ಇವಾಲಿಯಾ vs ಇನ್ನೋವಾ; ಬೆಸ್ಟ್ ಎಂಪಿವಿ ಯಾವುದು?

Posted By:

ನೀವು ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಖರೀದಿಸಲು ಯೋಜನೆ ಹಾಕಿಕೊಂಡಿದ್ದೀರಾ? ಹಾಗಿದ್ದರೆ ಬನ್ನಿ ದೇಶದಲ್ಲಿ ದೊರಕುತ್ತಿರುವ ಮುಂಚೂಣಿಯ ಎಂಪಿವಿ ಕಾರು ಹಾಗೂ ಅವು ನೀಡಲಿರುವ ಸೌಲಭ್ಯಗಳ ಬಗ್ಗೆ ನಾವಿಂದು ಚರ್ಚಿಸಲಿದ್ದೇವೆ.

ಅಂದ ಹಾಗೆ ನಿಸ್ಸಾನ್ ಇವಾಲಿಯಾ ಹಾಗೂ ಟೊಯೊಟಾ ಇನ್ನೋವಾ ನಡುವೆ ಯಾವುದನ್ನು ಖರೀದಿಸುವುದೆಂಬ ಗೊಂದಲ ನಿಮ್ಮನ್ನು ಕಾಡುತ್ತಿರಬಹುದು. ದೇಶದ ಗ್ರಾಹಕರು ಮೊದಲು ದರದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಆ ಬಳಿಕ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಂದ ಹಾಗೆ ಇವಾಲಿಯಾ ಹಾಗೂ ಇನ್ನೋವಾ ಎಂಪಿವಿ ಕಾರುಗಳು ಸ್ಪರ್ಧಾತ್ಮಕ 10 ಲಕ್ಷ ಅಸುಪಾಸಿನಲ್ಲಿ ದೊರಕುತ್ತಿವೆ.

ದೇಶದಲ್ಲಿ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾಗೆ ಜಪಾನ್ ಕಾರು ತಯಾರಕರಾದ ನಿಸ್ಸಾನ್ ಇವಾಲಿಯಾದಿಂದ ಪ್ರಬಲ ಪೈಪೋಟಿಯಿದೆ. ಹಾಗಾದರೆ ನಾವಿಂದು ಅದರ ಬೆಲೆ, ಹೊರಂಗಣ, ಸಾಮರ್ಥ್ಯ, ನಿರ್ವಹಣೆ ಮತ್ತು ಅನುಕೂಲತೆಯ ಆಧಾರದಲ್ಲಿ ಹೋಲಿಕೆ ಮಾಡಲಿದ್ದೇವೆ.

ದರ ಮಾಹಿತಿ

ದರ ಮಾಹಿತಿ

ನಾಲ್ಕು ಆವೃತ್ತಿಗಳಲ್ಲಿ ಲಭ್ಯವಿರುವ ನಿಸ್ಸಾನ್ ಇವಾಲಿಯಾದ ಅತ್ಯಂತ ಕಡಿಮೆ ವೆರಿಯಂಟ್ ಆದ ಎಕ್ಸ್‌ಇ ಆವೃತ್ತಿಗೆ 8.49 ಲಕ್ಷ ರೂಪಾಯಿಗಳಿದ್ದು, ಟಾಪ್ ಎಂಡ್ ಎಕ್ಸ್‌ವಿ ವೆರಿಯಂಟ್‌ಗೆ 9.99 ಲಕ್ಷ ರೂಪಾಯಿಗಳಿವೆ. ಮತ್ತೊಂದೆಡೆ ಬರೋಬ್ಬರಿ 23 ವೆರಿಯಂಟ್‌ಗಳಲ್ಲಿ ಲಭ್ಯವಿರುವ ಟೊಯೊಟಾ ಇನ್ನೋವಾ ಎಂಟ್ರಿ ಲೆವೆಲ್ ವೆರಿಯಂಟ್‌ 9.09 ಲಕ್ಷ ರೂಪಾಯಿಗಳಿಗೆ ಲಭ್ಯವಿದ್ದು, ಟಾಪ್ ಎಂಡ್ ವೆರಿಯಂಟ್‌ಗೆ 13.89 ಲಕ್ಷ ರೂಪಾಯಿಗಳಿವೆ. (ಇವೆಲ್ಲವೂ ನವದೆಹಲಿ ಎಕ್ಸ್ ಶೋ ರೂಂ ಬೆಲೆ)

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ನಿಸ್ಸಾನ್ ಹಾಗೂ ರಿನಾಲ್ಟ್ ಕಾರುಗಳಲ್ಲಿ ಕಂಡುಬಂದಿರುವಂತೆಯೇ ಇವಾಲಿಯಾ 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಇದು 85 ಬಿಎಚ್‌ಪಿ ಪೀಕ್ ಪವರ್ ಉತ್ಪಾದಿಸುತ್ತಿದ್ದು, ಮಾಕ್ಸಿಮಮ್ ಟರ್ಕ್ಯೂ 200 ಎನ್‌ಎಂ ಆಗಿದೆ. ಮತ್ತೊಂದೆಡೆ ಟೊಯೊಟಾ ಇನ್ನೋವಾ 2.5 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಟ್ಟಿದೆ.

ಇಂಧನ ದಕ್ಷತೆ

ಇಂಧನ ದಕ್ಷತೆ

ಆಕರ್ಷಕ ಎಂಪಿವಿ ಆಗಿರುವ ನಿಸ್ಸಾನ್ ಇವಾಲಿಯಾ ಪ್ರತಿ ಲೀಟರ್‌ಗೆ 16.5 ಕೀಲೋ ಮೀಟರ್ ಇಂಧನ ದಕ್ಷತೆಯನ್ನು ನೀಡುತ್ತಿದೆ. ಮತ್ತೊಂದೆಡೆ ನಿಸ್ಸಾನ್‌ಗೆ ಹೋಲಿಸಿದರೆ ಬೃಹತ್ ಎಂಜಿನ್ ಹೊಂದಿರುವ ಇನ್ನೋವಾಒಟ್ಟಾರೆಯಾಗಿ ಪ್ರತಿ ಲೀಟರ್‌ಗೆ 11.8 ಕಿಲೋ ಮೀಟರ್ ಮೈಲೇಜ್ ಅಷ್ಟೇ ನೀಡಲು ಶಕ್ತವಾಗಿದೆ.

ನಿರ್ವಹಣೆ

ನಿರ್ವಹಣೆ

ನಿಸ್ಸಾನ್ ಇವಾಲಿಯಾ ಕರ್ಬ್ ವೇಟ್ 200 ಕಿಲೋ ಆಗಿದ್ದು, ಇನ್ನೋವಾಗಿಂತಲೂ ಕಡಿಮೆಯಾಗಿದೆ. ಇದರಿಂದ ಇನ್ನೋವಾಗಿಂತಲೂ ಹೆಚ್ಚು ಪಿಕ್ ಅಪ್ ಗಿಟ್ಟಿಸಲಿರುವ ಇವಾಲಿಯಾ 14.3 ಸೆಕೆಂಡ್‌ಗಳಲ್ಲಿ 0-100 ಕಿಲೋ ಮೀಟರ್ ವೇಗತೆಯನ್ನು ಹೆಚ್ಚಿಸಬಲ್ಲದು. ಮತ್ತೊಂದೆಡೆ ಇನ್ನೋವಾ 0-100 ವೇಗತೆ ಪಡೆಯಲು 17.6 ಸೆಕೆಂಡ್ ತಗಲುತ್ತದೆ.

ನಿರ್ವಹಣೆ

ನಿರ್ವಹಣೆ

ನಿಸ್ಸಾನ್ ಇವಾಲಿಯಾ ಲೊ ಟರ್ನಿಂಗ್ ರೇಡಿಯಸ್‌ನಿಂದಾಗಿ ನಗರ ಪ್ರದೇಶದ ಟ್ರಾಫಿಕ್‌ಗಳಲ್ಲಿ ಥಟ್ಟನೆ ಟರ್ನ್ ಮಾಡಬಹುದಾಗಿದೆ. ಮತ್ತೊಂದೆಡೆ ಕಾರು ಚಲಾಯಿಸುವಾಗ ಇನ್ನೋವಾ ಗಾತ್ರದ ಅನುಭವವಾಗಲಿದೆ.

ಇವಾಲಿಯಾ vs ಇನ್ನೋವಾ

ಆರಾಮಾದಾಯಕ ಆಸನಗಳಿಂದಾಗಿಯೇ ಸಾವಿರಾರು ಜನರ ಮನ ಗೆಲ್ಲುವಲ್ಲಿ ಇನ್ನೋವಾ ಯಶಸ್ವಿಯಾಗಿದೆ. ದೀರ್ಘ ಪ್ರಯಾಣ ಹಾಗೂ ರಫ್ ರೋಡ್‌ಗಳಲ್ಲೂ ಇನ್ನೋವಾ ಹಾಯಾಗಿರುವಂತೆ ಮಾಡುತ್ತದೆ. ಮತ್ತೊಂದೆಡೆ ನಗರ ಪ್ರದೇಶ ಹಾಗೂ ಹೈವೇಗಳಲ್ಲಿ ಇವಾಲಿಯಾ ಆರಾಮದಾಯಕವಾಗಿದೆ. ಆದರೆ ನೀವು ದೀರ್ಘ ಪಯಣಿಸುವುದಾದರೆ ಇನ್ನೋವಾ ಆಯ್ಕೆ ಮಾಡುವುದು ಒಳಿತು.

ಸ್ಥಳಾವಕಾಶ

ಸ್ಥಳಾವಕಾಶ

ನಿಸ್ಸಾನ್ ಇವಾಲಿಯಾದ ಮೊದಲ ಸಾಲಿನಲ್ಲಿ ಇಬ್ಬರು ಹಾಗೂ ಎರಡು ಹಾಗೂ ಮೂರನೇ ಸಾಲಿನಲ್ಲಿ ತಲಾ ಮೂವರಿಗೆ ಕುಳಿತುಕೊಳ್ಳಬಹುದಾಗಿದೆ. ಎರಡು ಹಾಗೂ ಮೂರನೇ ಸಾಲಿನಲ್ಲಿ ಬೆಂಚ್ ಸೀಟ್ ಹೊಂದಿದ್ದು ಅಂತಿಮ ಸಾಲಿನಲ್ಲೂ ಉತ್ತಮ ಹೆಡ್ ರೂಂ ಹೊಂದಿದೆ.

ಸ್ಥಳಾವಕಾಶ

ಸ್ಥಳಾವಕಾಶ

ಇನ್ನೋವಾ ಹಾಗೂ ಇವಾಲಿಯಾ ಬಹುತೇಕ ಉತ್ತಮ ಸ್ಥಳಾವಕಾಶವನ್ನು ಹೊಂದಿದೆ. ಆದರೆ ಟೊಯೊಟಾ ಇನ್ನೋವಾದಲ್ಲಿ ಹೆಚ್ಚಿನ ಸಿಟ್ಟಿಂಗ್ ಅವಕಾಶಗಳಿದ್ದು, ಗ್ರಾಹಕ ಬಯಸಿದ್ದಲ್ಲಿ ಕ್ಯಾಪ್ಟನ್ ಸೀಟ್ ಅಥವಾ ಬೆಂಚ್ ಸೀಟ್ ಅಳವಡಿಸಬಹುದಾಗಿದೆ.

ಲಗ್ಗೇಜ್ ಸ್ಥಳಾವಕಾಶ

ಲಗ್ಗೇಜ್ ಸ್ಥಳಾವಕಾಶ

ಮಲ್ಟಿ ಪರ್ಪಸ್ ವೆಹಿಕಲ್ ಪರಿಗಣಿಸಿದಾಗ ಲಗ್ಗೇಜ್ ಸ್ಥಳಾವಕಾಶ ಮಹತ್ವ ವಹಿಸುತ್ತದೆ. ಮೂರನೇ ರೋದಲ್ಲಿ ಮಡಚುವಂತಹ ಸೀಟ್ ಆಯ್ಕೆಯಿರುವುದರಿಂದ ಇನ್ನೋವಾ ಹಾಗೂ ಇವಾಲಿಯಾದಲ್ಲಿ ಹೆಚ್ಚಿನ ಲಗ್ಗೇಜ್ ಸ್ಪೇಸ್ ದೊರಕುತ್ತದೆ. ಆದರೆ ಪ್ರಾಯೋಗಿಕವಾಗಿ ಯೋಚಿಸಿದಾಗ ಇವಾಲಿಯಾ ಫಲಪ್ರದವಾಗಲಿದೆ.

