ಅಪರೂಪದ ಆಸ್ಟನ್ ಕಾರು ದಾಖಲೆ ಮೊತ್ತಕ್ಕೆ ಹರಾಜು

ಆಸ್ಟನ್ ಮಾರ್ಟಿನ್ ಕಂಪನಿಯ ಅಪರೂಪದ ಕಾರು DB4GT Zagato Sanction II ಕೂಪ್ ದಾಖಲೆಯ ಮೊತ್ತಕ್ಕೆ ಹರಾಜಾಗಿದೆ. ಇಂಗ್ಲೆಂಡಿನ ಬೊನಾಮ್ಸ್ ಹರಾಜು ಸಂಸ್ಥೆಯಲ್ಲಿ ಈ ಕಾರು ಸುಮಾರು 19 ದಶಲಕ್ಷ ಡಾಲರ್ ರುಪಾಯಿಗೆ ಬಿಕರಿಯಾಗಿದೆ.

ಪಿಲ್ ಕೊಲಿನ್ಸ್ ಕಂಪನಿಯ ಮ್ಯಾನೆಜರ್ ಟೊನಿ ಸ್ಮಿತ್ 1991ರಲ್ಲಿ ಈ ಕಾರಿನ ಮಾಲಿಕರಾಗಿದ್ದರು. ಅವರು ಈ ಕಾರನ್ನು ಕೇವಲ 5 ಸಾವಿರ ಮೈಲು ಓಡಿಸಿದ್ದರು. ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಈ ಕಾರನ್ನು ಬಳಸಲಾಗಿತ್ತು.

ಮುಂಬರುವ ದಿನಗಳಲ್ಲಿ ಆಸ್ಟನ್ ಮಾರ್ಟಿನ್ ಸ್ಯಾಕ್ಷನ್ 2 ಕೂಪ್ ಕಾರಿನ ದರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕಂಪನಿಯು ಈ ಕಾರನ್ನು 1960ರಲ್ಲಿ ಉತ್ಪಾದಿಸಿತ್ತು. ಆದರೆ ಕಂಪನಿಯ ನಿರೀಕ್ಷೆಗೆ ತಕ್ಕಂತೆ ಬೇಡಿಕೆ ಕಾಣದ ಹಿನ್ನಲೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು.

ಈ ಕಾರು ಶಕ್ತಿಶಾಲಿ 4.2 ಲೀಟರಿನ 6 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 352 ಅಶ್ವಶಕ್ತಿ ನೀಡುತ್ತದೆ.

ಆಸ್ಟನ್ ಮಾರ್ಟಿನ್ ಸ್ಯಾಕ್ಷನ್ 2 ಕಾರು ಮಾತ್ರವಲ್ಲದೇ ಈ ಹರಾಜು ಪ್ರಕ್ರಿಯೆಯಲ್ಲಿ ಇನ್ನು ಕೆಲವು ಪ್ರಮುಖ ಕಾರುಗಳು ಹರಾಜಾಗಿವೆ. ಅದರಲ್ಲಿ 1962ರ ಡಿಬಿ4 ವಿಂಟೇಜ್ ಕನ್ವರ್ಟಿಬಲ್ ಕಾರು ಸುಮಾರು 6,11,000 ಡಾಲರಿಗೆ ಹರಾಜಾಗಿದೆ.

Most Read Articles

Kannada
English summary
UK's Bonhams auctioneers has sold a rare Aston Martin DB4GT Zagato Sanction II Coupe at a record price of $1.9 million. The 1991 car was owned by Phil Collins' manager, Tony Smith, and has been driven less than 5,000 miles. 
Story first published: Tuesday, May 22, 2012, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X