ಪೆಟ್ರೋಲಿಗೆ ಗುಡ್ ಬೈ, ವಾಟರ್ ಕಾರ್ ತಯಾರಿಸಿದ ಪಾಕಿಸ್ತಾನ

ಇಸ್ಲಾಮಾಬಾದ್, ಜು 28: ಪೆಟ್ರೋಲ್, ಡೀಸೆಲ್, ಸಿಎನ್ಜಿ ಕಾರುಗಳಿಗೆ ಗುಡ್ ಬೈ ಹೇಳಿ, ನೀರನ್ನು ಇಂಧನವಾಗಿ ಬಳಸಿಕೊಳ್ಳುವ ಕಾರೊಂದನ್ನು ಪಾಕಿಸ್ತಾನಿ ಎಂಜಿನಿಯರೊಬ್ಬರು ಅಭಿವೃದ್ಧಿಪಡಿಸಿದ್ದಾರೆ. ವಿನೂತನ ವಾಟರ್ ಕಾರ್ ಮೂಲಕ ಎಂಜಿನಿಯರ್ ವಾಕರ್ ಆಹ್ಮದ್ ಜಗತ್ತನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.

ಗುರುವಾರ ಪಾಕಿಸ್ತಾನ ರಾಜಧಾನಿಯಲ್ಲಿ ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಮುಂದೆ ಈ ವಿನೂತನ ಕಾರನ್ನು ಚಲಾಯಿಸಿ ಎಂಜಿನಿಯರ್ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾನೆ. ವಿಶೇಷವೆಂದರೆ ವಾಟರ್ ಕಾರ್ ಪ್ರಾಜೆಕ್ಟಿಗೆ ಪಾಕಿಸ್ತಾನ ಪ್ರಧಾನಿ, ಹಣಕಾಸು ಸಚಿವರು ಸೇರಿದಂತೆ ಎಲ್ಲರೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಾಜೆಕ್ಟಿಗೆ ಸಂಪೂರ್ಣ ಬಂದೋಬಸ್ತ್ ಮಾಡಲಾಗಿದೆ.

"ಪೆಟ್ರೋಲ್ ಅಥವಾ ಸಿಎನ್ಜಿ ಇಂಧನಗಳಿಗೆ ಬದಲಿಯಾಗಿ ನೀರನ್ನು ಈ ಕಾರು ಇಂಧನವಾಗಿ ಬಳಸಿಕೊಳ್ಳುತ್ತದೆ" ಎಂದು ವಾಕರ್ ಆಹ್ಮದ್ ಹೇಳಿದ್ದಾನೆ. ಇದಕ್ಕೆ "ವಾಟರ್ ಫ್ಯೂಯಲ್ ಕಿಟ್ ಪ್ರಾಜೆಕ್ಟ್" ಎಂದು ಹೆಸರಿಡಲಾಗಿದೆ.

ವಾಟರ್ ಫ್ಯೂಯಲ್ ಕಿಟ್ ಪ್ರಾಜೆಕ್ಟ್ ಸಮಿತಿಗೆ ಧಾರ್ಮಿಕ ವ್ಯವಹಾರ ಸಚಿವ ಸೈಯದ್ ಖುರ್ಷಿದ್ ಅಹ್ಮದ್ ಶಾ ಮುಖ್ಯಸ್ಥರಾಗಿದ್ದಾರೆ. ಎಂಜಿನಿಯರ್ ಅಭಿವೃದ್ಧಿಪಡಿಸಿದ ನೂತನ ವಾಟರ್ ಕಾರ್ ಯೋಜನೆಗೆ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಅಹ್ಮದ್ ಶಾ ಹೇಳಿದ್ದಾರೆ.

ನೀರಿನಿಂದ ಚಲಿಸುವ ಈ ಕಾರು ಹೈಡ್ರೊಜನ್ ಬೌಂಡಿಂಗ್ ತಂತ್ರಜ್ಞಾನ ಹೊಂದಿದೆಯಂತೆ. ನೀರನ್ನು ಹೈಡ್ರೊಜನ್ ಗ್ಯಾಸ್ ಆಗಿ ಪರಿವರ್ತಿಸಿ ಕಾರಿನ ಇಂಧನವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ವರದಿಗಳು ಹೇಳಿವೆ.

ವಾಟರ್ ಕಾರ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ವಾಕರ್ ಅಹ್ಮದ್ ನ ಸುರಕ್ಷತೆ ಮತ್ತು ಫಾರ್ಮುಲಾದ ಭದ್ರತೆಗೆ ಸಂಪೂರ್ಣ ಗಮನ ನೀಡುವುದಾಗಿ ಆಹ್ಮದ್ ಶಾ ಹೇಳಿದ್ದಾರೆ. " ನಾವು ಈ ಪ್ರಾಜೆಕ್ಟ್ ಹೊಂದಿದ್ದೇವೆ ಮತ್ತು ಇದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಭರವಸೆ ಹೊಂದಿದ್ದೇವೆ" ಎಂದು ಅವರು ಹೇಳಿದ್ದಾರೆ.

Most Read Articles

Kannada
English summary
Pakistani engineer Waqar Ahmad has built a car that runs on water. He drove his car using water as fuel on Thursday during a demonstration for parliamentarians, scientists and students, Media reported from this Pakistan capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X