ವಿದ್ಯಾರ್ಥಿಗಳ ಸೋಲಾರ್ ಕಾರಿಗೆ ಪ್ರಣಬ್ ಹಸಿರು ನಿಶಾನೆ

Posted By:
ನವದೆಹಲಿ, ಸೆ 5: ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮವೊಂದರಲ್ಲಿ ಡಿಟಿಯು ಪ್ರಯಾಣಿಕ ಸೋಲಾರ್ ಕಾರೊಂದಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಸಿರು ನಿಶಾನೆ ತೋರಿಸಿದ್ದಾರೆ. ಈ ಸೋಲಾರ್ ಕಾರನ್ನು ದೆಹಲಿ ಟೆಕ್ನಾಲಜಿಸ್ ಯುನಿವರ್ಸಿಟಿಯ(ಡಿಟಿಯು) ವಿದ್ಯಾರ್ಥಿಗಳ ತಂಡ ಅಭಿವೃದ್ಧಿಪಡಿಸಿದೆ.

ಯುನಿವರ್ಸಿಟಿಯ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಧೀರಜ್ ಮಿಶ್ರಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸೋಲಾರ್ ಕಾರು ಅಭಿವೃದ್ಧಿಪಡಿಸಿದ್ದಾರೆ. ಈ ಕಾರಲ್ಲಿ ಗಂಟೆಗೆ ಗರಿಷ್ಠ 120 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

ನೂತನ ಡಿಟಿಯು ಸೋಲಾರ್ ಪ್ರಯಾಣಿಕ ಕಾರು ಎರಡು ಸೀಟು ಹೊಂದಿದೆ. ಹೆಚ್ಚುವರಿಯಾಗಿ ಒಂದು ಸೀಟ್ ಅಳವಡಿಸಿಕೊಳ್ಳುವ ಅವಕಾಶವೂ ಇದರಲ್ಲಿದೆ. ವಿಶೇಷ ಫೈಬರ್ ಬಳಕೆಯಿಂದ ಈ ಕಾರು ಹಗುರವಾಗಿದ್ದು, ಕಾರಿನ ದಕ್ಷತೆ ಹೆಚ್ಚಾಗಿದೆ.

ಯುನಿವರ್ಸಿಟಿ ತಂಡ ಅಭಿವೃದ್ಧಿಪಡಿಸಿದ ನೂತನ ಸೋಲಾರ್ ಕಾರನ್ನು ದಕ್ಷಿಣ ಆಫ್ರಿಕಾದಲ್ಲಿ ಸೆಪ್ಟೆಂಬರ್ 15ರಿಂದ 29ರವರೆಗೆ ನಡೆಯಲಿರುವ ಸಸೋಲ್ ಸೋಲಾರ್ ಚ್ಯಾಲೇಂಜ್ ನಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿದೆ.

ಬೆಂಗಳೂರಿನಲ್ಲೊಂದು ಸೋಲಾರ್ ಕಾರು: ಬೆಂಗಳೂರಿನ ಸೈಯೆದ್ ಮುಜಾಕಿರ್ ಅಹ್ಮದ್ ವಿಶೇಷ ಸೋಲಾರ್ ಕಾರೊಂದನ್ನು ಅಭಿವೃದ್ಧಿಪಡಿಸಿದ ಕುರಿತು ಈ ಹಿಂದೆ ಕನ್ನಡ ಡ್ರೈವ್ ಸ್ಪಾರ್ಕ್ ವರದಿ ಮಾಡಿತ್ತು. ಓದಿ: ಬೆಂಗ್ಳೂರು ಅಹ್ಮದ್ ಅಭಿವೃದ್ಧಿಪಡಿಸಿದ ಸೋಲಾರ್ ಕಾರು

English summary
President Pranab Mukherjee flagged off Solar car developed by DTU. Delhi Technological University Students team developed these solar car.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark