ಸನ್ನಿ ಡೀಸೆಲ್: ಒಂದುವರೆ ತಿಂಗ್ಳಲ್ಲಿ 4 ಸಾವಿರ ಬುಕ್ಕಿಂಗ್

"ಈಗ ಕಂಪನಿಯು ಸುಮಾರು 25 ಸಾವಿರ ಮೈಕ್ರಾ ಮಾರಾಟ ಮಾಡಿದ್ದು, ನಾಲ್ಕು ಸಾವಿರ ಸನ್ನಿ ಡೀಸೆಲ್ ಬುಕ್ಕಿಂಗ್ ಪಡೆದಿದ್ದೇವೆ" ಎಂದು ನಿಸ್ಸಾನ್ ಸಿಇಒ ಕಿಮಿನೊಡು ತೊಕುಯಮಾ ಹೇಳಿದ್ದಾರೆ.
ಕಂಪನಿಯು ಮಾರ್ಚ್ ತಿಂಗಳಲ್ಲಿ ನೂತನ ಸನ್ನಿ ಡೀಸೆಲ್ ಕಾರನ್ನು ರಫ್ತು ಮಾಡಲಿದೆಯಂತೆ. "ಈಗಾಗಲೇ ಕಂಪನಿಯು ಮೈಕ್ರಾ ಆವೃತ್ತಿಯನ್ನು ರಫ್ತು ಮಾಡುತ್ತಿದ್ದು, ಮುಂದಿನ ಮಾರ್ಚ್ ತಿಂಗಳಲ್ಲಿ ಸನ್ನಿ ಡೀಸೆಲ್ ಆವೃತ್ತಿ ರಫ್ತು ಮಾಡಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಕಂಪನಿಯು ಈಗ ಒರಗಡಂ ಘಟಕದಲ್ಲಿ ಮೈಕ್ರಾ ಮತ್ತು ಸನ್ನಿ ಆವೃತ್ತಿಯನ್ನು ಉತ್ಪಾದಿಸುತ್ತಿದೆ. ಕಂಪನಿಯ ಭವಿಷ್ಯದ ಯೋಜನೆ ಕುರಿತಾದ ಪ್ರಶ್ನೆಗೆ, ನಿಸ್ಸಾನ್ ಚೆನ್ನೈನ ಘಟಕದಲ್ಲಿ ಉತ್ಪಾದನೆ ಹೆಚ್ಚಿಸುವ ಯೋಜನೆ ಹೊಂದಿದೆ" ಎಂದರು.
ಹೂಡಿಕೆ ಯೋಜನೆ ಕುರಿತಾದ ಪ್ರಶ್ನೆಗೆ, "ಕಂಪನಿಯು ಚೆನ್ನೈ ಘಟಕಕ್ಕೆ ಈಗಾಗಲೇ 2,800 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಸದ್ಯದ ವಿಸ್ತರಣಾ ಯೋಜನೆಗಳಿಗೆ ಇಷ್ಟು ಹೂಡಿಕೆ ಸಾಕಾಗಬಹುದು" ಎಂದು ಕಿಮಿನೊಡು ಹೇಳಿದ್ದಾರೆ.


Click it and Unblock the Notifications








