ಸೆಕೆಂಡ್ ಹ್ಯಾಂಡ್ ವಾಹನಗಳ ಕರಾಳ ಇತಿಹಾಸ

ನದಿಮೂಲ ಋಷಿಮೂಲ ಹುಡುಕಬಾರದಂತೆ, ಆದ್ರೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಮಾತ್ರ ಆ ಕಾರಿನ ಮೂಲ ಹುಡುಕಿದರೆ ಒಳಿತು. ಯಾಕೆಂದರೆ ಹೆಚ್ಚಿನ ಸೆಕೆಂಡ್ ಹ್ಯಾಂಡ್ ಕಾರುಗಳ ಇತಿಹಾಸ ಸರಿಯಾಗಿರೊದಿಲ್ವಂತೆ. ಹೀಗಂತ ನೂತನ ಸಮೀಕ್ಷೆಯೊಂದು ಹೇಳಿದೆ.

ಹತ್ತು ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿ ಒಂಬತ್ತು ಕಾರುಗಳ ಇತಿಹಾಸ ಅಷ್ಟೇನೂ ಉತ್ತಮವಾಗಿರುವುದಿಲ್ಲವೆಂದು ಇಂಗ್ಲೆಂಡಿನಲ್ಲಿ ನಡೆಸಿದ ನೂತನ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಉದಾಹರಣೆಗೆ ಹತ್ತು ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿ ಸುಮಾರು ಮೂರು ಕಾರುಗಳು ಕದ್ದ ಮಾಲು ಆಗಿರಬಹುದಂತೆ. ಅಥವಾ ಈ ಸಕೆಂಡ್ ಹ್ಯಾಂಡ್ ಕಾರುಗಳು ಬ್ಯಾಂಕ್ ಸಾಲ ಕಟ್ಟಲಾಗದೇ ಜಪ್ತಿ ಮಾಡಲ್ಪಟ್ಟ ಕಾರುಗಳಾಗಿರಬಹುದು.

ಶೇಕಡ 88ರಷ್ಟು ಸೆಕೆಂಡ್ ಹ್ಯಾಂಡ್ ಕಾರುಗಳ ಇತಿಹಾಸ ಕೆಟ್ಟದಾಗಿರುತ್ತದೆ ಎಂದು ಎಕ್ಸ್ ಪೀರಿಯರನ್ ಸಮೀಕ್ಷೆ ತಿಳಿಸಿದೆ. ಇಂಗ್ಲೆಂಡಿನಲ್ಲಿ ಹೆಚ್ಚು ಜನರು ರೆನೊ, ಫೋಕ್ಸ್ ವ್ಯಾಗನ್ ಮುಂತಾದ ಕಂಪನಿಗಳ ಕಾರು ಖರೀದಿಸುತ್ತಾರೆ. ಆದರೆ ಸಾಲ ತೀರಿಸಲಾರದೇ ಈ ಕಾರುಗಳನ್ನು ಬ್ಯಾಂಕುಗಳು ಜಪ್ತಿ ಮಾಡುವ ಪ್ರಮಾಣ ಹೆಚ್ಚಿದೆ ಎಂದು ಸಮೀಕ್ಷೆ ಅಂಕಿಅಂಶ ಸಮೇತ ವಿವರಿಸಿದೆ.

ಕಳೆದ ವರ್ಷ ಮಾರಾಟಗೊಂಡ ಸುಮಾರು 10 ಸಾವಿರ ಸೆಕೆಂಡ್ ಹ್ಯಾಂಡ್ ಕಾರುಗಳ ಇತಿಹಾಸ ಕೆದಕಿ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಹೆಚ್ಚಿನ ಕಾರುಗಳ ಇತಿಹಾಸ ಸರಿಯಾಗಿಲ್ಲವೆಂಬ ಅಂಶ ಬಹಿರಂಗಗೊಂಡಿದೆ. "ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ಅದರ ಪೂರ್ವಾಪರ ಕೆದಕುವುದು ಒಳ್ಳೆಯದು" ಎಂದು ಎಕ್ಸ್ ಪೀರಿಯನ್ ವಕ್ತಾರರು ಹೇಳಿದ್ದಾರೆ.

ಏನು ಮಾಡಬಹುದು? ಸೆಕೆಂಡ್ ಹ್ಯಾಂಡ್ ವೆಹಿಕಲ್ ಖರೀದಿಸುವ ಮುನ್ನ vahan ಅಂತ ಬರೆದು ಒಂದು space ನೀಡಿ ಯಾವುದೇ ಸ್ಪೇಸ್ ನೀಡದೇ ವಾಹನದ ರಿಜಿಸ್ಟರ್ ನಂಬರ್ ಬರೆದು 09212357123 ನಂಬರಿಗೆ ಎಸ್ಎಂಎಸ್ ಸಂದೇಶ ಕಳುಹಿಸಿರಿ. ಕೆಲವೇ ಸೆಕೆಂಡಿನಲ್ಲಿ ನೀವು ಬಯಸಿದ ವಾಹನದ ವಿವರ ನಿಮ್ಮ ಮೊಬೈಲಿಗೆ ಬಂದು ಬೀಳುತ್ತದೆ.

ಆದರೆ ಸೆಕೆಂಡ್ ಹ್ಯಾಂಡ್ ವಾಹನದ ಪೂರ್ಣ ಮಾಹಿತಿ ನಿಮಗೆ ಈ ಎಸ್ ಎಂಎಸ್ ನಲ್ಲಿ ದೊರಕದು. ಅದಕ್ಕಾಗಿ ಸೆಕೆಂಡ್ ಹ್ಯಾಂಡ್ ಖರೀದಿಸುವಾಗ ವಹಿಸಬೇಕಾದ ಎಚ್ಚರಿಕೆಗಳೇನು ಎನ್ನುವುದಕ್ಕೆ ಈ ಕೆಳಗಿನ ಸಲಹೆ ಓದಿ.

Most Read Articles

Kannada
English summary
A study on used cars in UK have found that nine out of ten cars do not have a pleasant history. The study based on around 10,000 used cars found that every three out of ten cars sold were either stolen or written off and refurbished or with bank loans pending. Interestingly, the study says that 93% of Renault
Story first published: Thursday, June 28, 2012, 14:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X