ಶೂಮೇಕರ್ ಎಫ್ 1 ರೇಸ್ ಗೆ ಮತ್ತೆ ವಿದಾಯ

Posted By:
Michael Schumacher To Call It Quits Again
ಟೋಕಿಯೊ, ಅ.5: ಫಾರ್ಮೂಲಾ ಒನ್ ರೇಸ್ ನ ಅಪ್ರತಿಮ ಚಾಲಕ ಜರ್ಮನಿಯ ಮೈಕಲ್ ಶೂಮೇಕರ್ ಮತ್ತೊಮ್ಮೆ ಎಫ್ 1 ರೇಸ್ ಗೆ ವಿದಾಯ ಹೇಳುತ್ತಿದ್ದಾರೆ. ಶುಮಿ ಋತುವಿನ ಅಂತ್ಯದ ನಂತರ ಫಾರ್ಮುಲಾ ಒನ್ ಕ್ರೀಡೆಗೆ ವಿದಾಯ ಹೇಳುವುದು ಖಚಿತವಾಗಿದೆ.

ಏಳು ಬಾರಿ ವಿಶ್ವ ಫಾರ್ಮುಲಾ ಒನ್ ಚಾಂಪಿಯನ್ ಶೂಮೇಕರ್ ಈ ವಿಷಯವನ್ನು ಗುರುವಾರ ಜಪಾನ್ ಗ್ರ್ಯಾನ್ ಪ್ರೀಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಶೂಮೇಕರ್ ಅವರ ಸ್ಥಾನವನ್ನು ಬ್ರಿಟನ್ ಲೂಯಿಸ್ ಹ್ಯಾಮಿಲ್ಟನ್ 2013 ರ ಋತುವಿನ ಪ್ರಾರಂಭದಿಂದ ತುಂಬಲಿದ್ದಾರೆ ಎಂದು ಶೂಮೇಕರ್ ಪ್ರತಿನಿಧಿಸುತ್ತಿರುವ ಮರ್ಸಿಡಿಸ್ ತಂಡ ಕಳೆದ ವಾರ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಶೂಮೇಕರ್ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.

43 ವರ್ಷದ ಶೂಮೇಕರ್ ಅವರು ಬೆನೆಟ್ಟನ್, ಫೆರಾರಿ ನಂತರ ಮರ್ಸಿಡಿಸ್ ಸಂಸ್ಥೆ ರೇಸ್ ಕಾರು ಚಾಲಕರಾಗಿದ್ದಾರೆ. ಪ್ರಸ್ತುತ ರೋಸ್ ಬರ್ಗ್ ಜೊತೆ ಮರ್ಸಿಡಿಸ್ ಜಿಪಿ ಟೀಂ ಸದಸ್ಯರಾಗಿದ್ದಾರೆ. 1994,1995,2000,2001,2002,2003 ಹಾಗೂ 2004ರಲ್ಲಿ ಎಫ್ 1 ಚಾಂಪಿಯನ್ ಆಗಿದ್ದರು.

ಎಫ್ 1 ರೇಸ್ ನಲ್ಲಿ ಅನೇಕ ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದ ಶುಮಿ, ಹಾಲಿ ಚಾಲ್ತಿಯಲ್ಲಿರುವ ಚಾಲಕರ ಪೈಕಿ ಅಗ್ರಗಣ್ಯರಾಗಿದ್ದಾರೆ.

2006ರಲ್ಲಿ ನಿವೃತ್ತಿ ಘೋಷಿಸಿದ್ದ ಶೂಮಾಕರ್, 2010ರಲ್ಲಿ ಅವರು ರೇಸ್ ವಾಪಸ್ಸಾಗಿದ್ದರು. ರೇಸ್ ನಲ್ಲಿ ಮತ್ತೊಮ್ಮೆ ತೊಡಗಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಬಲವಂತವಾಗಿ ರೇಸ್ ಮಾಡಿದರೆ 100% ನ್ಯಾಯ ಸಲ್ಲಿಸಲು ಸಾಧ್ಯವಿಲ್ಲ ಹಾಗಾಗಿ ನಿವೃತ್ತಿಯೇ ಸೂಕ್ತ ಎಂದೆನಿಸಿದೆ.

ಪ್ರಸಕ್ತ ಋತುವಿನ ಕೊನೆಯ ರೇಸ್ ಆಗಿರುವ ಬ್ರೆಜಿಲ್ ಗ್ರಾನ್ ಪ್ರೀ ನವೆಂಬರ್ 25 ರಂದು ನಡೆಯಲಿದೆ. ಈ ರೇಸ್ ಶುಮಾಕರ್ ಅವರ ವೃತ್ತಿಜೀವನದ ಅಂತಿಮ ರೇಸ್ ಆಗಲಿದೆ.

English summary
The 43 year old seven time world champion, Schumacher will retire from Formula 1 at the end of this season. Do you think it was high time for Schumacher to quit the F1 playing field?

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark