್. ಬೆಂಝ್ ಎಸ್ಎಲ್ಕೆ ಕಾರಿಗಿಂತ 300 ಕೆಜಿ ಹೆಚ್ಚು ತೂಕವಿದೆ. 7 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದ್ದರೂ ಪ್ರತಿಗಂಟೆಗೆ 100 ಕಿ.ಮೀ. ವೇಗ ಪಡೆಯಲು 8.09 ಸೆಕೆಂಡ್ ಪಡೆದುಕೊಳ್ಳುತ್ತದೆ. ಕೊಂಚ ಜಾಸ್ತಿ ಆಯ್ತು ಅಲ್ವ? ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಹೋಗಬಹುದು.

ಹಾಗಂತ ಇದು ಕೆಟ್ಟ ಕಾರೇನು ಅಲ್ಲ. ಇದರ ಚಾಲನೆ ಗುಣಮಟ್ಟ ಆಕರ್ಷಕ. ಇದರ ವಿನ್ಯಾಸ ಸೌಂದರ್ಯವೇ ಸೂಪರ್ಬ್. ಮರ್ಸಿಡಿಸ್ ಬೆಂಝ್ ಕಾರುಗಳು ಯಾವತ್ತಿಗೂ ದುಬಾರಿ. ಹೀಗಾಗಿ ಇದರ ದೆಹಲಿ ಎಕ್ಸ್ ಶೋರೂಂ ದರ 90 ಲಕ್ಷ ರುಪಾಯಿ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Mercedes Benz SL350 Convertible Review. Latest edition V6 engined SL 350 is looks Superb. Delhi Ex-showroom Price Rs 90 Lakh.
Story first published: Wednesday, March 14, 2012, 11:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark