ಭಾರತದಲ್ಲಿ ಉತ್ಪಾದಿಸಿದ ನಿಸ್ಸಾನ್ ಮೈಕ್ರಾ ವಾಪಸ್

ಜಾಗತಿಕವಾಗಿ ಸುಮಾರು ಎರಡೂವರೆ ಲಕ್ಷ ಮೈಕ್ರಾ ಕಾರುಗಳನ್ನು ಹಿಂಪಡೆಯುವುದಾಗಿ ನಿಸ್ಸಾನ್ ಮೋಟರ್ಸ್ ಪ್ರಕಟಿಸಿದೆ. ಅದರಲ್ಲಿ ಮೇಡ್ ಇನ್ ಇಂಡಿಯಾ ಕಾರುಗಳನ್ನು ಭಾರತದಲ್ಲಿ ಉತ್ಪಾದಿಸಲಾಗಿತ್ತು. ಕಾರಿನ ಮೆಕಾನಿಕಲ್ ಸಮಸ್ಯೆಯೊಂದನ್ನು ಸರಿಪಡಿಸಲು ಈ ಬೃಹತ್ ಹಿಂಪಡೆತಕ್ಕೆ ಕಂಪನಿ ಮುಂದಾಗಿದೆ.

ಮೈಕ್ರಾ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿರುವ ವಾಹನಗಳಾದ ಟಿಡಾ, ಜ್ಯೂಕ್, ಸೆರಾನ, ಪಟ್ರೊಲ್, ಇನ್ಫಿನಿಟಿ ಎಂ ಮತ್ತು ಇನ್ಫಿನಿಟಿ ಕ್ಯೂಎಕ್ಸ್ ಕಾರುಗಳಲ್ಲಿ ಸಮಸ್ಯೆ ಕಂಡುಬಂದಿದೆ. ಇದರಲ್ಲಿ ಫ್ಯೂಯಲ್ ಸೆನ್ಸಾರ್ ನಲ್ಲಿರುವ ಸಮಸ್ಯೆಯಿಂದ ಇಂಧನ ಲೀಕ್ ಆಗುತ್ತಿತ್ತು. ಡೈರೆಕ್ಟ್ ಇಂಜೆಕ್ಷನ್ ಸಿಸ್ಟಮ್ ಇರುವ ಕಾರುಗಳಲ್ಲಿ ಈ ಸಮಸ್ಯೆ ಕಂಡುಬಂದಿತ್ತು.

ಇದರಲ್ಲಿ ಎಲ್ಲಾ 9,600 ಮೈಕ್ರಾ ಕಾರುಗಳನ್ನು ಯುರೋಪ್ ನಲ್ಲಿ ಮಾರಾಟ ಮಾಡಲಾಗಿದೆ. ಇದರಲ್ಲಿ ಯಾವುದೇ ಮೈಕ್ರಾ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿಲ್ಲ. ಆದರೆ ಇದರಲ್ಲಿ ಹೆಚ್ಚಿನ ಕಾರುಗಳು ನಿಸ್ಸಾನ್ ಚೆನ್ನೈ ಘಟಕದಲ್ಲಿ ಉತ್ಪಾದಿಸಲಾಗಿದೆ.

ಎಂಜಿನ್ ನಲ್ಲಿ ಶಬ್ದವುಂಟಾಗುವುದು ಮತ್ತು ಫ್ಯೂಯಲ್ ಸೆನ್ಸಾರಿನಲ್ಲಿ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಹಿಂಪಡೆತ ಮಾಡಲಾಗುವುದು ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಭಾರತದಿಂದ ಅತ್ಯಧಿಕ ಸಂಖ್ಯೆಯಲ್ಲಿ ಮೈಕ್ರಾ ಕಾರುಗಳನ್ನು ನಿಸ್ಸಾನ್ ರಫ್ತು ಮಾಡುತ್ತಿದೆ. ಈಗಾಗಲೇ ಕಂಪನಿಯು 1.36 ಲಕ್ಷ ಮೈಕ್ರಾ ಕಾರುಗಳನ್ನು ಯುರೋಪಿಗೆ ರಫ್ತು ಮಾಡಿದೆ. ಕಂಪನಿಯು ಶೀಘ್ರದಲ್ಲಿ ಸನ್ನಿ ಕಾರುಗಳನ್ನು ಸಹ ರಫ್ತು ಮಾಡಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Nissan Motors has announced a global recall of nearly 250,000 cars and its made in India car, the Micra is part of the recall process. In a statement to the media, the Japanese carmaker has said it would be recalling 249,522 cars across the globe to rectify a mechanical glitch.
Story first published: Friday, February 24, 2012, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X