ನೂತನ ಮಿಟ್ಸುಬಿಸಿ ಔಟ್ಲಾಂಡರ್ ಅನಾವರಣ

Posted By:
 New Mitsubishi Outlander 2012 unveiled
ಮಿಟ್ಸುಬಿಸಿ ಕಂಪನಿಯು ನೂತನ ಐಷಾರಾಮಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಔಟ್ಲಾಂಡರ್ ನ್ನು ಅನಾವರಣ ಮಾಡಿದೆ. 2012ರ ಔಟ್ಲಾಂಡರ್ ಆವೃತ್ತಿಯು ಸಾಂಪ್ರಾದಾಯಿಕ ಮತ್ತು ಹೈಬ್ರಿಡ್ ಅವತರಣಿಕೆಯಲ್ಲಿ ದೊರಕುತ್ತದೆ.

ನೂತನ ಔಟ್ಲಾಂಡರ್ ಕಾರನ್ನು ಕಂಪನಿಯು ಜಿನಿವಾ ಮತ್ತು ಟೊಕಿಯೊ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು. ಹಳೆಯ ಔಟ್ಲಾಂಡರ್ ಆವೃತ್ತಿಯ ಎಂಜಿನನ್ನು ಬದಲಾಯಿಸಿ ನೂತನ ಆವೃತ್ತಿಯನ್ನು ಹೊರತರಲಾಗಿದೆ. ನೂತನ ಆವೃತ್ತಿಗಳಿಗೆ ಹೆಚ್ಚು ದಕ್ಷತೆ ಮತ್ತು ಪರಿಷ್ಕೃತ 2.0 ಲೀಟರಿನ ಎಂಐವಿಇಕೆ ಪೆಟ್ರೋಲ್ ಮತ್ತು 2.2 ಲೀಟರಿನ ಎಂಐವಿಸಿಸಿ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ನೂತನ ಔಟ್ಲಾಂಡರ್ ಕಾರು ಸ್ಟಾಪ್-ಸ್ಟಾರ್ಟ್ ಸಿಸ್ಟಮ್, ಆಕ್ಟಿವ್ ಕ್ರೂಷ್ ಕಂಟ್ರೋಲ್, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೇರಿದಂತೆ ಹತ್ತು ಹಲವು ಫೀಚರುಗಳನ್ನು ಹೊಂದಿದೆ. ಪರಿಸರ ಸ್ನೇಹಿ ಸವಾರಿಗೆ ಸೂಕ್ತವಾಗಿರುವ ನೂತನ ಎಕೊ ಡ್ರೈವ್ ಮೂಡ್ ಸಿಸ್ಟಮ್ ಕೂಡ ಇದರಲ್ಲಿದೆ.

ಹಳೆಯ ಆವೃತ್ತಿಗಿಂತ ನೂತನ ಔಟ್ಲಾಂಡರ್ ಸಾಕಷ್ಟು ಅಪ್ ಗ್ರೇಡ್ ಆಗಿ ರಸ್ತೆಗಿಳಿಯಲಿದೆ. ಅಂದರೆ ಹೊಸ ಗ್ರಾಫಿಕ್ಸ್ ಗಳು, ಫಾಗ್ ಲ್ಯಾಂಪ್ ಮತ್ತು ಹೆಡ್ ಲ್ಯಾಂಪಿನ ನೂತನ ವಿನ್ಯಾಸ ಇರುವ ನಿರೀಕ್ಷೆಯಿದೆ. ನೂತನ ಕಾರು ಶೋರೂಂಗೆ ತಲುಪುದ್ಯಾವಾಗ ಎಂಬ ಪ್ರಶ್ನೆಗೆ ಕಂಪನಿ ಇನ್ನೂ ಉತ್ತರಿಸಿಲ್ಲ.

English summary
New Mitsubishi Outlander 2012 unveiled. New Outlander coming with 2.0-litre MIVEC petrol and 2.2-litre MIVEC clean diesel engine.
Story first published: Monday, February 13, 2012, 17:50 [IST]
Please Wait while comments are loading...

Latest Photos