ಇಂಟಿರಿಯರ್ ಫೀಚರ್

ಇಂಟಿರಿಯರ್ ಫೀಚರ್

ನಿಸ್ಸಾನ್ ಇವಾಲಿಯಾ ಟಾಪ್ ಆಂಡ್ ಮಾಡಲ್ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಏರ್ ಬ್ಯಾಗ್ಸ್, ಮ್ಯೂಸಿಕ್ ಸಿಸ್ಟಂ ಹಾಗೂ ಇತರ ಆಕರ್ಷಕ ಫೀಚರ್‌ಗಳನ್ನು ಹೊಂದಿದ್ದರೂ ಇನ್ನೋವಾ ಇಂಟಿರಿಯರ್ ಜತೆ ಹೋಲಿಸುವಂತಿಲ್ಲ. ಯಾಕೆಂದರೆ ಇದಕ್ಕಿಂತಲೂ ಹೆಚ್ಚಿನ ಫೀಚರ್ ಹೊಂದಿರುವ ಇನ್ನೋವಾ ಕಾರಿನ ಇಂಟಿರಿಯರ್ ನೀವೇ ಅನುಭವಿಸತಕ್ಕದ್ದು.

ಹೊರಂಗಣ ವಿನ್ಯಾಸ

ಹೊರಂಗಣ ವಿನ್ಯಾಸ

ಇವಾಲಿಯಾಗೆ ಹೋಲಿಸಿದರೆ ಟೊಯೊಟಾ ಇನ್ನೋವಾ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಎಲ್ಲ ಅರ್ಥದಲ್ಲೂ ಇವಾಲಿಯಾ ನೋಡಲು ವ್ಯಾನ್ ತರಹನೇ ಇದೆ. ರಿಯರ್ ಸ್ಲೈಡಿಂಗ್ ಡೋರ್ ಇವಾಲಿಯಾ ಪರ ಕೆಲಸ ಮಾಡಿಲ್ಲ.

ಅಂತಿಮ ತೀರ್ಪು

ಅಂತಿಮ ತೀರ್ಪು

ಡ್ರೈವಿಂಗ್ ಪರಿಸ್ಥಿತಿ, ಮೈಲೇಜ್, ನಿರ್ವಹಣೆ ಹಾಗೂ ಸ್ಥಳಾವಕಾಶ ಪರಿಗಣಿಸಿದಾಗ ನಿಸ್ಸಾನ್ ಇವಾಲಿಯಾ ಉತ್ತಮವಾಗಿದೆ. ದರ ಹೋಲಿಸಿದಾಗ ಇವಾಲಿಯಾ ಪರವಾಗಿದ್ದರೂ ಗ್ರಾಹಕನ ಮನ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಖಂಡಿತವಾಗಿಯೂ ಇನ್ನೋವಾ ಇವಾಲಿಯಾಗಿಂತಲೂ ಹೆಚ್ಚು ಮಹಾತ್ವಾಕಾಂಕ್ಷಿ ಕಾರು ಆಗಿದೆ. ಇನ್ನೋವಾ ಹಾಗೂ ನಿಸ್ಸಾನ್ ನಡುವೆ 2 ಲಕ್ಷ ರೂಪಾಯಿಗಳ ವ್ಯತ್ಯಾಸವಿದ್ದರೂ ಎಂಪಿವಿ ಕಾರು ಖರೀದಿ ಗ್ರಾಹಕರು ಟೊಯೊಟಾಗೆ ಮೊದಲ ಆದ್ಯತೆ ನೀಡುವುದು ಉತ್ತಮ.

English summary
The Nissan Evalia has come up tops in terms of mileage, ease of driving, handling and space. Despite the Rs.2 lakh price difference between the Evalia and the Nissan, an MPV buyer might prefer to be seen in the Toyota rather than the Nissan.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark